AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”

ಭೂ ಲೋಕದ ಸ್ವರ್ಗದಂತಿರುವ ರಾಣಿ ಝರಿ ಶಿಖರವು ಸುಂದರವಾದ ಮಲೆನಾಡಿನ ನಡುವೆ ನೆಲೆಗೊಂಡಿರುವ ಹಿಡನ್‌ ಜೆಮ್‌ ತಾಣ ಅಂತಾನೇ ಹೇಳಬಹುದು. ಇಲ್ಲಿನ ಹಚ್ಚ ಹಸಿರಿನ ಸೌಂದರ್ಯ, ಶ್ರೀಮಂತ ಜೀವವೈವಿಧ್ಯತೆ ಸಾಹಸ ಪ್ರಿಯರು ಮತ್ತು ಪ್ರಕೃತಿ ಪ್ರೇಮಿಗಳ ಪಾಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಈ ಅತ್ಯದ್ಭುತ ತಾಣದ ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
ರಾಣಿ ಝರಿ
ಮಾಲಾಶ್ರೀ ಅಂಚನ್​
|

Updated on: Jul 24, 2025 | 6:24 PM

Share

ಮಲೆನಾಡು (Malnad)  ಹೆಸರಿಗೆ ತಕ್ಕಂತೆ ಮಲೆಗಳ ನಾಡು. ಎಲ್ಲಿ ನೋಡಿದರು ದಟ್ಟವಾದ ಹಚ್ಚ ಹಸಿರಿನ ಕಾಡುಗಳು, ಬೆಟ್ಟಗಳು, ನದಿಗಳು, ಜಲಪಾತಗಳು… ಇದನ್ನು ಭೂ ಲೋಕದ ಸ್ವರ್ಗ ಎಂದರೂ ತಪ್ಪಾಗಲಾರದು. ಅದರಲ್ಲೂ ಮಳೆಗಾಲದಲ್ಲಂತೂ ಮಲೆನಾಡಿನ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ನಿಸರ್ಗದ ಈ ಸೌಂದರ್ಯವನ್ನು ಸವಿಯಲೆಂದೇ ಪ್ರಕೃತಿ ಪ್ರೇಮಿಗಳು ಜಿಟಿ ಜಿಟಿ ಮಳೆ ಬೀಳುವ ಸಮಯದಲ್ಲಿ ಜೋಗ ಜಲಪಾತ, ಆಗುಂಬೆ, ಕೊಡಚಾದ್ರಿ, ಮುಳ್ಳಯ್ಯನಗಿರಿ, ಕುದುರೆ ಮುಖಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂತಹ ಅದ್ಭುತ ತಾಣಗಳಲ್ಲಿ ಚಿಕ್ಕಮಗಳೂರಿನಲ್ಲಿ ನೆಲೆಗೊಂಡಿರುವ ರಾಣಿ ಝರಿ (Rani Jhari) ಶಿಖರವೂ ಒಂದು. ಮಂಜಿನ ಸೆರಗನ್ನು ಆವರಿಸಿರುವ ಈ ಅದ್ಭುತ ಶಿಖರ ಪಶ್ಚಿಮ ಘಟ್ಟಗಳ ಹಿಡನ್‌ ಜೆಮ್‌ ತಾಣ ಅಂತಾನೇ ಹೇಳಬಹುದು. ಈ ಅತೀ ಸುಂದರ ತಾಣ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಪ್ರಕೃತಿಯೊಂದಿಗೆ ಒಂದಷ್ಟು ಸಮಯ ಕಳೆಯುತ್ತಾ, ಮನದಲ್ಲಿರುವ ಒತ್ತಡವನ್ನೆಲ್ಲಾ ಕಡಿಮೆ ಮಾಡಬೇಕು ಎಂದುಕೊಂಡಿದ್ದರೆ ನೀವು ತಪ್ಪದೆ ಈ ರಮ್ಯ ರಮಣೀಯ ತಾಣಕ್ಕೆ ಒಂದು ಬಾರಿಯಾದರೂ ಭೇಟಿ ನೀಡಲೇಬೇಕು.

ಭೂ ಲೋಕದ ಸ್ವರ್ಗದಂತಿದೆ ರಾಣಿ ಝರಿ:

ಪಶ್ಚಿಮ ಘಟ್ಟಗಳಲ್ಲಿ ಸಹಸ್ರಾರು ಪರ್ವತಶ್ರೇಣಿಗಳಿವೆ. ಈ ಪೈಕಿ ರಾಣಿ ಝರಿಯೂ ಒಂದು. ಮೂಡಿಗೆರೆ ತಾಲೂಕಿನ ಅಂಚಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ರಾಣಿ ಝರಿಯೆಂಬ ಅದ್ಭುತ ತಾಣಕ್ಕೆ ಪ್ರಕೃತಿ ಪ್ರೇಮಿಗಳು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುವ  ಭೂ ಲೋಕದ ಸ್ವರ್ಗದಂತಿರುವ ಈ ಅದ್ಭುತ ತಾಣ ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು ಮತ್ತು ಚಾರಣಿಗರಿಗೆ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಟ್ರೆಕ್ಕಿಂಗ್‌ ಮಾಡುತ್ತಾ ರಾಣಿ ಝರಿ ಶಿಖರದ ವ್ಯೂ ಪಾಯಿಂಟ್‌ ತಲುಪಿದರೆ, ನೀವು ಸ್ವರ್ಗವನ್ನೇ ನೋಡಿದಂತಾಗುತ್ತದೆ. ಎತ್ತರದ ಶಿಖರದಲ್ಲಿ ಮೋಡಗಳ ಓಡಾಟ, ಪಕ್ಷಿಗಳ ಚಿಲಿಪಿಲಿ, ತಂಗಾಳಿ, ಅಹ್ಲಾದಕರ ವಾತಾವರಣ, ಹಚ್ಚಹಸಿರಿನ ಹುಲ್ಲುಗಾವಲು  ಪ್ರಕೃತಿಯ ಈ ಸೌಂದರ್ಯವನ್ನು ಸವಿಯುತ್ತಾ ಇಲ್ಲಿ ಸಮಯ ಕಳೆದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವುದಂತೂ ಖಂಡಿತ.

ಇದನ್ನೂ ಓದಿ
Image
ಕೂಡ್ಲು ತೀರ್ಥ ಜಲಪಾತದ ಸೊಬಗನ್ನು ಸವಿಯಲು ಯಾವಾಗ ಹೋದ್ರೆ ಬೆಸ್ಟ್‌
Image
ಮಳೆಯಲ್ಲಿ ಒಂದು ರೌಂಡ್‌ ಆಗುಂಬೆಯ ಈ ಸ್ಥಳಗಳಿಗೆ ಹೋಗಿ ಬನ್ನಿ
Image
ಪ್ರೀತಿಸಿ ಮದುವೆಯಾಗುವವರಿಗೆ ಬರುವ ಎಲ್ಲ ಅಡೆತಡೆ ನಿವಾರಿಸುತ್ತಾಳೆ ಪದ್ಮಾವತಿ
Image
ಕರ್ನಾಟಕದ ಅಪರೂಪದ ಪಕ್ಷಿತಾಣ ಕೊಕ್ಕರೆ ಬೆಳ್ಳೂರು

ಐತಿಹಾಸಿಕ ಹಿನ್ನೆಲೆ:

ಸರಿಸುಮಾರು 1,758 ಮೀಟರ್ (5,768 ಅಡಿ) ಎತ್ತರದಲ್ಲಿರುವ ರಾಣಿ ಝರಿ ಶಿಖರವು ಪಶ್ಚಿಮ ಘಟ್ಟದಲ್ಲಿರುವ ಒಂದು ಪ್ರಮುಖ ಶಿಖರವಾಗಿದೆ. ಇಲ್ಲಿನ ಸ್ಥಳಿಯರ ಪ್ರಕಾರ ಮೈಸೂರಿನ ಟಿಪ್ಪು ಸುಲ್ತಾನನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮಿನಿ ದೇವಿಯು ಈ ಶಿಖರದಿಂದ ಕೆಳಕ್ಕೆ ಜಿಗಿದ ನಂತರ ಈ ಸ್ಥಳಕ್ಕೆ ರಾಣಿ ಝರಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.  ಈ ಶಿಖರದ ಮೇಲೇರಿ ನಿಂತು ನೋಡಿದರೆ ಸುಮಾರು 2,500 ಅಡಿ ಕೆಳಕ್ಕೆ ದಟ್ಟವಾಗಿ ಹಬ್ಬಿರುವ ಹಚ್ಚ ಹಸಿರಿನಿಂದ ತುಂಬಿದ ಕಾನನಗಳ ರಮಣೀಯ ನೋಟವನ್ನು ಕಾಣಬಹುದು. ಅಲ್ಲದೆ ಇಲ್ಲಿಂದ ಘಾಟಿಕಲ್ಲು ವ್ಯೂ ಪಾಯಿಂಟ್‌, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮತ್ತು ಬಲ್ಲಾಳರಾಯನ ದುರ್ಗದ ಕೊಟೆಗಳ ವಿಹಂಗಮ ನೋಟವನ್ನು ಸವಿಯಬಹುದು.

Rani Jhari

ಚಾರಣದ ಹಾದಿ ಹೇಗಿದೆ:

ದುರ್ಗಹಳ್ಳಿಯಿಂದ 4 ಕಿ.ಮೀ, ಸುಂಕಸಾಲೆಯಿಂದ 7 ಕಿ.ಮೀ, ಕೊಟ್ಟಿಗೆ ಹಾರದಿಂದ 41 ಕಿಮೀ ದೂರದಲ್ಲಿರುವ  ರಾಣಿ ಝರಿ ಶಿಖರಕ್ಕೆ ಇಲ್ಲಿಗೆ ಚಾರಣ ಹೋಗಲು ಅಷ್ಟೇನು ಕಷ್ಟದ ಹಾದಿಯಿಲ್ಲ. ಸುಲಭವಾಗಿ ಬಹುಬೇಗನೆ ಶಿಖರವನ್ನು ತಲುಪಬಹುದು.  ರಾಣಿ ಝರಿ ವ್ಯೂವ್‌ ಪಾಯಿಂಟ್‌ ಚಾರಣ ಕೇವಲ 4 ಕಿ.ಮೀ. ಇಲ್ಲಿಗೆ ಟ್ರೆಕ್ಕಿಂಗ್‌ ಕಾಲಭೈರವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ.  ರಾಣಿ ಝರಿಗೆ ಸಾಗುವ ದಾರಿ ತುಂಬಾನೇ ಸೊಗಸಾಗಿದೆ. ಹಚ್ಚ ಹಸಿರಿನ ಮತ್ತು ವೈವಿಧ್ಯಮಯ ಸಸ್ಯವರ್ಗದ ಮೂಲಕ ಚಾರಣ ಸಾಗುತ್ತದೆ. ದಾರಿಯುದ್ದಕ್ಕೂ, ಚಾರಣಿಗರು ಅಪರೂಪದ ಔಷಧೀಯ ಗಿಡಮೂಲಿಕೆಗಳು ಮತ್ತು ರೋಮಾಂಚಕ ಕಾಡು ಹೂವುಗಳು ಸೇರಿದಂತೆ ವಿವಿಧ ಸಸ್ಯಗಳನ್ನು ವೀಕ್ಷಿಸಬಹುದು. ಸುತ್ತಲೂ ಹಸಿರಿನಿಂದ ತುಂಬಿರುವ ಕಾಫಿ, ಗಿಡಗಳು, ಚಿಕ್ಕಪುಟ್ಟ ಹಳ್ಳಿಗಳು ಇವುಗಳ ಸೌಂದರ್ವನ್ನು ಸವಿಯುತ್ತಾ ಮುಂದೆ ಸಾಗಿದರೆ, ಮಂಜಿನ ಸೆರಗಿನ ಸೌಂದರ್ಯವನ್ನು ಮುಚ್ಚಿಕೊಂಡಿರುವ ಶಿಖರವನ್ನು ಕಣ್ತುಂಬಿಕೊಳ್ಳಬಹುದು.

ವಿಡಿಯೋ ಇಲ್ಲಿದೆ ನೋಡಿ:

ಸಮಯ ಮತ್ತು ಪ್ರವೇಶ ಶುಲ್ಕ:

ರಾಣಿ ಝರಿ ವ್ಯೂಪಾಯಿಂಟ್ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ,  ಮುಂಜಾನೆ ಮತ್ತು ಮಧ್ಯಾಹ್ನ ಭೇಟಿ ನೀಡಲು ಅನುಕೂಲಕರವಾಗಿದೆ. ಇಲ್ಲಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಉಚಿತವಾಗಿ ಪ್ರವಾಸಿಗರು ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದು.

ತಲುಪುವುದು ಹೇಗೆ:

ರಾಣಿ ಝರಿ ವ್ಯೂ ಪಾಯಿಂಟ್ ದುರ್ಗದಹಳ್ಳಿ ಗ್ರಾಮದಲ್ಲಿದ್ದು, ಚಿಕ್ಕಮಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಇದು ಮೂಡಿಗೆರೆಯಿಂದ 41 ಕಿ.ಮೀ ಮತ್ತು ಕೊಟ್ಟಿಗೆಹಾರದಿಂದ 24 ಕಿ.ಮೀ ದೂರದಲ್ಲಿದೆ. ಇಲ್ಲಿದೆ ತಲುಪಲು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಕಳಸ ಮಾರ್ಗದಲ್ಲಿ ಸುಮಾರು 17 ಕಿಮೀ ಸಾಗಿದರೆ ಸುಂಕಸಾಳ ಎಂಬ ಊರು ಸಿಗುತ್ತದೆ. ಇಲ್ಲಿಂದ ಕೇವಲ 3 ಕಿ.ಮೀ ಚಲಿಸಿದರೆ ರಾಣಿ ಝರಿಯ ಬುಡವನ್ನು ತಲುಪಬಹುದು. ರಾಣಿ ಝರಿ ಶಿಖರವನ್ನು ತಲುಪಲು  ಟ್ರೆಕ್ಕಿಂಗ್‌ ಮೂಲಕವೇ ಸಾಗಬೇಕಾಗುತ್ತದೆ.

Rani Jhari (3)

ಇದನ್ನೂ ಓದಿ: ಪ್ರವಾಸಿಗರೇ… ಈ ಸಮಯದಲ್ಲಿ ತಪ್ಪಿಯೂ ರಮಣೀಯ ಕೂಡ್ಲು ತೀರ್ಥ ಜಲಪಾತದ ಕಡೆಗೆ ಹೋಗಬೇಡಿ

ಹತ್ತಿರದ ಆಕರ್ಷಣೆಗಳು:

ಬಲ್ಲಾಳರಾಯನ ದುರ್ಗಾ ಕೋಟೆ: ರಾಣಿ ಝರಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಬಲ್ಲಾಳರಾಯನ ಕೋಟೆಗೂ ನೀವು ಭೇಟಿ ನೀಡಬಹುದು. ಸಾಹಸ ಪ್ರೇಮಿಗಳಿಗೆ ಟ್ರೆಕ್ಕಿಂಗ್‌ ಹೋಗಲು ಈ ಸ್ಥಳ ಸೂಕ್ತವಾಗಿದೆ.

ಕೆಲಗೂರ್ ಟೀ ಎಸ್ಟೇಟ್: ಈ ತಾಣ ರಾಣಿ ಝರಿಯಿಂದ ಸುಮಾರು 9 ಕಿ.ಮೀ ದೂರದಲ್ಲಿದೆ ಮತ್ತು ಸಾವಯವ ಚಹಾ ಮತ್ತು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರೇಮಿಗಳಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸ್ಥಳ ಇದಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ರಾಣಿ ಝರಿಯಿಂದ ಸರಿಸುಮಾರು 50 ಕಿ.ಮೀ ದೂರದಲ್ಲಿರುವ ಈ ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಟ್ರೆಕ್ಕಿಂಗ್‌ ಪ್ರಿಯರ ಸ್ವರ್ಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ