AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತ್​ಡೇ ಸಂಭ್ರಮಕ್ಕಾಗಿ ಬಹುಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟ ಸಂಜಯ್ ದತ್

ನಟ ಸಂಜಯ್ ದತ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಬಹುಕೋಟಿ ಮೌಲ್ಯದ ಐಷಾರಾಮಿ ಕಾರು ಮಾದರಿಯೊಂದನ್ನು ಖರೀದಿ ಮಾಡಿದ್ದಾರೆ.

ಬರ್ತ್​ಡೇ ಸಂಭ್ರಮಕ್ಕಾಗಿ ಬಹುಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟ ಸಂಜಯ್ ದತ್
ಐಷಾರಾಮಿ ಕಾರು ಖರೀದಿಸಿದ ನಟ ಸಂಜಯ್ ದತ್
Praveen Sannamani
|

Updated on: Jul 30, 2024 | 10:18 PM

Share

ಬಾಲಿವುಡ್ ಜನಪ್ರಿಯ ನಟ ಸಂಜಯ್ ದತ್ (Sanjay Dutt) ಜುಲೈ 29ರಂದು ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆ ಪಡೆದುಕೊಂಡಿದ್ದಾರೆ. ನಟ ಸಂಜಯ್ ದತ್ ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ರೇಂಜ್ ರೋವರ್ ಎಸ್ ವಿ ಲಗ್ಷುರಿ ಎಸ್ ಯುವಿ ಖರೀದಿಸಿದ್ದು, ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿ ಹೊಸ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಸಂಜಯ್ ದತ್ ಖರೀದಿ ಮಾಡಿರುವ ಕಸ್ಟಮೈಜ್ಡ್ ಸೌಲಭ್ಯದ ರೇಂಜ್ ರೋವರ್ ಎಸ್ ವಿ ಲಗ್ಷುರಿ ಎಸ್ ಯುವಿ ಆವೃತ್ತಿಯು ಹಲವಾರು ವಿಶೇಷತೆಗಳೊಂದಿಗೆ ನಿರ್ಮಾಣಗೊಂಡಿದ್ದು, ಇದು ಸುಮಾರು ರೂ. 4.50 ಕೋಟಿ ಮೌಲ್ಯ ಹೊಂದಿದೆ ಎನ್ನಲಾಗಿದೆ. ಹೊಸ ಕಾರನ್ನು ವಿಶೇಷವಾಗಿ ಅಲ್ಟ್ರಾ ಮ್ಯಾಟಿಕ್ ಗ್ರೀನ್ ಬಣ್ಣದೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಇದು ರೇಂಜ್ ರೋವರ್ ಕಂಪನಿಯ ಸೆರೆನಿಟಿ ಕಸ್ಟಮೈಜ್ಡ್ ಪ್ಯಾಕೇಜ್ ನೊಂದಿಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ರೇಂಜ್ ರೋವರ್ ನಿರ್ಮಾಣದ ಕಾರುಗಳಲ್ಲಿಯೇ ರೇಂಜ್ ರೋವರ್ ಎಸ್ ವಿ ಆವೃತ್ತಿಯು ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಸಂಜಯ್ ದತ್ ಖರೀದಿ ಮಾಡಿರುವ ಆವೃತ್ತಿಯಲ್ಲಿ ಮತ್ತಷ್ಟು ಹೊಸ ಐಷಾರಾಮಿ ಫೀಚರ್ಸ್ ಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡಲಾಗಿದೆ. ಹೊಸ ಕಾರಿಗೆ ಐಷಾರಾಮಿ ಜೊತೆಗೆ ಸ್ಪೋರ್ಟಿ ಲುಕ್ ಹೆಚ್ಚಿಸುವುದಕ್ಕಾಗಿ ಮುಂಭಾಗ ಮತ್ತು ಶೋಲ್ಡರ್ ಗಳ ಮೇಲೆ ಬ್ರೊನ್ಜ್ ಇನ್ಸರ್ಟ್ ನೀಡಲಾಗಿದ್ದು, ಒಳಭಾಗದಲ್ಲಿ ಕಾರಾವೇ ಬ್ರೌನ್ ಇಂಟಿರಿಯರ್ ಮತ್ತು ವೈಟ್ ಹೈಲೈಟ್ಸ್ ನೀಡಲಾಗಿದೆ.

ಹಾಗೆಯೇ ರೇಂಜ್ ರೋವರ್ ಎಸ್ ವಿ ಮಾದರಿಯಲ್ಲಿ 4.4 ಲೀಟರ್ ಟ್ವಿನ್ ಸಿಲಿಂಡರ್ ವಿ8 ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 615 ಹಾರ್ಸ್ ಪವರ್ ಮತ್ತು 750 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಐಷಾರಾಮಿ ಪ್ರಯಾಣಕ್ಕೆ ಅನುಕೂಲಕರವಾಗುವ ಹಲವು ಸೌಲಭ್ಯಗಳಿದ್ದು, 13.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಮತ್ತು ಪನೊರಮಿಕ್ ಗ್ಲಾಸ್ ರೂಫ್ ನೀಡಲಾಗಿದೆ. ಇದರೊಂದಿಗೆ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ 9 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಗರಿಷ್ಠ ಸುರಕ್ಷತೆ ನೀಡಬಲ್ಲ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದೆ.

ಇನ್ನು ಬಾಲಿವುಡ್ ನಲ್ಲಿ ಮಾತ್ರ ದಕ್ಷಿಣ ಭಾರತದ ಚಿತ್ರಗಳಲ್ಲೂ ಮಿಂಚುತ್ತಿರುವ ನಟ ಸಂಜಯ್ ದತ್ ದೊಡ್ಡ ಮೊತ್ತದ ಸಂಭಾವಣೆ ಪಡೆಯುತ್ತಿದ್ದು, ಇವರ ಬಳಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಸಂಗ್ರಹವಿದೆ. ಸಂಜಯ್ ದತ್ ಬಳಿ ಈಗಾಗಲೇ ರೋಲ್ಸ್ ರಾಯ್ಸ್ ಘೊಸ್ಟ್, ಆಡಿ ಆರ್8, ಆಡಿ ಕ್ಯೂ7, ಫೆರಾರಿ 599 ಜಿಟಿಬಿ ಸಂಗ್ರವಿದ್ದು, ಇದೀಗ ಹೊಸದಾಗಿ ರೇಂಜ್ ರೋವರ್ ಎಸ್ ವಿ ಲಗ್ಷುರಿ ಎಸ್ ಯುವಿ ಸೇರ್ಪಡೆಯಾಗಿದೆ.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ