ಸಂಸತ್​ನಲ್ಲಿ ಒಟ್ಟಿಗೇ ನಗುತ್ತಾ ಕಾಣಿಸಿಕೊಂಡ ಸೋನಿಯಾ ಗಾಂಧಿ- ಜಯಾ ಬಚ್ಚನ್

ಅಮಿತಾಬ್ ಬಚ್ಚನ್ ಅವರ ಪತ್ನಿ ಹಾಗೂ ಜಯಾ ಬಚ್ಚನ್ ಬಹುತೇಕ ಎಲ್ಲ ಸಂದರ್ಭದಲ್ಲೂ ಬಹಳ ಗಂಭೀರವಾಗಿಯೇ ಇರುತ್ತಾರೆ. ಆದರೆ, ಅಪರೂಪದ ಈ ವಿಡಿಯೋದಲ್ಲಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜೊತೆ ನಗುತ್ತಾ ಹರಟುತ್ತಿರುವುದನ್ನು ನಾವು ನೋಡಬಹುದು.

ಸಂಸತ್​ನಲ್ಲಿ ಒಟ್ಟಿಗೇ ನಗುತ್ತಾ ಕಾಣಿಸಿಕೊಂಡ ಸೋನಿಯಾ ಗಾಂಧಿ- ಜಯಾ ಬಚ್ಚನ್
ಸೋನಿಯಾ ಗಾಂಧಿ- ಜಯಾ ಬಚ್ಚನ್
Follow us
ಸುಷ್ಮಾ ಚಕ್ರೆ
|

Updated on: Jul 24, 2024 | 6:06 PM

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಜಯಾ ಬಚ್ಚನ್ ಅವರು ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಬಿಜೆಪಿಯೇತರ ಸರ್ಕಾರದ ಆಡಳಿತದ ರಾಜ್ಯಗಳ ವಿರುದ್ಧದ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಂಡಿಯಾ ಬಣದ ಭಾಗವಾಗಿದ್ದಾರೆ. ಈ ವೇಳೆ ಸೋನಿಯಾ ಗಾಂಧಿಯೊಂದಿಗೆ ನಗುತ್ತಾ ಕಾಣಿಸಿಕೊಂಡ ಜಯಾ ಬಚ್ಚನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕಲಾಪದಲ್ಲಿ ಭಾಗವಹಿಸಲು ಸಂಸತ್ತಿನ ಆವರಣವನ್ನು ತಲುಪಿದಾಗ ಎಸ್‌ಪಿ ಸಂಸದೆ ಜಯಾ ಬಚ್ಚನ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಬಳಿಗೆ ಬಂದಿದ್ದಾರೆ. ಆಗ ಇಬ್ಬರೂ ಮಾತನಾಡಿಕೊಂಡು, ಜೋರಾಗಿ ನಗುತ್ತಿರುವುದು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿದೆ. ಕೇಂದ್ರ ಬಜೆಟ್‌ನಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧದ ತಾರತಮ್ಯವನ್ನು ಪ್ರತಿಭಟಿಸಿ ಇಂಡಿಯಾ ಬ್ಲಾಕ್ ಸಂಸದರು ಬುಧವಾರ ಲೋಕಸಭೆಯಲ್ಲಿ ವಾಕ್‌ಔಟ್ ನಡೆಸಿದರು.

ಇದನ್ನೂ ಓದಿ: ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ: ರೈತರೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಭರವಸೆ

ಒಂದು ಕಾಲದಲ್ಲಿ ಗಾಂಧಿ ಕುಟುಂಬಸ್ಥರು ಮತ್ತು ಬಚ್ಚನ್ ಕುಟುಂಬದವರು ತುಂಬಾ ಸ್ನೇಹದಿಂದ ಇರುತ್ತಿದ್ದರು ಎಂಬುದನ್ನು ಉಲ್ಲೇಖಿಸುವುದು ಸೂಕ್ತ. ನಂತರ ಸಮಯ ಬದಲಾದಂತೆ, ಈ ಸಂಬಂಧವು ದುರ್ಬಲಗೊಂಡಿತು. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತುಂಬಾ ಆತ್ಮೀಯರಾಗಿದ್ದರು. ರಾಜೀವ್ ಗಾಂಧಿ, ಸಂಜಯ್ ಗಾಂಧಿ ಮತ್ತು ಅಮಿತಾಬ್ ಬಚ್ಚನ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ನವದೆಹಲಿಯ ನಿವಾಸಿಯಾಗಿದ್ದಾಗ ಒಟ್ಟಿಗೆ ಸಮಯ ಕಳೆದಿದ್ದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Budget 2024: ಬಜೆಟ್‌ನಲ್ಲಿ ಮೋದಿ ಸರ್ಕಾರದ 9 ಆದ್ಯತೆಗಳು, 4 ಸ್ತಂಭಗಳನ್ನು ಪಟ್ಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

ರಾಜೀವ್ ಗಾಂಧಿಯವರ ಕೋರಿಕೆಯ ಮೇರೆಗೆ ಅಮಿತಾಭ್ ಬಚ್ಚನ್ 1984ರಲ್ಲಿ ಅಲಹಾಬಾದ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಆದರೆ ಬೋಫೋರ್ಸ್ ಹಗರಣದಲ್ಲಿ ಅವರ ಹೆಸರು ಬಂದಾಗ ಅಮಿತಾಬ್ ಬಚ್ಚನ್ ಲೋಕಸಭೆಗೆ ರಾಜೀನಾಮೆ ನೀಡಿದರು. ಅದಾದ ನಂತರ ರಾಜೀವ್ ಗಾಂಧಿ ಅಮಿತಾಬ್ ಬಚ್ಚನ್ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಅದಾದ ನಂತರ ಎರಡೂ ಕುಟುಂಬಗಳ ನಡುವಿನ ಗೆಳೆತನವೂ ಹದಗೆಡತೊಡಗಿತು ಎನ್ನಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ