ಜೈಲಿಂದ ಹೊರಬಂದು ನಿರಾಳರಾಗಿರುವ ಹೆಚ್ ಡಿ ರೇವಣ್ಣರಿಂದ ಬೆಂಗಳೂರಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ
ವಿಧಾನಸಭಾ ಅಧಿವೇಶನ ನಡೆಯುವಾಗಲೂ ಅವರ ಕೈಯಲ್ಲಿ ನಿಂಬೆಹಣ್ಣಿರುವುದನ್ನು ಜನ ಗಮನಿಸಿದ್ದಾರೆ. ಹಾಗಾಗಿ, ಅವರು ಈಗ ಎದುರಾಗಿರುವ ಸಂಕಷ್ಟದ ಹಿನ್ನೆಲೆಯಲ್ಲಿ ವಿಘ್ನ ನಿವಾರಕ ವಿನಾಯಕನಿಗೆ ಅವರು ಪೂಜೆ ಸಲ್ಲಿಸಿದ್ದಾರೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವುದು ನಗರದ ಜಯನಗರದಲ್ಲಿರುವ ವಿನಾಯಕ ದೇವಸ್ಥಾನ.
ಬೆಂಗಳೂರು: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ (woman abduction case) ಆರೋಪಿಯಾಗಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿರುವ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ತಮ್ಮ ಬದುಕಿನಲ್ಲಿ ನಡೆದ ಘಟನೆಯಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ತಮ್ಮ ಮನೆಗೆ ಭೇಟಿ ನೀಡಿದ್ದ ಸಹಸ್ರಾರು ಅಭಿಮಾನಿಗಳೊಂದಿಗೆ ಮಾತಾಡುವಾಗ ಭಾವುಕರಾಗಿದ್ದ ರೇವಣ್ಣ ಇಂದು ಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ಪೂಜೆ (offer puja) ಸಲ್ಲಿಸಿದರು. ಸಂಕಟ, ಆಪತ್ತುಗಳು ಎದುರಾದಾಗ ಜನ ದೇವರ ಮೊರೆಹೋಗಿ, ಅವುಗಳಿಂದ ಪಾರು ಮಾಡು, ಪರಿಸ್ಥಿತಿ ಎದುರಿಸಲು ಧೈರ್ಯ ನೀಡು ಅಂತ ಪ್ರಾರ್ಥಿಸಿಕೊಳ್ಳುತ್ತಾರೆ. ರೇವಣ್ಣ ಧಾರ್ಮಿಕ ಪ್ರವೃತ್ತಿಯ ವ್ಯಕ್ತಿ ಮತ್ತು ಮಹಾನ್ ದೈವಭಕ್ತ. ಸಹಜವಾದ ದಿನಗಳಲ್ಲೂ ಅವರು ದೇವಸ್ಥಾನಗಳಿಗೆ ತಮ್ಮ ಪತ್ನಿ ಭವಾನಿಯವರೊಂದಿಗೆ ಭೇಟಿ ನೀಡುವುದನ್ನು ಎಲ್ಲರೂ ನೋಡಿದ್ದಾರೆ. ವಿಧಾನಸಭಾ ಅಧಿವೇಶನ ನಡೆಯುವಾಗಲೂ ಅವರ ಕೈಯಲ್ಲಿ ನಿಂಬೆಹಣ್ಣಿರುವುದನ್ನು ಜನ ಗಮನಿಸಿದ್ದಾರೆ. ಹಾಗಾಗಿ, ಅವರು ಈಗ ಎದುರಾಗಿರುವ ಸಂಕಷ್ಟದ ಹಿನ್ನೆಲೆಯಲ್ಲಿ ವಿಘ್ನ ನಿವಾರಕ ವಿನಾಯಕನಿಗೆ ಅವರು ಪೂಜೆ ಸಲ್ಲಿಸಿದ್ದಾರೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವುದು ನಗರದ ಜಯನಗರದಲ್ಲಿರುವ ವಿನಾಯಕ ದೇವಸ್ಥಾನ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಭಿಮಾನಿಗಳ ಪ್ರೀತಿ ವಿಶ್ವಾಸ ಕಂಡು ಭಾವುಕರಾಗಿ ಕಣ್ಣೀರು ಹಾಕಿದ ಶಾಸಕ ಹೆಚ್ ಡಿ ರೇವಣ್ಣ