ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು ಎಂದಿದ್ದ ಕರೀನಾ ಕಪೂರ್
ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು.
ಕರೀನಾ ಕಪೂರ್ ಅವರು ಒಮ್ಮೆ ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು ಎಂದು ಓಪನ್ ಆಗಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಕರೀನಾ ಕಪೂರ್ ಆಗ ಏಕೆ ಈ ಹೇಳಿಕೆ ನೀಡಿದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಕರೀನಾ ಕಪೂರ್ ಸದ್ಯ ಸೈಫ್ ಅಲಿ ಖಾನ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು. ಹಾಗಂತ ಇದು ಇತ್ತೀಚಿಗಿನ ಸಂದರ್ಶನ ಅಲ್ಲವೇ ಅಲ್ಲ. ‘ಜಬ್ ವಿ ಮೆಟ್’ ಸಿನಿಮಾದ ಪ್ರಚಾರದ ವೇಳೆ ಅವರು ನೀಡಿದ್ದ ಹೇಳಿಕೆ ಇದು.
ಕರೀನಾ ಕಪೂರ್ ಅವರು ‘ಜಬ್ ವಿ ಮೆಟ್’ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು ಸಿಮಿ ಅವರು ನಡೆಸಿಕೊಡೋ ಟಾಕ್ಶೋನಲ್ಲಿ ಭಾಗಿ ಆಗಿದ್ದರು. ‘ವಿಶ್ವದಲ್ಲಿರುವ ಯಾರ ಜೊತೆ ಡೇಟ್ ಮಾಡುತ್ತೀರಿ’ ಎಂದು ಕರೀನಾಗೆ ಕೇಳಲಾಯಿತು. ಅವರು ನೇರವಾಗಿ ರಾಹುಲ್ ಗಾಂಧಿ ಹೆಸರನ್ನು ತೆಗೆದುಕೊಂಡರು. ಅವರ ಹೆಸರನ್ನು ತೆಗೆದುಕೊಳ್ಳುವಾಗ ಕರೀನಾಗೆ ಭಯ ಇತ್ತು. ‘ನಾನು ಈ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೆ ವಿವಾದ ಆಗಬಹುದು’ ಎಂದು ಕೂಡ ಕರೀನಾ ಕಪೂರ್ ಹೇಳಿದ್ದರು.
View this post on Instagram
‘ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು. ಬಹುಶಃ ಈ ಹೇಳಿಕೆಯಿಂದ ವಿವಾದ ಆಗಬಹುದು’ ಎಂದು ಕರೀನಾ ಕಪೂರ್ ಅವರು ಹೆದರುತ್ತಲೇ ಹೇಳಿದ್ದರು. ಈ ಹೇಳಿಕೆಯಿಂದ ಅನೇಕರಿಗೆ ಅಚ್ಚರಿ ಆಗಿತ್ತು. ಈಗ ಈ ಹೇಳಿಕೆ ಮತ್ತೆ ವೈರಲ್ ಆಗಿ ಸದ್ದು ಮಾಡುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಆ ಸಮಯದಲ್ಲಿ ರಾಹುಲ್ ಗಾಂಧಿ ಸಖತ್ ಹ್ಯಾಂಡ್ಸಮ್ ಆಗಿದ್ದರು. ನೀವು ಹೇಳಿದ್ದರಲ್ಲಿ ತಪ್ಪಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ?
ಕರೀನಾ ಕಪೂರ್ ನಟನೆಯ ‘ಕ್ರ್ಯೂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಕರೀನಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಸಾಕಷ್ಟು ವಿಳಂಬ ತೋರುತ್ತಿದ್ದಾರೆ. ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಿಜವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.