‘ಅಂಬರೀಷ್ ಅನ್ನೋದೇ ಒಂದು ಭಾವನೆ’; ಪ್ರೀತಿಯ ಗೆಳೆಯನ ಬಗ್ಗೆ ವಿಷ್ಣು ಹೇಳಿದ್ದ ಮಾತಿದು
ಫ್ರೆಂಡ್ಶಿಪ್ಡೇ ಬಂದೇ ಬಿಟ್ಟಿದೆ. ಸ್ಯಾಂಡಲ್ವುಡ್ನಲ್ಲೂ ಅನೇಕ ಗೆಳೆತನ ಮಾದರಿ. 1972ರಲ್ಲಿ ‘ನಾಗರಹಾವು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರೂ ನಟಿಸಿದ್ದರು. ಅಲ್ಲಿಂದ ಇವರ ಗೆಳೆತನ ಆರಂಭ ಆಯಿತು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು.
ಫ್ರೆಂಡಿಶಪ್ ಡೇಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸ್ಯಾಂಡಲ್ವುಡ್ನಲ್ಲೂ ಸ್ಟಾರ್ ಹೀರೋಗಳ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಅಂಬರೀಷ್ ಹಾಗೂ ವಿಷ್ಣುವರ್ಧನ್ ಆಗಿದ್ದರು. ಇಬ್ಬರೂ ಒಂದೇ ತಾಯಿಯ ಮಕ್ಕಳು ಎಂಬ ರೀತಿಯಲ್ಲಿ ಇದ್ದರು. ಈಗ ಇಬ್ಬರೂ ನಮ್ಮ ಜೊತೆಯಲ್ಲಿ ಇಲ್ಲ ಎಂಬುದು ನೋವಿನ ಸಂಗತಿ. ಆದರೆ, ಅವರ ಗೆಳೆತನ ಮಾತ್ರ ಎಲ್ಲರಿಗೂ ಮಾದರಿ. ಅಂಬರೀಷ್ ಗೆಳೆತನದ ಬಗ್ಗೆ ವಿಷ್ಣುವರ್ಧನ್ ಅವರು ಈ ಮೊದಲು ಮಾತನಾಡಿದ್ದರು. ಅಂದಿನ ಈಟಿವಿ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
1972ರಲ್ಲಿ ‘ನಾಗರಹಾವು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರೂ ನಟಿಸಿದ್ದರು. ಅಲ್ಲಿಂದ ಇವರ ಗೆಳೆತನ ಆರಂಭ ಆಯಿತು. ಆ ಬಳಿಕ ‘ಹಬ್ಬ’, ‘ಅವಳ ಹೆಜ್ಜೆ’, ‘ಒಂದೇ ರೂಪ ಎರಡು ಗುಣ’, ‘ನಾಗಕನ್ಯೆ’ ಸೇರಿ ಅನೇಕ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಗೆಳೆತನ ನೋಡಿ ಅನೇಕರು ಹೊಟ್ಟೆ ಉರಿದುಕೊಂಡಿದ್ದೂ ಇದೆ. ಆದರೆ, ಯಾವ ಕೆಟ್ಟ ದೃಷ್ಟಿಯೂ ಇವರ ಗೆಳೆತನ ತಾಗಲಿಲ್ಲ. ಕೊನೆಯವರೆಗೂ ಇವರು ಗೆಳೆಯರಾಗಿಯೇ ಇದ್ದರು.
‘ಅಂಬರೀಷ್ ಬಗ್ಗೆ ಬರೀ ಮಾತಲ್ಲಿ ಹೇಳಿಕೆ ಸಾಧ್ಯವಿಲ್ಲ. ಅಂಬರೀಷ್ ಅನ್ನೋದು ಒಂದು ಭಾವನೆ. ಆ ಭಾವನೆಯನ್ನು ಹೇಳೋದಲ್ಲ, ಎಂಜಾಯ್ ಮಾಡೋಕೆ ಚೆನ್ನಾಗಿರುತ್ತದೆ. ನಾನು ಅವನು ಒಂದೇ ತಾಯಿಗೆ ಹುಟ್ಟಿಲ್ಲ ಅನ್ನೋದು ಬಿಟ್ಟರೆ, ಇಡೀ ಜೀವನದಲ್ಲಿ ಒಟ್ಟಿಗೆ ಇದ್ವಿ. ನಾನು ಯಾವಾಗಲೂ ಆತನನ್ನು ರಾಯಲ್ ಆ್ಯಂಡ್ ಲಾಯಲ್ ಫ್ರೆಂಡ್ ಎಂದು ಕರೆಯುತ್ತೇನೆ. ಒಬ್ಬರಿಗೊಬ್ಬರು ಸ್ಪಂದಿಸುತ್ತೇವೆ. ನಾವಿಬ್ಬರೂ ಪರಸ್ಪರ ಭೇಟಿ ಆಗುತ್ತೇವೆ. ಅಂಬರೀಷ್ ಎಂದರೆ ಹೆಮ್ಮೆ. ಅಂಥ ವ್ಯಕ್ತಿ ನಮ್ಮ ಜೊತೆ ಇರೋದು ಎಲ್ಲರಿಗೂ ಹೆಮ್ಮೆ. ನನಗೆ ಇನ್ನೂ ಹೆಮ್ಮೆ’ ಎಂದಿದ್ದರು ವಿಷ್ಣು ವರ್ಧನ್.
ಇದನ್ನೂ ಓದಿ: ವಿಷ್ಣುವರ್ಧನ್ ಧ್ವನಿಯಲ್ಲೇ ‘ಹಾವಿನ ದ್ವೇಷ..’ ಸಾಂಗ್ ಕೇಳಿದ್ದೀರಾ? ಇಲ್ಲಿದೆ ಹಳೆಯ ವಿಡಿಯೋ
ವಿಷ್ಣುವರ್ಧನ್ ಹಾಗೂ ಅಂಬರೀಷ್ ನಡುವೆ ಇರುವ ಗೆಳೆತನ ಚಿತ್ರರಂಗದಲ್ಲಿ ಈಗಲೂ ಅನೇಕರಿಗೆ ಮಾದರಿ. ಇವರು ಸಾಕಷ್ಟು ಬಾರಿ ಭೇಟಿ ಆಗಿ ಒಟ್ಟಾಗಿ ಸಮಯ ಕಳೆದಿದ್ದಾರೆ. 2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ನಿಧನ ಹೊಂದಿದರು. ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ತುಂಬಾನೇ ದುಃಖಕ್ಕೆ ಒಳಗಾಗಿದ್ದರು. ಅವರನ್ನು ಕಳೆದುಕೊಂಡ ನೋವು ಅವರನ್ನು ಅತಿಯಾಗಿ ಕಾಡಿತ್ತು. ವಿಷ್ಣು ಸಾವಿನ ಒಂಭತ್ತು ವರ್ಷಗಳ ಬಳಿಕ ಅಂಬರೀಷ್ ನಿಧನ ಹೊಂದಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:49 am, Fri, 2 August 24