ನಟ ಉಪೇಂದ್ರ ಬದುಕಿನ ಕಾಲೇಜ್ ಲವ್ ಸ್ಟೋರಿಯೇ ‘ಎ’ ಸಿನಿಮಾಗೆ ಸ್ಫೂರ್ತಿ
ಇಂದು (ಮೇ 17) ‘ಎ’ ಸಿನಿಮಾ ಮರು ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಉಪೇಂದ್ರ ನಿರ್ದೇಶಿಸಿದ ಈ ಸಿನಿಮಾದಲ್ಲಿ ಕಥೆ ಭಿನ್ನವಾಗಿದೆ. ಆ ಲವ್ಸ್ಟೋರಿಯ ಹಿಂದಿನ ಪ್ರೇರಣೆ ಏನು ಎಂದು ಕೇಳಿದ್ದಕ್ಕೆ ಉಪೇಂದ್ರ ಅವರು ತಮ್ಮದೇ ಬದುಕಿನ ನೆನಪಿನ ಪುಟವನ್ನು ತೆರೆದಿದ್ದಾರೆ. ಕಾಲೇಜು ದಿನಗಳಲ್ಲಿ ಉಪೇಂದ್ರ ಭಗ್ನಪ್ರೇಮಿ ಆಗಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ.
26 ವರ್ಷಗಳ ಹಿಂದಿನ ‘ಎ’ ಸಿನಿಮಾ (A Kannada Movie) ಈಗ ಮತ್ತೊಮ್ಮೆ ಅಬ್ಬರಿಸುತ್ತಿದೆ. ನಟ ಉಪೇಂದ್ರ ಅವರು ನಿರ್ದೇಶಿಸಿ, ಮುಖ್ಯ ಪಾತ್ರ ಮಾಡಿದ ಆ ಸಿನಿಮಾದ ಚಾರ್ಮ್ ಇಂದಿಗೂ ಕಡಿಮೆ ಆಗಿಲ್ಲ. 1998ರಲ್ಲಿ ಮೊದಲ ಬಾರಿಗೆ ರಿಲೀಸ್ ಆದಾಗ ಎಷ್ಟು ಕ್ರೇಜ್ ಇತ್ತೋ ಈಗಲೂ ಅಷ್ಟೇ ಕ್ರೇಜ್ ಉಳಿಸಿಕೊಂಡಿದೆ. ಆ ಸಿನಿಮಾದ ಕಥೆ ಕೂಡ ಡಿಫರೆಂಟ್ ಆಗಿದೆ. ಅದಕ್ಕೆ ಏನು ಸ್ಫೂರ್ತಿ ಅಂತ ಕೇಳಿದ್ದಕ್ಕೆ ಉಪೇಂದ್ರ ಅವರು ಕಾಲೇಜು ದಿನಗಳ ತಮ್ಮ ಲವ್ ಸ್ಟೋರಿಯನ್ನು ನೆನಪಿಸಿಕೊಂಡಿದ್ದಾರೆ. ‘ನನ್ನ ಬದುಕಿನಲ್ಲಿ ನಡೆದ ಘಟನೆಗಳೇ ಎ ಸಿನಿಮಾಗೆ ಸ್ಫೂರ್ತಿ. ಕಾಲೇಜು ದಿನಗಳಲ್ಲಿ ಯಾವುದೋ ಹುಡುಗಿಯನ್ನು ಲವ್ ಮಾಡ್ತಿದ್ದೆ. ಲವ್ ಎಂದರೆ ದೂರದಿಂದ ನೋಡಿ, ಕವನಗಳನ್ನು ಬರೆಯುವುದು ಅಷ್ಟೇ. ಮಾತನಾಡಿಸುವುದು ಕೂಡ ಇಲ್ಲ. ಆ ಹುಡುಗಿಗೆ ಅದು ಗೊತ್ತಿರುವುದೇ ಇಲ್ಲ. ಒಂದು ಹುಡುಗಿಗೆ ಮಾತ್ರ ನನ್ನ ಒಬ್ಬ ಸ್ನೇಹಿತ ಹೋಗಿ ಹೇಳಿದ. ‘ಉಪೇಂದ್ರ ನಿಮ್ಮನ್ನು ಲವ್ ಮಾಡ್ತಿದ್ದಾನೆ’ ಎಂದಿದ್ದಕ್ಕೆ ಆಕೆ ‘ನಾನು ಕೂಡ ಲವ್ ಮಾಡ್ತೀನಿ. ಭೇಟಿ ಮಾಡೋಣ’ ಅಂದಳು. ಆದರೆ ನನಗೆ ಇದು ಆಗಲ್ಲ ಅಂತ ಗೊತ್ತಾಯಿತು. ಜೀವನದಲ್ಲಿ ನನಗೆ ಇನ್ನೂ ಮನೆಯೇ ಇಲ್ಲ. ನಾನೇನು ಲವ್ ಮಾಡೋದು ಅಂತ ಅನಿಸಿತು. ಜೀವನ ಮುಖ್ಯನಾ ಅಥವಾ ಲವ್ ಮುಖ್ಯನಾ ಎಂಬ ಪ್ರಶ್ನೆ ಮೂಡಿತು. ನಾನು ನಿರ್ದೇಶಕನಾಗಿ ಒಂದು ಸಿನಿಮಾ ಮಾಡಬೇಕು ಎಂದಾಗ ಆ ಟಾಪಿಕ್ ಅನ್ನೇ ಆರಿಸಿಕೊಂಡೆ’ ಎಂದು ಉಪೇಂದ್ರ (Upendra) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ

ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ

ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
