AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

KD Movie song: ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಕನ್ನಡ ಚಿತ್ರ ‘ಕೆಡಿ: ದಿ ಡೆವಿಲ್’ ಚಿತ್ರದ 'ಸರ್ಕೆ ಚುನರ್ ತೇರಿ' ಹಾಡಿನಲ್ಲಿನ ಅವರ ಅಶ್ಲೀಲ ನೃತ್ಯ ಪ್ರದರ್ಶನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ. ಹಾಡಿನಲ್ಲಿರುವ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ‘ಅಶ್ಲೀಲ’ವಾಗಿದ್ದು, ಇಸ್ಲಾಮಿಕ್ ಬೋಧನೆಗಳು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ. ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ತಿಳಿಸಿದ್ದಾರೆ.

‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ
Nora Fatehi Song
ಮಂಜುನಾಥ ಸಿ.
|

Updated on: Mar 20, 2026 | 1:02 PM

Share

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್​​ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಲೋಕಸಭೆ ಅಧಿವೇಶನದಲ್ಲಿಯೂ ಸಹ ಹಾಡಿನ ಕುರಿತು ಚರ್ಚೆ ಆಗಿದೆ. ಇದೀಗ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಮೌಲ್ವಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಕನ್ನಡ ಚಿತ್ರ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ’ ಹಾಡಿನಲ್ಲಿನ ಅವರ ಅಶ್ಲೀಲ ನೃತ್ಯ ಪ್ರದರ್ಶನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ. ಹಾಡಿನಲ್ಲಿರುವ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ‘ಅಶ್ಲೀಲ’ವಾಗಿದ್ದು, ಇಸ್ಲಾಮಿಕ್ ಬೋಧನೆಗಳು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ. ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ತಿಳಿಸಿದ್ದಾರೆ.

ಹಾಡು ‘ಪ್ರಚೋದನಾತ್ಮಕ ಮತ್ತು ಅಶ್ಲೀಲ’ ದೃಶ್ಯಗಳ ಬಗ್ಗೆ ಸಮಸ್ಯೆ ಇದೆ ಎಂದು ಮುಖ್ಯ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು ಫತ್ವಾ ಹೊರಡಿಸಿದ್ದಾರೆ. ಅಂತಹ ವಿಷಯವು ಹರಾಮ್ ಮತ್ತು ಗುನಾಹ್-ಎ-ಕಬೀರಾ (ಗಂಭೀರ ಪಾಪ) ಎಂದಿದ್ದು ಅಂತಹ ವಿಷಯಗಳಲ್ಲಿ ಭಾಗವಹಿಸುವುದು ಅಥವಾ ಪ್ರಚಾರ ಮಾಡುವುದು ಧಾರ್ಮಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಫತ್ವಾ ಎನ್ನುವುದು ಇಸ್ಲಾಂನಲ್ಲಿ ಮುಫ್ತಿ ಎಂದು ಕರೆಯಲ್ಪಡುವ ಧಾರ್ಮಿಕ ಕಾನೂನು ತಜ್ಞರು ನಿರ್ದಿಷ್ಟ ವಿಷಯದ ಕುರಿತು ನೀಡುವ ಅಭಿಪ್ರಾಯವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ.

ಇದನ್ನೂ ಓದಿ:ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ

ಈ ಹಾಡಿನ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ಹಾಡನ್ನು ಬ್ಯಾನ್ (ನಿಷೇಧ) ಮಾಡಲಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬ ದೂರಿನ ಮೇರೆಗೆ ರಾಷ್ಟ್ರೀಯ ಮಹಿಳಾ ಆಯೋಗವು (NCW) ನೋರಾ ಫತೇಹಿ, ಸಂಜಯ್ ದತ್ ಮತ್ತು ಗೀತರಚನೆಕಾರ ರಕೀಬ್ ಆಲಂ ಅವರಿಗೆ ಸಮನ್ಸ್ ನೀಡಿದೆ.

ಈ ವಿವಾದದ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ‘ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ಆ ಸಮಯದಲ್ಲಿ ಚಿತ್ರತಂಡ ನೀಡಿದ ವಿವರಣೆಯನ್ನು ನಂಬಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅದರ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಸಾಹಿತ್ಯ ಮತ್ತು ಡಬ್ಬಿಂಗ್ ನನ್ನ ಗಮನಕ್ಕೆ ಬಾರದೆ ನಡೆದಿದೆ’ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯಲು ಪ್ರಯತ್ನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ