International Friendship Day 2025: ನಿಮ್ಮ ಸ್ನೇಹಿತರಿಗೆ ಸ್ನೇಹ ದಿನದ ಶುಭಾಶಯ ತಿಳಿಸಲು ಇಲ್ಲಿವೆ ಮುತ್ತಿನಂಥ ಸಂದೇಶಗಳು
ಇಂದು ಅಂತಾರಾಷ್ಟ್ರೀಯ ಸ್ನೇಹ ದಿನ. ಸಂಸ್ಕೃತಿಗಳು, ಜನಾಂಗಗಳು, ಧರ್ಮಗಳು ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಸ್ನೇಹ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಪ್ರತಿವರ್ಷ ಆಚರಿಸುತ್ತದೆ. ಸ್ನೇಹ ದಿನದ ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ನೇಹಿತರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶಗಳು.

ಅಂತಾರಾಷ್ಟ್ರೀಯ ಸ್ನೇಹ ದಿನImage Credit source: Getty Images
ಈ ಜಗತ್ತಿನಲ್ಲಿರುವ ಅದ್ಭುತ, ನಿಷ್ಕಲ್ಮಶ ಸಂಬಂಧ ಎಂದರೆ ಅದು ಸ್ನೇಹ ಸಂಬಂಧ (Friendship). ಈ ಸ್ನೇಹದ ಪರಿಧಿ ವಿಸ್ತಾರವಾದದ್ದು, ಇದಕ್ಕೆ ಜಾತಿ-ಧರ್ಮ, ಮೇಲು-ಕೀಳು ಇದ್ಯಾವುದರ ಗಡಿಯೂ ಇಲ್ಲ. ಅದಕ್ಕಾಗಿಯೇ ಇದನ್ನು ಜಗತ್ತಿನ ಶ್ರೇಷ್ಠ ಬಂಧ ಎಂದು ಕರೆಯುವುದು. ಜನರ ನಡುವಿನ ಸ್ನೇಹ ಒಂದು ಕಡೆಯಾದರೆ, ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ನೇಹ ದಿನವನ್ನು ಆಚರಿಸಲಾಗುತ್ತದೆ. ಸ್ನೇಹ ದಿನದ ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರಾಣ ಸ್ನೇಹಿತರಿಗೆ (Friendship Day wishes) ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶಗಳು.
ಅಂತಾರಾಷ್ಟ್ರೀಯ ಸ್ನೇಹ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು:
- ನಿನ್ನ ಅದ್ಭುತ ಸ್ನೇಹಕ್ಕೆ ನಾನೆಂದು ಚಿರಋಣಿ. ನನ್ನ ನೋವು-ನಲಿವಿನಲ್ಲಿ ಜೊತೆಯಾಗಿ ನಿಂತ ನನ್ನ ಪ್ರಾಣ ಸ್ನೇಹಿತ/ಸ್ನೇಹಿತೆಗೆ ಸ್ನೇಹ ದಿನದ ಶುಭಾಶಯಗಳು.
- ನಿಜವಾದ ಸ್ನೇಹಕ್ಕೆ ಅರ್ಥ ನೀನು. ನನ್ನ ನೋವು ನಲಿವುಗಳಲ್ಲಿ ಜೊತೆಯಾಗಿ ನಿಂತ ನನ್ನ ಪ್ರಾಣ ಸ್ನೇಹಿತನಿಗೆ ಸ್ನೇಹ ದಿನದ ಹಾರ್ದಿಕ ಶುಭಾಶಯಗಳು.
- ನನ್ನ ಜೀವನದ ಸಂತೋಷದ ಕ್ಷಣದಲ್ಲಿ ಮಾತ್ರವಲ್ಲ ನನ್ನ ನೋವು, ಕಷ್ಟದಲ್ಲೂ ನನ್ನ ಬೆನ್ನೆಲುವಾಗಿ ನಿಂತ ನಿನಗೆ ಅನಂತ ಅನಂತ ಧನ್ಯವಾದಗಳು. ಹ್ಯಾಪಿ ಫ್ರೆಂಡ್‌ಶಿಪ್ ಡೇ.
- ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಸ್ನೇಹಿತನಾಗಿ ಪಡೆದ ನಾನೇ ಧನ್ಯ. ನನ್ನ ಪ್ರೀತಿಯ ಸ್ನೇಹಿತನಿಗೆ ಫ್ರೆಂಡ್‌ಶಿಪ್ ಡೇಯ ಶುಭಾಶಯಗಳು.
- ಸ್ನೇಹ ಎಂಬುದು ಶುದ್ಧ ಮತ್ತು ನಿಸ್ವಾರ್ಥ ಸಂಬಂಧ. ನನ್ನ ಎಲ್ಲಾ ಸ್ನೇಹಿತರಿಗೂ ಅಂತಾರಾಷ್ಟ್ರೀಯ ಸ್ನೇಹ ದಿನದ ಶುಭಾಶಯಗಳು.
- ನಿನ್ನ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಗೊಳ್ಳಲಿ, ಆರೋಗ್ಯ, ಆಯಸ್ಸು ವೃದ್ಧಿಯಾಗಲಿ. ನನ್ನ ಪ್ರೀತಿಯ ಗೆಳೆಯನಿಗೆ ಫ್ರೆಂಡ್‌ಶಿಪ್ ಡೇಯ ಶುಭಾಶಯಗಳು.
- ನಿನಗೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ನಮ್ಮ ಈ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಹ್ಯಾಪಿ ಫ್ರೆಂಡ್‌ಶಿಪ್ ಡೇ.
- ತುಂಟ ಮಾತುಗಳು, ತಮಾಷೆಗಳಿಂದ ನನ್ನ ಮೊಗದಲ್ಲಿ ನಗು ತರಿಸುವ ನನ್ನ ನೆಚ್ಚಿನ ಸ್ನೇಹಿತನಿಗೆ ಅಂತಾರಾಷ್ಟ್ರೀಯ ಸ್ನೇಹ ದಿನದ ಶುಭಾಶಯಗಳು.
- ನನ್ನ ಖುಷಿಯಲ್ಲಿ ಜೊತೆಯಾಗಿ ನಿಲ್ಲುವ, ದುಃಖದಲ್ಲಿದ್ದಾಗ ನನ್ನನ್ನು ಸಂತೈಸಿ ಶಕ್ತಿ ತುಂಬುವ ನನ್ನೆಲ್ಲಾ ಸ್ನೇಹಿತರಿಗೂ ಸ್ನೇಹ ದಿನದ ಶುಭಾಶಯಗಳು.
- ನನ್ನ ಜೀವನದ ಅತಿ ಅಮೂಲ್ಯವಾದ ಉಡುಗೊರೆ ನೀನು. ನಮ್ಮ ಈ ಸ್ನೇಹ ಸದಾ ಕಾಲ ಹೀಗೆಯೇ ಇರಲಿ.
- ರಕ್ತ ಸಂಬಂಧ, ಜಾತಿ-ಧರ್ಮಗಳಿಗೂ ಮೀರಿದ ಸುಂದರ ಬಂಧ ಸ್ನೇಹ. ನನ್ನೆಲ್ಲಾ ಸ್ನೇಹಿತರಿಗೂ ಸ್ನೇಹ ದಿನದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Wed, 30 July 25




