AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲಿಗಢ ಮುಸ್ಲಿಂ ವಿವಿ ಕ್ಯಾಂಪಸ್​ ಒಳಗೆ ಇಬ್ಬರ ಮೇಲೆ ಗುಂಡಿನ ದಾಳಿ

ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಇಬ್ಬರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಲಿಗಢ ಮುಸ್ಲಿಂ ವಿವಿ ಕ್ಯಾಂಪಸ್​ ಒಳಗೆ ಇಬ್ಬರ ಮೇಲೆ ಗುಂಡಿನ ದಾಳಿ
ಅಲಿಗಢ ಮುಸ್ಲಿಂ ಯೂನಿವರ್ಸಿಟಿ
ನಯನಾ ರಾಜೀವ್
|

Updated on: Jul 25, 2024 | 10:31 AM

Share

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಕ್ಯಾಂಪಸ್​ನಲ್ಲಿ ವಿಶ್ವವಿದ್ಯಾಲಯದ ಇಬ್ಬರು ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಮೊಹಮ್ಮದ್ ನದೀಮ್ ಮತ್ತು ಕಲೀಂ ಸಹೋದರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರೂ ಯೂನಿವರ್ಸಿಟಿ ಕ್ಯಾಂಪಸ್‌ನೊಳಗೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ದಾಳಿಕೋರರು ನಿಲ್ಲಿಸಿ ಅವರತ್ತ ಗುಂಡು ಹಾರಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯ ನಂತರ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಅವರನ್ನು ಬೆನ್ನಟ್ಟಿದ ನಂತರ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕ್ಯಾಂಪಸ್ ಒಳಗೆ ನಾಲ್ಕೈದು ಸುತ್ತಿನ ಗುಂಡಿನ ದಾಳಿ ನಡೆದಿದೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಆರಂಭಿಕ ತನಿಖೆಗಳ ಆಧಾರದ ಮೇಲೆ ದಾಳಿಯ ಹಿಂದೆ ಹಳೆಯ ದ್ವೇಷ ಇತ್ತು ಎಂದು ನಂಬಲಾಗಿದೆ. ನದೀಮ್ ಅವರ ಪತ್ನಿ ಪ್ರಕಾರ, ದಾಳಿಕೋರರು ಕ್ರಿಮಿನಲ್ ಗ್ಯಾಂಗ್‌ಗೆ ಸೇರಿದವರು ಮತ್ತು ಅವರ 13 ವರ್ಷದ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ, ಅವರ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಲಾಗುವುದು ಎಂದಿದ್ದಾರೆ.

ದಾಳಿಕೋರರನ್ನು ಬಂಧಿಸಲಾಗಿದ್ದು, ಅಧಿಕಾರಿಗಳು ಸ್ಥಳದಲ್ಲಿನ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮೃತ್ ಜೈನ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು