ರೈಲ್ವೆ ಸುರಕ್ಷತೆಗೆ ಆದ್ಯತೆ, 10,000 ಇಂಜಿನ್‌ಗಳಲ್ಲಿ ಕವಚ್ ಅಳವಡಿಕೆ: ಅಶ್ವಿನಿ ವೈಷ್ಣವ್

ಭಾರತದಲ್ಲಿ ರೈಲು ಅಪಘಾತಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಕವಚ್ 0.4 ಸ್ಥಾಪನೆಯ ಕುರಿತು ರೈಲ್ವೆ ಸಚಿವರು ಮಾತನಾಡಿದ್ದಾರೆ. ಸುಧಾರಿತ ಸುರಕ್ಷತಾ ವ್ಯವಸ್ಥೆಯಾದ ಕವಚ್ 0.4 ರ ಅಂತಿಮ ಆವೃತ್ತಿಯನ್ನು ಭಾರತದಾದ್ಯಂತ 10,000 ಎಂಜಿನ್‌ಗಳಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ

ರೈಲ್ವೆ ಸುರಕ್ಷತೆಗೆ ಆದ್ಯತೆ, 10,000 ಇಂಜಿನ್‌ಗಳಲ್ಲಿ ಕವಚ್ ಅಳವಡಿಕೆ: ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us
|

Updated on: Jul 24, 2024 | 6:49 PM

ದೆಹಲಿ ಜುಲೈ 24: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಬಜೆಟ್‌ನ (Union Budget) ಗಮನಾರ್ಹ ಭಾಗವನ್ನು ಭಾರತೀಯ ರೈಲ್ವೇಯನ್ನು ಮೇಲ್ದರ್ಜೆಗೇರಿಸಲು ಮೀಸಲಿಡಲಾಗಿದೆ. ಇದು ಸರ್ಕಾರದ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ. ಇಂದು (ಬುಧವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಸಚಿವರು, ರೈಲ್ವೆ ವಲಯಕ್ಕೆ ಬಜೆಟ್‌ನಲ್ಲಿ ಮೂಲಸೌಕರ್ಯಗಳನ್ನು ಆಧುನೀಕರಿಸುವ ಮತ್ತು ಸೇವಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಭಾರತದ ರಾಜ್ಯವಾರು ರೈಲ್ವೆ ಹಂಚಿಕೆ ಬಗ್ಗೆ

2024-25ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ವೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ₹3,694 ಕೋಟಿ, ಉತ್ತರಾಖಂಡದಲ್ಲಿ ₹5,131 ಕೋಟಿ, ಉತ್ತರ ಪ್ರದೇಶದಲ್ಲಿ ₹19,848 ಕೋಟಿ, ಹಿಮಾಚಲ ಪ್ರದೇಶದಲ್ಲಿ ₹2,698 ಕೋಟಿ, ದೆಹಲಿಯಲ್ಲಿ ₹2,582 ಕೋಟಿ, ₹2,582 ಕೋಟಿ. ರಾಜಸ್ಥಾನದಲ್ಲಿ 9,959 ಕೋಟಿ ಮತ್ತು ಈಶಾನ್ಯದಲ್ಲಿ ₹ 10,376 ಕೋಟಿ ನೀಡಲಾಗಿದೆ. ಹೆಚ್ಚುವರಿಯಾಗಿ, 2024-25 ಹಣಕಾಸು ವರ್ಷದ ಬಜೆಟ್‌ನಲ್ಲಿ ಬಹು ರೈಲು-ಮೂಲಸೌಕರ್ಯ ಯೋಜನೆಗಳಿಗೆ ಒಡಿಶಾಕ್ಕೆ ₹10,586 ಕೋಟಿ ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕುಂಭಮೇಳ 2025: ರೂ 837-ಕೋಟಿ ಯೋಜನೆಯನ್ನು ಪ್ರಾರಂಭಿಸಲಿದೆ ರೈಲ್ವೆ

ಭಾರತೀಯ ರೈಲ್ವೇಯು ಮುಂಬರುವ ಕುಂಭಮೇಳ 2025 ಕ್ಕೆ ತನ್ನ ಸಿದ್ಧತೆಗಳನ್ನು ಆರಂಭಿಸಿದ್ದು, ವಿವಿಧ ಮೂಲಸೌಕರ್ಯ ಕಾಮಗಾರಿಗೆ 837 ಕೋಟಿ ಖರ್ಚು ಮಾಡಲಿಗದೆ. “ಕುಂಭಕ್ಕೆ ಪ್ರಮುಖ ಸಿದ್ಧತೆಗಳನ್ನು ಮಾಡಲಾಗುತ್ತಿದೆ. 40 ಕ್ಕೂ ಹೆಚ್ಚು ಯೋಜನೆಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಕ್ರಿಯಾ ಯೋಜನೆ ಮಾಡಲಾಗಿದೆ. ಪ್ರಯಾಗ್ರಾಜ್ ನಿಲ್ದಾಣವನ್ನು ಮರು ಅಭಿವೃದ್ಧಿಪಡಿಸಲಾಗಿದೆ. ವಿಶೇಷ ರೈಲುಗಳು ರೈಲ್ವೆಯ ಜಂಟಿ ಕಮಾಂಡ್ ಅನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ

10,000 ಇಂಜಿನ್‌ಗಳಲ್ಲಿ ಕವಚ್ ಅಳವಡಿಕೆ

ಭಾರತದಲ್ಲಿ ರೈಲು ಅಪಘಾತಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಕವಚ್ 0.4 ಸ್ಥಾಪನೆಯ ಕುರಿತು ರೈಲ್ವೆ ಸಚಿವರು ಮಾತನಾಡಿದ್ದಾರೆ. ಸುಧಾರಿತ ಸುರಕ್ಷತಾ ವ್ಯವಸ್ಥೆಯಾದ ಕವಚ್ 0.4 ರ ಅಂತಿಮ ಆವೃತ್ತಿಯನ್ನು ಭಾರತದಾದ್ಯಂತ 10,000 ಎಂಜಿನ್‌ಗಳಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ರೈಲ್ವೇ ಅಪಘಾತಗಳ ಹೆಚ್ಚಳದ ನಡುವೆ ಈ ಉಪಕ್ರಮವು ಬಂದಿದೆ. “ಈ ವಿಷಯಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಯುಪಿಎ ಕಾಲದಿಂದ ಅಪಘಾತಗಳು 60% ರಷ್ಟು ಕಡಿಮೆಯಾಗಿದೆ. ಸುರಕ್ಷತೆಗಾಗಿ ಬಜೆಟ್ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಜೀವವೂ ಅಮೂಲ್ಯವಾಗಿದೆ. ಇದು ಮಾನವೀಯ ಸಮಸ್ಯೆಯಾಗಿದೆ, ರಾಜಕೀಯವಲ್ಲ” ಎಂದಿದ್ದಾರೆ

ಆಹಾರ ನೈರ್ಮಲ್ಯ ಮೇಲ್ವಿಚಾರಣೆ ಮಾಡಲು AI ವ್ಯವಸ್ಥೆ

ಭಾರತೀಯ ರೈಲ್ವೇಯಲ್ಲಿ ಲಭ್ಯವಿರುವ ಆಹಾರದ ನೈರ್ಮಲ್ಯದ ಸ್ಥಿತಿಯನ್ನು ಒಳಗೊಂಡಿರುವ ಒಂದು ಪ್ರಮುಖ ಕಾಳಜಿಯನ್ನು ಸಹ ಸಚಿವರು ಪ್ರಸ್ತಾಪಿಸಿದರು. 100 ಹೊಸ ದೊಡ್ಡ ಅಡಿಗೆಮನೆಗಳನ್ನು ನಿರ್ಮಿಸಲಾಗುತ್ತಿದೆ, ಪ್ಯಾಂಟ್ರಿ ಕಾರ್, ಸ್ವಚ್ಛವಾಗಿಡಲಾಗುತ್ತದೆ. ಆಹಾರದ ನೈರ್ಮಲ್ಯವನ್ನು ಮೇಲ್ವಿಚಾರಣೆ ಮಾಡಲು AI ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ: ರೈತರೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಭರವಸೆ

ಕರ್ನಾಟಕಕ್ಕೆ ಈ ಬಾರಿ ಬಜೆಟ್ ನಲ್ಲಿ 7,559 ಕೋಟಿ ರೂ ಹಂಚಿಕೆ

ಯುಪಿಎ ಅವಧಿಯಲ್ಲಿ ವಾರ್ಷಿಕ 1800 ಕೋಟಿ ಹಂಚಿಕೆ ಮಾಡಲಾಗಿತ್ತು. ಯುಪಿಎಗಿಂತ 9 ಪಟ್ಟು ಹೆಚ್ಚು ಹಣವನ್ನು ಮೋದಿ ಸರ್ಕಾರ ಕೊಟ್ಟಿದೆ. ಕರ್ನಾಟಕದಲ್ಲಿ 31ಯೋಜನೆಗಳು ನಡೆಯುತ್ತಿದೆ. 47ಸಾವಿರ ಕೋಟಿ ರೂ ವೆಚ್ಚದ ಯೋಜನೆಗಳು ನಡೆಯುತ್ತಿವೆ. 638 ಪ್ಲೈಓವರ್, ಅಂಡರ್ ಪಾಸ್ ಗಳ ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಮುಖ್ಯ. ಹೊಸ ಯೋಜನೆಗಳಿಗಾಗಿ ಸೋಮಣ್ಣ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ರಾಜ್ಯಗಳಿಗೆ ತಾರತಮ್ಯ ಮಾಡಿಲ್ಲ ಎಂದಿದ್ದಾರೆ ಸಚಿವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ