AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಕಾಶಿ ಮೇಘಸ್ಫೋಟ: ಐದು ಸಾವು, 11 ಯೋಧರು ಸೇರಿದಂತೆ ಸುಮಾರು 150 ಜನ ನಾಪತ್ತೆ, ಶೋಧಕಾರ್ಯ ಜಾರಿ

ಉತ್ತರಕಾಶಿ ಮೇಘಸ್ಫೋಟ: ಐದು ಸಾವು, 11 ಯೋಧರು ಸೇರಿದಂತೆ ಸುಮಾರು 150 ಜನ ನಾಪತ್ತೆ, ಶೋಧಕಾರ್ಯ ಜಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 06, 2025 | 7:45 PM

Share

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು ಮೇಘಸ್ಫೋಟದಿಂದ ಭಾರೀ ಅನಾಹುತಕ್ಕೊಳಗಾಗಿರುವ ಧರಾಲಿ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು. ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ನಿರ್ಗತಿಕರಾಗಿರುವ ಹಲವಾರು ಸಂತ್ರಸ್ತರೊಂದಿಗೆ ಮುಖ್ಯಮಂತ್ರಿ ಧಾಮಿ ಮಾತುಕತೆ ನಡೆಸಿ ಅದಷ್ಟು ಬೇಗ ಪರಿಹಾರದ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಉತ್ತರಕಾಶಿ, ಉತ್ತತಾಖಂಡ್, ಆಗಸ್ಟ್ 6: ಉತ್ತರಕಾಶಿ ಜಿಲ್ಲೆಯ ಧರಾಲಿ ಎಂಬಲ್ಲಿ ಮೇಘಸ್ಫೋಟದಿಂದ ಸೃಷ್ಟಿಯಾದ ಹಠಾತ್ ಪ್ರವಾಹದಿಂದ ಏನಿಲ್ಲವೆಂದರೂ 5 ಜನ ಸತ್ತು ಕನಿಷ್ಠ 150 ಜನ ನಾಪತ್ತೆಯಾಗಿದ್ದಾರೆ, ಇವರಲ್ಲಿ 11 ಜನ ಸೈನಿಕರು ಎಂಬ ಮಾಹಿತಿ ಲಬ್ಯವಾಗಿದೆ. ಸಮುದ್ರಮಟ್ಟದಿಂದ ಸುಮಾರು 9,000 ಅಡಿ ಎತ್ತರದಲ್ಲಿರುವ ಧರಾಲಿ ಪ್ರದೇಶಲ್ಲಿನ ಮನೆ, ಹೋಟೆಲ್, ರೆಸಾರ್ಟ್​ಗಳು ಕೆಸರಿನಲ್ಲಿ ಮುಚ್ಚಿಹೋಗಿವೆ. ಭಾರೀ ಗಾತ್ರದ ಕಟ್ಟಡಗಳ ಮೇಲ್ಭಾಗ ಮಾತ್ರ ಗೋಚರಿಸುತ್ತಿದೆ. ಕಾಣೆಯಾಗಿರುವವರ ಶೋಧಕ್ಕಾಗಿ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಮತ್ತು ಸೇನಾ ತುಕುಡಿಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದನ್ನೂ ಓದಿ:   ಉತ್ತರಕಾಶಿಯಲ್ಲಿ 2ನೇ ಮೇಘಸ್ಫೋಟ; ಸುಖಿ ಟಾಪ್ ಬಳಿ ಉಂಟಾದ ಪ್ರವಾಹದ ಭಯಾನಕ ವಿಡಿಯೋ ಇಲ್ಲಿದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ