AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kedarnath Yatra 2025: ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ?

ಕೇದಾರನಾಥ ಯಾತ್ರೆಯಲ್ಲಿ ಗೌರಿಕುಂಡದಲ್ಲಿ ಸ್ನಾನ ಮಾಡುವುದು ಅತ್ಯಂತ ಮುಖ್ಯವಾದ ಆಚರಣೆಯಾಗಿದೆ. ಪಾರ್ವತಿ ದೇವಿ ತಪಸ್ಸು ಮಾಡಿದ ಪವಿತ್ರ ಸ್ಥಳವಾದ ಗೌರಿಕುಂಡದಲ್ಲಿ ಸ್ನಾನ ಮಾಡುವುದರಿಂದ ಪಾಪಗಳ ನಿವಾರಣೆ ಮತ್ತು ಆಧ್ಯಾತ್ಮಿಕ ಶುದ್ಧೀಕರಣ ಸಾಧ್ಯ ಎಂದು ನಂಬಲಾಗಿದೆ. ಬಿಸಿ ಮತ್ತು ತಣ್ಣೀರಿನ ಕೊಳಗಳಿರುವ ಗೌರಿಕುಂಡವು ಔಷಧೀಯ ಗುಣಗಳನ್ನೂ ಹೊಂದಿದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಇಲ್ಲಿ ಸ್ನಾನ ಮಾಡುವ ವ್ಯಕ್ತಿಗೆ ಪಾರ್ವತಿ ದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.

Kedarnath Yatra 2025: ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ?
Gaurikund
ಅಕ್ಷತಾ ವರ್ಕಾಡಿ
|

Updated on: Jun 17, 2025 | 8:19 AM

Share

ಕೇದಾರನಾಥದ ಪ್ರಯಾಣವು ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ.ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಕೇದಾರನಾಥ ಧಾಮವು ಲಕ್ಷಾಂತರ ಹಿಂದೂಗಳ ನಂಬಿಕೆಯ ಕೇಂದ್ರವಾಗಿದೆ. ದೇವಭೂಮಿ ಉತ್ತರಾಖಂಡದಲ್ಲಿರುವ ಈ ಪವಿತ್ರ ಸ್ಥಳವು ಶಿವನ ಭಕ್ತರಿಗೆ ಮೋಕ್ಷ ಮತ್ತು ಶಾಂತಿಯ ಸಂಕೇತವಾಗಿದೆ. ಈ ತೀರ್ಥಯಾತ್ರೆಯ ಸಮಯದಲ್ಲಿ ಗೌರಿಕುಂಡದಲ್ಲಿ ಸ್ನಾನ ಮಾಡುವುದು ಬಹಳ ಮಹತ್ವದ್ದಾಗಿದೆ. ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಈ ಸ್ನಾನವನ್ನು ಒಂದು ಪ್ರಮುಖ ಆಚರಣೆ ಎಂದು ಪರಿಗಣಿಸಲಾಗುತ್ತದೆ. ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ ಮುಖ್ಯ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಗೌರಿಕುಂಡ ಒಂದು ಪವಿತ್ರ ಸಂಗಮ:

ಕೇದಾರನಾಥ ಧಾಮಕ್ಕಿಂತ 16 ಕಿ.ಮೀ ಮೊದಲು ಇರುವ ಗೌರಿಕುಂಡ ಒಂದು ಪ್ರಮುಖ ತಾಣವಾಗಿದೆ. ಈ ಸ್ಥಳವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಮಾತ್ರವಲ್ಲದೆ ಪೌರಾಣಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನೂ ಹೊಂದಿದೆ. ಗೌರಿಕುಂಡಕ್ಕೆ ಗೌರಿ ಎಂದೂ ಕರೆಯಲ್ಪಡುವ ಪಾರ್ವತಿ ದೇವಿಯ ಹೆಸರಿಡಲಾಗಿದೆ. ಪುರಾಣಗಳ ಪ್ರಕಾರ, ಈ ಸ್ಥಳದಲ್ಲಿಯೇ ಪಾರ್ವತಿ ದೇವಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ಕಠಿಣ ತಪಸ್ಸು ಮಾಡಿದ್ದಳು. ಜೊತೆಗೆ ಗಣೇಶನ ಶಿರಚ್ಛೇದ ಮಾಡಿ ನಂತರ ಅವನಿಗೆ ಆನೆಯ ತಲೆಯನ್ನು ನೀಡಿ ಪುನರ್ಜನ್ಮದ ನೀಡಿದ ಸ್ಥಳವೂ ಕೂಡ ಇದೇ ಎಂದು ನಂಬಲಾಗಿದೆ.

ಇದರಿಂದಾಗಿ, ಗೌರಿಕುಂಡವು ಪಾರ್ವತಿ ದೇವಿ ಮತ್ತು ಗಣೇಶನೊಂದಿಗೆ ಸಂಬಂಧ ಹೊಂದಿರುವ ಪವಿತ್ರ ಸ್ಥಳವಾಗಿದೆ. ಗೌರಿಕುಂಡವು ಎರಡು ನೀರಿನ ಕೊಳಗಳನ್ನು ಹೊಂದಿದೆ. ಅವುಗಳಲ್ಲಿ ಒಂದರಲ್ಲಿ ಬಿಸಿನೀರು ಮತ್ತು ಇನ್ನೊಂದರಲ್ಲಿ ತಣ್ಣೀರು ಇದೆ. ಈ ನೀರಿನಲ್ಲಿ ಔಷಧೀಯ ಗುಣಗಳಿವೆ ಎಂದು ಸ್ಥಳೀಯರು ನಂಬುತ್ತಾರೆ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಗೌರಿಕುಂಡದ ಸ್ನಾನದ ಮಹತ್ವ:

ಹಿಂದೂ ನಂಬಿಕೆಗಳ ಪ್ರಕಾರ, ಗೌರಿಕುಂಡದಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ತೊಳೆದು ಹೋಗುತ್ತವೆ. ಶುದ್ಧ ಹೃದಯದಿಂದ ಈ ಗೌರಿಕುಂಡದಲ್ಲಿ ಸ್ನಾನ ಮಾಡುವ ಯಾವುದೇ ಭಕ್ತನು ಹಿಂದಿನ ಜನ್ಮಗಳ ಪಾಪಗಳನ್ನು ತೊಡೆದುಹಾಕಬಹುದು ಮತ್ತು ಹೊಸ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಬಹುದು ಎಂದು ನಂಬಲಾಗಿದೆ. ಗೌರಿಕುಂಡದಲ್ಲಿ ಸ್ನಾನ ಮಾಡುವುದನ್ನು ದೈಹಿಕ ಮತ್ತು ಮಾನಸಿಕ ಶುದ್ಧೀಕರಣದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸ್ಥಳವು ಪಾರ್ವತಿ ದೇವಿಯು ತಪಸ್ಸು ಮಾಡಿದ ಸ್ಥಳವಾಗಿರುವುದರಿಂದ, ಈ ಗೌರಿಕುಂಡದಲ್ಲಿ ಸ್ನಾನ ಮಾಡುವ ವ್ಯಕ್ತಿಗೆ ಪಾರ್ವತಿ ದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ