ಆತಂಕ ಒತ್ತಡಗಳ ನಡುವೆಯೂ ಕಾಗದ ಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದ ಹೆಚ್ ಡಿ ರೇವಣ್ಣ!

ಆತಂಕ ಒತ್ತಡಗಳ ನಡುವೆಯೂ ಕಾಗದ ಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದ ಹೆಚ್ ಡಿ ರೇವಣ್ಣ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 17, 2024 | 4:19 PM

ರೇವಣ್ಣ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಪತ್ರಕರ್ತರು ಅವರನ್ನು ಹೋಗಗೊಡುತ್ತಾರೆ. ಒಂದು ಸಂಗತಿಯನ್ನು ಗಮನಿಸಿ. ಜೈಲಿಗೆ ಹೋಗಿ ಬಂದಾಗಿನಿಂದ ರೇವಣ್ಣ ಚಪ್ಪಲಿ ಧರಿಸುವುದನ್ನು ನಿಲ್ಲಿಸಿದ್ದಾರೆ. ದೈವಭಕ್ತರಾಗಿರುವ ಅವರು, ಅರೋಪಗಳಿಂದ ಮುಕ್ತರಾಗುವವರೆಗೆ ಚಪ್ಪಲಿ ಧರಿಸದಿರುವ ಪಣ ತೊಟ್ಟಿದ್ದರೂ ಆಶ್ವರ್ಯವಿಲ್ಲ.

ಬೆಂಗಳೂರು: ಅರೋಪಗಳಿಂದ ಜರ್ಝರಿತರಾಗಿರುವ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣರ (HD Revanna) ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಬೇಕು ಮಾರಾಯ್ರೇ. ಅವರು ಸಾಕಷ್ಟು ಆತಂಕದಲ್ಲಿದ್ದಾರೆ ಮತ್ತು ಇವತ್ತು ಮಧ್ಯಾಹ್ನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಕೋರ್ಟ್ (court) ಮುಂದೆ ಹಾಜರಾಗಬೇಕಿತ್ತು. ಆದಾಗ್ಯೂ ಅವರು, ವಿಧಾನ ಸೌಧದಲ್ಲಿ (Vidhana Soudha) ಮಧ್ಯಾಹ್ನ ನಡೆದ ಕಾಗದ ಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಅಂದಹಾಗೆ, ಅವರು ಈ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದು ಕೋರ್ಟ್ ಗೆ ತೆರಳುವ ಮುನ್ನ ಸಭೆಯಲ್ಲಿ ಭಾಗಿಯಾದರು. ಅದರೆ ಸಭೆನ ಮುಗಿಸಿ ಹೊರ ಬಂದ ರೇವಣ್ಣ ತಮ್ಮನ್ನು ಸುತ್ತುವರಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಲಿಲ್ಲ. ಸರೀರಿ, ದಾರಿ ಬಿಡ್ರೀ, ನಂಗೆ ಕೋರ್ಟ್ ಹೋಗಬೇಕಿದೆ ಅಂತ ಹೇಳುವುದು ಕೇಳಿಸುತ್ತದೆ. ರೇವಣ್ಣ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಪತ್ರಕರ್ತರು ಅವರನ್ನು ಹೋಗಗೊಡುತ್ತಾರೆ. ಒಂದು ಸಂಗತಿಯನ್ನು ಗಮನಿಸಿ. ಜೈಲಿಗೆ ಹೋಗಿ ಬಂದಾಗಿನಿಂದ ರೇವಣ್ಣ ಚಪ್ಪಲಿ ಧರಿಸುವುದನ್ನು ನಿಲ್ಲಿಸಿದ್ದಾರೆ. ದೈವಭಕ್ತರಾಗಿರುವ ಅವರು, ಅರೋಪಗಳಿಂದ ಮುಕ್ತರಾಗುವವರೆಗೆ ಚಪ್ಪಲಿ ಧರಿಸದಿರುವ ಪಣ ತೊಟ್ಟಿದ್ದರೂ ಆಶ್ವರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿಂದ ನೇರವಾಗಿ ದೇವೇಗೌಡರ ಮನೆಗೆ ಬಂದಿರುವ ಹೆಚ್ ಡಿ ರೇವಣ್ಣರನ್ನು ನೋಡಲು ಸಾವಿರಾರು ಜನರ ಜಮಾವಣೆ