ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ದಾಳಿಯಲ್ಲಿ 6 ತಿಂಗಳ ಮಗು, ತಾಯಿ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು
ಪ್ರಾತಿನಿಧಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Jan 17, 2023 | 6:54 AM

ವಾಷಿಂಗ್ಟನ್ ಡಿಸಿ: ಅಮೆರಿಕಾದ ಮಧ್ಯ ಕ್ಯಾಲಿಫೋರ್ನಿಯಾದ ಗೋಶೆನ್​ನ ಮನೆಯೊಂದರಲ್ಲಿ ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 6 ತಿಂಗಳ ಮಗು, ತಾಯಿ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಇಬ್ಬರು ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಟ್ಯುಲೇರ್ ಕೌಂಟಿಯ ಶೆರಿಫ್ ಕಚೇರಿಯ ಶೆರಿಫ್ ಮೈಕ್ ಬೌಡ್ರೆಕ್ಸ್, ಕ್ಯಾಲಿಫೋರ್ನಿಯಾದ ಗೋಶೆನ್ ಎಂಬಲ್ಲಿ ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ದಾಳಿ ನಡೆಸಿ, ಗುಂಡು ಹಾರಿಸಿದ್ದಾರೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 7 ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದು ಪರಿಶೀಲನೆ ನಡೆಸಿದ್ದಾರೆ. 17 ವರ್ಷದ ತಾಯಿ ಮತ್ತು(ಅವಳ) ಆರು ತಿಂಗಳ ಮಗುವಿನ ತಲೆಗೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ:Russia-Ukraine War: ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು, 12 ಜನರ ಸ್ಥಿತಿ ಗಂಭೀರ 

ವರದಿಯ ಪ್ರಕಾರ, ಇಬ್ಬರು ಬೀದಿಯಲ್ಲಿ ಗುಂಡಿನ ದಾಳಿಗೆ ಪ್ರಾಯ ಕಳೆದುಕೊಂಡಿದ್ದು ಮೂರನೇ ವ್ಯಕ್ತಿ ತನ್ನ ನಿವಾಸದ ದ್ವಾರದಲ್ಲಿ ಪ್ರಾಣ ಬಿಟ್ಟಿದ್ದಾನೆ. ಇನ್ನೂ ಮೂವರು ಮನೆಯೊಳಗೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಉಸಿರಾಡುತ್ತಿದ್ದು ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದಾಳಿಯ ಹಿಂದೆ ಡ್ರಗ್ಸ್‌ ವಿಚಾರವಿದ್ದು ಶೆರಿಫ್ ಕಚೇರಿಯು ಕಳೆದ ವಾರ ನಿವಾಸದಲ್ಲಿ ಮಾದಕ ದ್ರವ್ಯ-ಸಂಬಂಧಿತ ದಾಳಿ ನಡೆಸಿತು ಅದರ ಪ್ರತಿಯಾಗಿ ಇಬ್ಬರು ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ  ಕ್ಲಿಕ್ ಮಾಡಿ

Published On - 6:54 am, Tue, 17 January 23

ತಾಜಾ ಸುದ್ದಿ