ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಉತ್ತರಕಾಶಿ ಪ್ರವಾಹ ಸಂತ್ರಸ್ತೆ
ಉತ್ತರಕಾಶಿಯ ಧರಾಲಿಯಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿದ ಉತ್ತರಾಖಂಡದ ಸರ್ಕಾರಕ್ಕೆ ಧನ್ಯವಾದ ಹೇಳಲು ಹರ್ಸಿಲ್ ಹೆಲಿಪ್ಯಾಡ್‌ನಲ್ಲಿ ರಕ್ಷಿಸಲ್ಪಟ್ಟ ಯಾತ್ರಿಕರೊಬ್ಬರು ತಮ್ಮ ದುಪಟ್ಟಾ ಹರಿದು ಅದನ್ನೇ ರಾಖಿಯನ್ನಾಗಿ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಕೈಗೆ ಕಟ್ಟಿದರು. ಅದರ ವಿಡಿಯೋ ಇಲ್ಲಿದೆ.
ಉತ್ತರಕಾಶಿ, ಆಗಸ್ಟ್ 8: ಉತ್ತರಕಾಶಿಯ (Uttarkashi Flood) ಧರಾಲಿಯಲ್ಲಿ ಉಂಟಾದ ಮೇಘಸ್ಫೋಟದ ಪ್ರದೇಶಗಳ ಪರಿಶೀಲನಾ ಸಮಯದಲ್ಲಿ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರಿಗೆ ಉತ್ತಮ ರಕ್ಷಣಾ ಕಾರ್ಯಾಚರಣೆಗಾಗಿ ಜನರು ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಗುಜರಾತ್‌ನಿಂದ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ದುಪಟ್ಟಾವನ್ನು ಹರಿದು ಆ ತುಂಡನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕೈಗೆ ರಾಖಿಯನ್ನಾಗಿ ಕಟ್ಟಿದ್ದಾರೆ. ಈ ಮೂಲಕ ತಮ್ಮನ್ನು ಸುರಕ್ಷಿತವಾಗಿ ರಕ್ಷಿಸಿದ್ದಕ್ಕೆ ಅವರು ಕೃತಜ್ಞತೆ ತಿಳಿಸಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ರಾಖಿ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ರಕ್ಷಣೆ ಮತ್ತು ಕರ್ತವ್ಯದ ಬಂಧವನ್ನು ಸಂಕೇತಿಸುತ್ತದೆ.
ಈ ವೇಳೆ ಆ ಮಹಿಳೆ ಸಿಎಂ ಧಾಮಿ ಅವರಿಗೆ “ನನಗೆ ನೀವು ಶ್ರೀಕೃಷ್ಣನಂತೆ. ನನ್ನನ್ನು ಮಾತ್ರವಲ್ಲ, ಇಲ್ಲಿರುವ ಎಲ್ಲಾ ತಾಯಂದಿರು ಮತ್ತು ಸಹೋದರಿಯರನ್ನು ನಿಜವಾದ ಸಹೋದರನಂತೆ ರಕ್ಷಿಸುತ್ತಿದ್ದೀರಿ. ನೀವು 3 ದಿನಗಳಿಂದ ನಮ್ಮೊಂದಿಗಿದ್ದೀರಿ, ನಿಮ್ಮ ಕಾಳಜಿಗೆ ಧನ್ಯವಾದ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

