Friendship Day 2025: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ
ಪ್ರತಿವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ ಭಾರತದಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹವನ್ನು ಗೌರವಿಸುವ ಸಲುವಾಗಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಫ್ರೆಂಡ್‌ಶಿಪ್ ಡೇ ಯ ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರಿಗೆ ಏನಾದ್ರೂ ಗಿಫ್ಟ್ ಕೊಡುವ ಪ್ಲಾನ್ ಇದ್ರೆ, ಇಲ್ಲಿದೆ ನಿಮಗಾಗಿ ಗಿಫ್ಟ್ ಐಡಿಯಾಗಳು.

ಪ್ರತಿಯೊಬ್ಬರ ಜೀವನದಲ್ಲೂ ಆತ್ಮೀಯ ಸ್ನೇಹಿತರು (Friends) ಇದ್ದೇ ಇರುತ್ತಾರೆ. ಪ್ರಾಣಕ್ಕೆ ಪ್ರಾಣ ಕೊಡುವ ಈ ಸ್ನೇಹಿತರು ನಮ್ಮ ಖುಷಿಯಲ್ಲಿ ಮಾತ್ರವಲ್ಲದೆ, ನೋವಿನಲ್ಲೂ ಸದಾ ಕಾಲ ಜೊತೆಯಾಗಿ ನಿಲ್ಲುತ್ತಾರೆ. ಈ ನಿಷ್ಕಲ್ಮಶ ಪ್ರೀತಿಯ ಕಾರಣಕ್ಕೆಯೇ ಸ್ನೇಹ ಸಂಬಂಧವನ್ನು ರಕ್ತ ಸಂಬಂಧಗಳಿಗೂ ಮೀರಿದ ಬಂಧ ಎಂದು ಹೇಳುವುದು. ಈ ಶ್ರೇಷ್ಠ ಸಂಬಂಧವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹಿತರ ದಿನದ ಈ ಶುಭ ಸಂದರ್ಭದಲ್ಲಿ ಸದಾ ನಿಮ್ಮೊಂದಿಗಿರುವ ನಿಮ್ಮ ಬೆಸ್ಟ್ ಫ್ರೆಂಡ್‌ಗೆ ಏನಾದ್ರೂ ಗಿಫ್ಟ್ ಕೊಡ್ಬೇಕು (friendship day gift idea) ಎಂದಿದ್ರೆ, ಇಲ್ಲಿದೆ ನಿಮಗಾಗಿ ಕೆಲವೊಂದು ಗಿಫ್ಟ್ ಐಡಿಯಾಗಳು.
ಸ್ನೇಹಿತರ ದಿನದಂದು ನಿಮ್ಮ ಫ್ರೆಂಡ್‌ಗೆ ಈ ಉಡುಗೊರೆಗಳನ್ನು ನೀಡಿ:
ಹೂವಿನ ಗಿಡ: ಕೆಲವರಿಗೆ ಗಿಡಗಳೆಂದರೆ ತುಂಬಾನೇ ಪ್ರೀತಿ. ನಿಮ್ಮ ಸ್ನೇಹಿತರೂ ಸಹ ಸಸ್ಯ ಪ್ರಿಯರಾಗಿದ್ದರೆ, ಫ್ರೆಂಡ್‌ಶಿಪ್ ಡೇ ದಿನ ನೀವು ಅವರಿಗೆ ಗುಲಾಬಿ ಗಿಡ, ಮನಿ ಪ್ಲಾಂಟ್, ರಬ್ಬರ್ ಪ್ಲಾಂಟ್, ಮಲ್ಲಿಗೆ ಗಿಡ ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ನೀಡಬಹುದು.
ಫೋಟೋ ಫ್ರೇಮ್: ನಿಮ್ಮ ಸ್ನೇಹಿತರಿಗೆ ನೀವಿಬ್ಬರು ಜೊತೆಯಾಗಿ ಕ್ಲಿಕ್ಕಿಸಿದ ಫೋಟೋವನ್ನು ಜೊತೆಗೂಡಿಸಿ ಫೋಟೋ ಫ್ರೇಮ್ ಮಾಡಿ ಕೊಡಬಹುದು. ಇದು ಸ್ನೇಹಿತರಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಗಳಲ್ಲಿ ಒಂದಾಗಿದೆ.
ಸ್ಮಾರ್ಟ್ ವಾಚ್: ಸ್ಮಾರ್ಟ್ ವಾಚ್ ಈಗಿನ ಟ್ರೆಂಡ್ ಆಗಿದೆ. ಏನಾದ್ರೂ ಸ್ಟೈಲೀಶ್ ಆಗಿರುವ ವಸ್ತುಗಳನ್ನು ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಲು ಬಯಸಿದರೆ ನೀವು ಸ್ಮಾರ್ಟ್ ವಾಚ್ ಗಿಫ್ಟ್ ಮಾಡಬಹುದು. ಇದು ನಿಮ್ಮ ಸ್ನೇಹಿತರಿಗೆ ತುಂಬಾ ಉಪಯುಕ್ತವಾದ ಗ್ಯಾಜೆಟ್ ಆಗಿರುವುದರಿಂದ ನೀವು ಸ್ಟೈಲಿಶ್ ಸ್ಮಾರ್ಟ್ ವಾಚ್ ಉಡುಗೊರೆಯಾಗಿ ನೀಡಬಹುದು.
ಪುಸ್ತಕ: ನಿಮ್ಮ ಸ್ನೇಹಿತರು ಪುಸ್ತಕ ಪ್ರೇಮಿಗಳಾಗಿದ್ದರೆ ಅಥವಾ ಓದುವ ಹವ್ಯಾಸ ಅವರಿಗಿದ್ದರೆ ಫ್ರೆಂಡ್‌ಶಿಪ್ ಡೇ ದಿನ ನೀವು ಒಂದೊಳ್ಳೆ ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆಯನ್ನು ಖಂಡಿತವಾಗಿಯೂ ಅವರು ಇಷ್ಟಪಡುತ್ತಾರೆ. ಇಲ್ಲದಿದ್ದರೆ, ಸುಂದರವಾದ ಡೈರಿಯನ್ನು ಕೂಡಾ ಉಡುಗೊರೆಯಾಗಿ ನೀಡಬಹುದು.
ಕಸ್ಟಮೈಸ್ಡ್ ಉಡುಗೊರೆ: ನೀವು ನಿಮ್ಮ ಸ್ನೇಹಿತರಿಗೆ ಕಸ್ಟಮೈಸ್ ಮಾಡಿದ ಬ್ರೇಸ್ಲೆಟ್, ನೆಕ್ಲೇಸ್ ಅಥವಾ ಕೀಚೈನ್ ಉಡುಗೊರೆಯಾಗಿ ನೀಡಬಹುದು. ಇದು ಅವರಿಗೆ ಯಾವಾಗಲೂ ನಿಮ್ಮನ್ನು ನೆನಪಿಸುವ ಸ್ಮರಣೀಯ ಉಡುಗೊರೆಯ ಆಯ್ಕೆಯಾಗಿದೆ.
ಇದನ್ನೂ ಓದಿ: ನಿಮ್ಮ ಸ್ನೇಹಿತರಿಗೆ ಸ್ನೇಹ ದಿನದ ಶುಭಾಶಯ ತಿಳಿಸಲು ಇಲ್ಲಿವೆ ಮುತ್ತಿನಂಥ ಸಂದೇಶಗಳು
DIY ಉಡುಗೊರೆಗಳು: ನಿಮ್ಮ ಸ್ನೇಹಿತರಿಗೆ ನೀವು ಕೈಯಾರೆ ಮಾಡಿದ DIY ಉಡುಗೊರೆಯನ್ನು ನೀಡಬಹುದು. ಇಂತಹ ಉಡುಗೊರೆಗಳನ್ನು ಖಂಡಿತವಾಗಿಯೂ ನಿಮ್ಮ ಸ್ನೇಹಿತರು ಮೆಚ್ಚಿಕೊಳ್ಳುತ್ತಾರೆ. ಇದರಲ್ಲಿ ನಿಮ್ಮ ಕಠಿಣ ಪರಿಶ್ರಮ ಮಾತ್ರವಲ್ಲದೆ ಭಾವನೆಗಳು ಇರುವ ಕಾರಣ ಖಂಡಿತವಾಗಿಯೂ ಇದನ್ನು ನಿಮ್ಮ ಸ್ನೇಹಿತರು ಇಷ್ಟಪಡುತ್ತಾರೆ.
ಉಡುಗೊರೆಗಳ ಹೊರತಾಗಿ, ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಲು ನೀವು ನಿಮ್ಮ ಸ್ನೇಹಿತರನ್ನು ಸಿನಿಮಾ ನೋಡಲು, ಡಿನ್ನರ್ ಡೇಟ್ ಅಥವಾ ಒಂದೊಳ್ಳೆ ಸ್ಥಳಕ್ಕೆ ಟ್ರಪ್ ಕರೆದುಕೊಂಡು ಹೋಗಬಹುದು. ಈ ರೀತಿಯಾಗಿ ಕಳೆಯುವ ಕ್ಷಣಗಳು ನಿಮ್ಮ ಸ್ನೆಹವನ್ನು ಮತ್ತಷ್ಟು ಬಲಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








