AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿಯವರೇ, ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ: ಸ್ಟಾಲಿನ್

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, "ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು" ಎಂದು ಹೇಳಿದ್ದೀರಿ. ಆದರೆ ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಉಳಿಸುತ್ತದೆ ದೇಶವನ್ನಲ್ಲ. ದೇಶವನ್ನು ನಡೆಸಲು ನೋಡಿ. ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ. ನೀವು ರಾಜಕೀಯ ಇಷ್ಟ, ಇಷ್ಟವಿಲ್ಲದಿರುವಿಕೆ ಆಧರಿಸಿ ಸರ್ಕಾರ ನಡೆಸಬೇಡಿ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರೇ, ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ: ಸ್ಟಾಲಿನ್
ಎಂಕೆ ಸ್ಟಾಲಿನ್
ರಶ್ಮಿ ಕಲ್ಲಕಟ್ಟ
|

Updated on:Jul 24, 2024 | 8:55 PM

Share

ದೆಹಲಿ ಜುಲೈ 24: ರಾಜಕೀಯದಲ್ಲಿ ಇಷ್ಟವಾಗುವುದು ಮತ್ತು ಇಷ್ಟವಿಲ್ಲದಿರುವುದನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರವನ್ನು ನಡೆಸಿದರೆ ಅವರನ್ನು ಪ್ರತ್ಯೇಕವಾಗಿ ದೂರವಿಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಹೇಳಿದ್ದಾರೆ. ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ ಹಂಚಿಕೆ ಕುರಿತು ಪ್ರಧಾನಿ ಮೇಲೆ ದಾಳಿ ಮಾಡಿದ ಸ್ಟಾಲಿನ್,  ಪಿಎಂ ಮೋದಿ ಮಿತ್ರಪಕ್ಷಗಳನ್ನು ಒಲಿಸಿಕೊಳ್ಳುವ ಮೂಲಕ ತಮ್ಮ ಆಡಳಿತವನ್ನು ಉಳಿಸಬಹುದು. ಆದರೆ ದೇಶವನ್ನು ಉಳಿಸುವುದಿಲ್ಲ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಬಜೆಟ್‌ನಲ್ಲಿ ಕೇಂದ್ರದಿಂದ ಇತರ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದ ಕೆಲವೇ ಗಂಟೆಗಳ ನಂತರ ಸ್ಟಾಲಿನ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಅದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿದವರ ಮೇಲೆ ಮೋದಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ.

“ಕೇಂದ್ರ ಹಣಕಾಸು ವರದಿಯಲ್ಲಿ ಹಲವು ರಾಜ್ಯಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಇಂಡಿಯಾ ಬಣದ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, “ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು” ಎಂದು ಹೇಳಿದ್ದೀರಿ. ಆದರೆ ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಉಳಿಸುತ್ತದೆ ದೇಶವನ್ನಲ್ಲ. ದೇಶವನ್ನು ನಡೆಸಲು ನೋಡಿ. ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ. ನೀವು ರಾಜಕೀಯ ಇಷ್ಟ, ಇಷ್ಟವಿಲ್ಲದಿರುವಿಕೆ ಆಧರಿಸಿ ಸರ್ಕಾರ ನಡೆಸಬೇಡಿ, ಹಾಗೆ ಮಾಡಿದರೆ ನಿಮ್ಮನ್ನೇ ನಾವು ಪ್ರತ್ಯೇಕವಾಗಿರಿಸುತ್ತೇವೆ ಎಂದು ಸ್ಟಾಲಿನ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ, ಡಿಎಂಕೆ ಸಂಸದ ದಯಾನಿಧಿ ಮಾರನ್, ಪ್ರಧಾನಿ ನರೇಂದ್ರ ಮೋದಿ ಅವರು ಎಂಕೆ ಸ್ಟಾಲಿನ್ ಅವರ ಕೆಲಸವನ್ನು ಅನುಸರಿಸಬೇಕು, ಅವರಿಗೆ ಮತ ಹಾಕದ ಜನರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

“ನಮ್ಮ ಸಿಎಂ ಎಂಕೆ ಸ್ಟಾಲಿನ್ ಅವರಿಂದ ಕೆಲವು ಉತ್ತಮ ಸಲಹೆಗಳನ್ನು ಸ್ವೀಕರಿಸಲು ಮತ್ತು ಅನುಸರಿಸಲು ಪ್ರಧಾನಿಗೆ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಎಂ.ಕೆ.ಸ್ಟಾಲಿನ್ ತಮಿಳುನಾಡು ಸಿಎಂ ಆದಾಗ  ನನಗೆ ಮತ ಹಾಕಿದ ಜನರಿಗಾಗಿ ಮಾತ್ರವಲ್ಲದೆ ನನಗೆ ಮತ ಹಾಕದ ಜನರಿಗಾಗಿಯೂ ಕೆಲಸ ಮಾಡುತ್ತೇನೆ, ಅದು ನನ್ನ ಕರ್ತವ್ಯ ಎಂದಿದ್ದರು. ಇಂದು, ಪ್ರಧಾನಿಯವರು ತಮ್ಮ ಪಕ್ಷಕ್ಕೆ ಮತ ಹಾಕಿದ ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಆದರೆ ಅವರನ್ನು ಬೆಂಬಲಿಸುವ ಪಕ್ಷಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಮಾರನ್ ಹೇಳಿರುವುದಾಗಿ  ಎಎನ್‌ಐ ವರದಿ ಮಾಡಿದೆ.

ಇಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2024-25 (ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ) ಕೇಂದ್ರ ಬಜೆಟ್ ಬಿಹಾರ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳಿಗೆ ಮಾತ್ರ ಹಣ ಮತ್ತು ಯೋಜನೆಗಳನ್ನು ಒದಗಿಸಿದೆ ಎಂದು ಹೇಳಿದರು. ಇತರ ರಾಜ್ಯಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಕಾಣಲಿಲ್ಲ, ಇದು “ಕುರ್ಸಿ-ಬಚಾವೋ” ಬಜೆಟ್ ಎಂದಿದ್ದಾರೆ ಖರ್ಗೆ.

ಇದನ್ನೂ ಓದಿ: ರೈತರನ್ನು ತಲುಪಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರಕ್ಕೆ ₹ 60,000 ಕೋಟಿ ಘೋಷಿಸಿದ್ದು  ಆಂಧ್ರಕ್ಕೆ  ₹ 15,000 ಕೋಟಿ ನೆರವು ಪಡೆಯಲು ಬೆಂಬಲವನ್ನು ವಾಗ್ದಾನ ಮಾಡಿದರು. ಎರಡೂ ರಾಜ್ಯಗಳು ವಿಶೇಷ ಸ್ಥಾನಮಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Wed, 24 July 24