Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ತಲಾ 14 ಸ್ಥಾನ ಸಿಗುವ ಸಾಧ್ಯತೆ ಇದೆ: ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ತಲಾ 14 ಸ್ಥಾನ ಸಿಗುವ ಸಾಧ್ಯತೆ ಇದೆ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 17, 2024 | 3:05 PM

ರಿಲ್ಯಾಕ್ಸ್ಡ್ ಮೂಡ್ ನಲ್ಲಿದ್ದ ಸತೀಶ್ ಜೋಕ್ ಗಳನ್ನು ಕಟ್ ಮಾಡುತ್ತಾ ಲಹರಿಯಾಗಿ ಮಾತಾಡಿದರು. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪತ್ರಕರ್ತರೊಬ್ಬರು ಏನು ಪ್ರಶ್ನೆ ಕೇಳಿದರೋ ಗೊತ್ತಾಗಲಿಲ್ಲ ಆದರೆ ಸತೀಶ್ ನೀಡಿದ ಉತ್ತರಕ್ಕೆ ಮಾಧ್ಯಮ ಪ್ರತಿನಿಧಿಗಳ ಜೊತೆ ಸಚಿವನ ಜೊತೆ ಕೂತಿದ್ದವರು ಸಹ ನಕ್ಕರು.

ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿರಾಳ ಭಾವದಲ್ಲಿದ್ದರು. ಲೋಕಸಭಾ ಚುನಾವಣೆಯಲ್ಲಿ (Lok Sabha polls) ಅವರು ಬಹಳ ಓಡಾಡಿದ್ದಕ್ಕೆ ಕಾರಣಗಳು ಎರಡು-ಒಂದು ಅವರು ಪಕ್ಷದ ಹಿರಿಯ ನಾಯಕ ಮತ್ತೊಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಅವರ ಮಗಳು ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಸ್ಪರ್ಧಿಸಿದ್ದು. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಗಿದ ಬಳಿಕ ಸತೀಶ್ ಸೇರಿದಂತೆ ರಾಜ್ಯದ ನಾಯಕರೆಲ್ಲ ಕೆಲದಿನ ವಿಶ್ರಾಂತಿ ಪಡೆದು ಈಗ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ರಿಲ್ಯಾಕ್ಸ್ಡ್ ಮೂಡ್ ನಲ್ಲಿದ್ದ ಸತೀಶ್ ಜೋಕ್ ಗಳನ್ನು ಕಟ್ ಮಾಡುತ್ತಾ ಲಹರಿಯಾಗಿ ಮಾತಾಡಿದರು. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪತ್ರಕರ್ತರೊಬ್ಬರು ಏನು ಪ್ರಶ್ನೆ ಕೇಳಿದರೋ ಗೊತ್ತಾಗಲಿಲ್ಲ ಆದರೆ ಸತೀಶ್ ನೀಡಿದ ಉತ್ತರಕ್ಕೆ ಮಾಧ್ಯಮ ಪ್ರತಿನಿಧಿಗಳ ಜೊತೆ ಸಚಿವನ ಜೊತೆ ಕೂತಿದ್ದವರು ಸಹ ನಕ್ಕರು. ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ 2019 ಚುನಾವಣೆಗಿಂತ ಭಿನ್ನವಾಗಿದೆ, ತಮ್ಮ ಪಕ್ಷ 14-16 ಸ್ಥಾನಗಳಲ್ಲಿ ಗೆಲ್ಲಲಿದೆ, ಎರಡು ಪಕ್ಷಗಳಿಗೆ ಶೇಕಡ 50ರಷ್ಟು ಸೀಟುಗಳನ್ನು ಗೆಲ್ಲುವ ಅವಕಾಶವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಯುಡಬ್ಲ್ಯೂಜೆ ಸಂವಾದ: ಮೌಢ್ಯ ಮತ್ತು ಮೂಢನಂಬಿಕೆಗಳ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು