AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಸರಿಯಾದ ಸಮಯ ಆಗುಂಬೆಯ ಈ ಸ್ಥಳಗಳಿಗೆ ಹೋಗಲು

ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಅಂತಾನೇ ಕರಿತಾರೆ. ಈ ಸುಂದರ ಸ್ಥಳ ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದರೆ ತಪ್ಪಾಗಲಾರದು. ಇಲ್ಲಿನ ವಾತಾವರಣ ಎಂತಹವರನ್ನೂ ಮನಸೂರೆಗೊಳಿಸುತ್ತದೆ. ನಿಸರ್ಗ ಪ್ರೇಮಿಗಳಂತಲೂ ಈ ಸುಂದರ ತಾಣಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ನಿಮಗೂ ಕೂಡಾ ಆಗುಂಬೆಗೆ ಟ್ರಿಪ್‌ ಹೋಗೋದು ಅಂದ್ರೆ ಸಖತ್‌ ಇಷ್ಟನಾ? ಹಾಗಿದ್ರೆ ಜಿಟಿ ಜಿಟಿ ಸುರಿಯುವ ಈ ಮಳೆಯಲ್ಲಿ ಆಗುಂಬೆಯ ಈ ಕೆಲವು ಆಫ್‌ಬೀಟ್‌ ತಾಣಗಳಿಗೆ ನೀವು ತಪ್ಪದೆ ವಿಸಿಟ್‌ ಮಾಡ್ಲೇಬೇಕು.

ಈಗ ಸರಿಯಾದ ಸಮಯ ಆಗುಂಬೆಯ ಈ ಸ್ಥಳಗಳಿಗೆ ಹೋಗಲು
ಆಗುಂಬೆಯ ಅದ್ಭುತ ತಾಣಗಳುImage Credit source: Google
ಮಾಲಾಶ್ರೀ ಅಂಚನ್​
|

Updated on: Jun 17, 2025 | 8:50 PM

Share

ಈಗಾಗಲೇ ಮಾನ್ಸೂನ್‌ ಸೀಸನ್‌ ಆರಂಭವಾಗಿಬಿಟ್ಟಿದೆ. ಜಿಟಿ ಜಿಟಿ ಸುರಿಯುವ ಈ ಮಳೆಯ ನಡುವೆ ಟ್ರಿಪ್‌ ಹೋಗುವ ಮಜಾನೇ ಬೇರೆ. ಹೌದು ಮಳೆಗಾಲದ ಪ್ರವಾಸವು ಚಿರಸ್ಮರಣೀಯವಾದ ಸುಂದರ ಅನುಭೂತಿಯನ್ನು ನೀಡುತ್ತದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸ ಪ್ರಿಯರು ಜಲಪಾತಗಳಿಗೆ, ಹಚ್ಚ ಹಸಿರಿನ ತಾಣಗಳಿಗೆ ಟ್ರಿಪ್‌ ಪ್ಲಾನ್‌ ಮಾಡ್ತಾರೆ. ಮಳೆಗಾಲದಲ್ಲಿ ಟ್ರಿಪ್‌ ಹೋಗುವುದೆಂದರೆ ನಿಮಗೂ ಇಷ್ಟನಾ? ಹಾಗಿದ್ರೆ ಈ ಬಾರಿ ದಕ್ಷಿಣದ ಚಿರಾಂಪುಜಿ ಅಂತಾನೇ ಪ್ರಸಿದ್ಧಿ ಪಡೆದಿರುವ ಆಗುಂಬೆಗೆ (Agumbe) ಭೇಟಿ ನೀಡಿ. ಆಗುಂಬೆಯಲ್ಲಿ ಮಳೆಗಾಲದಲ್ಲಿ (Monsoon Trip) ಭೇಟಿ ನೀಡಲೇಬೇಕಾದ ಹಲವು ಸುಂದರ ಆಫ್‌ ಬೀಟ್‌ ತಾಣಗಳಿದ್ದು, ಅಲ್ಲಿಗೆ ನೀವು ತಪ್ಪದೆ ವಿಸಿಟ್‌ ಮಾಡ್ಲೇಬೇಕು.

ಆಗುಂಬೆಯ ಈ ಕೆಲವು ಅದ್ಭುತ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ:

ಸಹ್ಯಾದ್ರಿ ಬೆಟ್ಟಗಳ ಶ್ರೇಣಿಯಲ್ಲಿ ಕಂಗೊಳಿಸುವ ಸುಂದರ ಗಿರಿಧಾಮ ಆಗುಂಬೆ. ಭಾರೀ ಮಳೆ, ಹಚ್ಚ ಹಸಿರಿನ ವಾತಾವರಣ, ಮೋಡಿ ಮಾಡುವ ಸೂರ್ಯಾಸ್ತಕ್ಕೆ ಹೆಸರುವಾಸಿಯಾದ ಈ ಸುಂದರ ತಾಣ ದಕ್ಷಿಣದ ಭಾರತದ ಚಿರಾಪುಂಜಿ ಪ್ರಸಿದ್ಧಿ ಪಡೆದಿದೆ. ಪ್ರಕೃತಿ ಪ್ರೇಮಿಗಳಂತೂ ಈ ಸ್ಥಳಕ್ಕೆ ಭೇಟಿ ನೀಡುವುದೆಂದರೆ ಬಹಳ ಇಷ್ಟ. ಅದರಲ್ಲೂ ಮಳೆಗಾಲದಲ್ಲಿ ಆಗುಂಬೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ನೀವೇನಾದರೂ ಮಾನ್ಸೂನ್‌ನಲ್ಲಿ ಪ್ರವಾಸ ಹೋಗಲು ಪ್ಲಾನ್‌ ಮಾಡಿದ್ದರೆ, ಆಗುಂಬೆಯ ಈ ಕೆಲವು ತಾಣಗಳಿಗೆ ತಪ್ಪದೆ ಭೇಟಿ ನೀಡಿ.

ಗೋಪಾಲಕೃಷ್ಣ ದೇವಸ್ಥಾನ: ಆಗುಂಬೆಯಿಂದ 25 ಕಿ.ಮೀ ದೂರದಲ್ಲಿರುವ 14 ನೇ ಶತಮಾನದಲ್ಲಿ ನಿರ್ಮಾಣಗೊಂಡ ಗೋಪಾಲಕೃಷ್ಣ ದೇವಾಲಯವು ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ.  ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯ ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯ ಅದರ ಅದ್ಭುತವಾದ ವಾಸ್ತುಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ
Image
ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ?
Image
ಪ್ರೀತಿಸಿ ಮದುವೆಯಾಗುವವರಿಗೆ ಬರುವ ಎಲ್ಲ ಅಡೆತಡೆ ನಿವಾರಿಸುತ್ತಾಳೆ ಪದ್ಮಾವತಿ
Image
ಕರ್ನಾಟಕದ ಅಪರೂಪದ ಪಕ್ಷಿತಾಣ ಕೊಕ್ಕರೆ ಬೆಳ್ಳೂರು
Image
ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಪ್ರವೇಶ : ಉಚಿತ

ಸಮಯ : ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ

ಸನ್ಸೆಟ್‌ ಪಾಯಿಂಟ್:‌ ಆಗುಂಬೆಯಲ್ಲಿ ಸನ್ಸೆಟ್‌ ಪಾಯಿಂಟ್‌ ಸ್ಥಳವನ್ನು ನೀವು ತಪ್ಪದೇ ನೋಡಲೇಬೇಕು.  ಈ ಸುಂದರ  ಸ್ಥಳವು ಮುಖ್ಯ ಪಟ್ಟಣದಿಂದ 10 ನಿಮಿಷಗಳ ನಡಿಗೆಯ ದೂರದಲ್ಲಿದೆ. ಇದೊಂದು ಪಶ್ಚಿಮ ಘಟ್ಟದ ಸಾಲುಗಳಲ್ಲಿರುವ ಅತ್ಯಂತ ಎತ್ತರದಲ್ಲಿರುವ ತಾಣ. ಇಲ್ಲಿ ನೀವು ಹಸಿರ ತಾಣದ ನಡುವೆ ಸೂರ್ಯ ಹುಟ್ಟುವ ಮತ್ತು ಸಂಜೆ ಸೂರ್ಯ ಮುಳುಗುವ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಪ್ರವೇಶ : ಉಚಿತ

ಸಮಯ : ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ

Agumbe Sunset Point

ಬರ್ಕಣ ಜಲಪಾತ: ಸೀತಾ ನದಿಯಿಂದ 260 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಹಾಲಿನ ನೊರೆಯಂತಿರುವ  ಬರ್ಕಣ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಭಾರತದ 10 ನೇ ಅತಿ ಎತ್ತರದ ಜಲಪಾತ ಎನ್ನುವ ಹಿರಿಮೆಯನ್ನು ಹೊಂದಿರುವ ಈ ಜಲಪಾತ ಪಶ್ಚಿಮ ಘಟ್ಟದ ಗುಪ್ತ ರತ್ನ ಅಂತಾನೇ ಹೆಸರುವಾಸಿಯಾಗಿದೆ. ಈ ಮಳೆಗಾಲದಲ್ಲಿ ಈ ತಾಣಕ್ಕೆ ನೀವು ತಪ್ಪದೆ ಭೇಟಿ ಮಾಡಲೇಬೇಕು.

ಪ್ರವೇಶ ಶುಲ್ಕ : ಪ್ರತಿ ವ್ಯಕ್ತಿಗೆ 200 ರೂ.

ಸಮಯ : ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ

ಜೋಗಿ ಗುಂಡಿ ಜಲಪಾತ: ಆಗುಂಬೆಯ ಸಣ್ಣ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ. ಈ ಜಲಪಾತದಲ್ಲಿ ವರ್ಷವಿಡಿ ನೀರಿದ್ದರೂ, ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವ ಮಜಾನೇ ಬೇರೆ. ಮಾನ್ಸೂನ್‌ ಸೀಸನ್‌ನಲ್ಲಿ ಅಷ್ಟು ಸುಂದರವಾಗಿರುತ್ತೆ ಈ ತಾಣ.  ಜೋಗಿ ಗುಂಡಿ ಜಲಪಾತವು ಆಗುಂಬೆ ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಒಂದು ಭವ್ಯವಾದ ಜಲಪಾತವಾಗಿದ್ದು, ಈ ಬಾರಿ ಮಳೆಯ ನಡುವೆ ನೀವು ಇಲ್ಲಿಗೆ ಟ್ರೆಕ್ಕಿಂಗ್‌ ಹೋಗಬಹುದು.

ಪ್ರವೇಶ ಶುಲ್ಕ : 100 ರೂ.

ಸಮಯ : ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ

ಒನಕೆ ಅಬ್ಬಿ ಜಲಪಾತ: ಆಗುಂಬೆ ಬಸ್ ನಿಲ್ದಾಣದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಒನಕೆ ಅಬ್ಬಿ ಜಲಪಾತವು ಆಗುಂಬೆಯ ಆದ್ಭುತ ತಾಣಗಳಲ್ಲಿ ಒಂದಾಗಿದೆ. 400 ಅಡಿ ಎತ್ತರದಿಂದ ಧುಮುಕುವ ಈ ಜಲಪಾತವು ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದ್ದು, ಇದರ ಸೌಂದರ್ಯವನ್ನು ನೋಡುವುದೇ ಒಂದು ಚೆಂದ.

ಪ್ರವೇಶ : ಉಚಿತ

ಸಮಯ : ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ

Agumbe (1)

ಇಷ್ಟು ಮಾತ್ರವಲ್ಲದೆ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ, ಆಗುಂಬೆ ಘಾಟ್‌, ಕುಂದಾದ್ರಿ ಬೆಟ್ಟ, ಮಾಲ್ಗುಡಿ ಡೇಸ್‌ ಹೌಸ್‌, ಕವಲೇದುರ್ಗ ಕೋಟೆ, ಮಣಿ ಜಲಾಶಯಗಳಿಗೂ ಭೇಟಿ ನೀಡಬಹುದು.

ಇದನ್ನೂ ಓದಿ: ಕೊಕ್ಕರೆಗಳ ನೆಲೆವೀಡು ʼಕೊಕ್ಕರೆ ಬೆಳ್ಳೂರುʼ ಪಕ್ಷಿ ಧಾಮಕ್ಕೆ ನೀವು ಒಂದ್ಸಲನಾದ್ರೂ ಭೇಟಿ ನೀಡ್ಲೇಬೇಕು

ಆಗುಂಬೆ ಘಾಟ್‌ ಎಲ್ಲಿ ಬರುತ್ತೆ?

ಬೆಂಗಳೂರಿನಿಂದ ಸುಮಾರು 8 ಗಂಟೆ, ಮಂಗಳೂರಿನಿಂದ ಸುಮಾರು 3 ಗಂಟೆ, ಉಡುಪಿಯಿಂದ ಸುಮಾರು 1.5 ಗಂಟೆ ಹಾಗೂ ಚಿಕ್ಕಮಗಳೂರಿನಿಂದ 4.5 ಗಂಟೆ ದೂರದಲ್ಲಿರುವ ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನೆಲೆಗೊಂಡಿದೆ. ಈ ತಾಣ ಸೂರ್ಯಾಸ್ತ, ಟ್ರೆಕ್ಕಿಂಗ್‌, ಫೋಟೋಗ್ರಫಿ, ಸೂರ್ಯಾಸ್ತದ ಅನುಭವವನ್ನು ಪಡೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಟೆನ್ಷನ್‌ ಫ್ರೀಯಾಗಿ ಸುತ್ತಾಡಬೇಕು ಎಂದರೆ ಅಲ್ಲಲ್ಲಿ ಝುಳು ಝುಳು ನೀರಿನ ಸದ್ದು, ಪಕ್ಷಿಗಳ ಚಿಲಿಪಿಲಿ, ತಣ್ಣನೆಯ ಗಾಳಿ, ಹಚ್ಚ ಹಸಿರಿನ ವಾತಾವರಣದಿಂದ ಕೂಡಿದ ಅದ್ಭುತ ತಾಣವಾದ ಆಗುಂಬೆಗೆ ಭೇಟಿ ನೀಡಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ