ಉತ್ತರಕಾಶಿಯಲ್ಲಿ 2ನೇ ಮೇಘಸ್ಫೋಟ; ಸುಖಿ ಟಾಪ್ ಬಳಿ ಉಂಟಾದ ಪ್ರವಾಹದ ಭಯಾನಕ ವಿಡಿಯೋ ಇಲ್ಲಿದೆ
ಉತ್ತರಾಖಂಡದ ಧರಾಲಿಯಲ್ಲಿ ಈ ಹಿಂದೆ ಸಂಭವಿಸಿದ ಭಾರಿ ವಿಕೋಪದ ನಂತರ ಉತ್ತರಕಾಶಿ ಜಿಲ್ಲೆಯ ಸುಖಿ ಟಾಪ್ ಬಳಿ ಹೊಸ ಮೇಘಸ್ಫೋಟ ಉಂಟಾಗಿದೆ. ಆದರೆ, ಅಲ್ಲಿ ಧರಾಲಿಯಂತೆ ಸಾವುನೋವುಗಳು, ಹಾನಿಗಳ ಬಗ್ಗೆ ಅಧಿಕೃತ ವರದಿಯಾಗಿಲ್ಲ. ಧರಾಲಿಯ ನಂತರ ಉತ್ತರಕಾಶಿಯ ಸುಖಿ ಟಾಪ್‌ನಲ್ಲಿ ಮೇಘಸ್ಫೋಟ ಸಂಭವಿಸಿದೆ. ಈ ಭಯಾನಕ ಪ್ರವಾಹದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.
ಉತ್ತರಾಖಂಡ, ಆಗಸ್ಟ್ 5: ಧರಾಲಿಯ (Dharali Floods) ನಂತರ ಇಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುಖಿ ಗ್ರಾಮದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದೆ. ಉತ್ತರಾಖಂಡದ ಉತ್ತರಕಾಶಿಯ (Uttarkashi Cloudburst) ಸುಖಿ ಟಾಪ್‌ನಲ್ಲಿ ತೀವ್ರ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ. ಇದರ ನಂತರ ಧರಾಲಿ ಗ್ರಾಮದಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಧರಾಲಿಯ ನಂತರ, ಇಂದು ಮಧ್ಯಾಹ್ನ ಉತ್ತರಕಾಶಿ ಜಿಲ್ಲೆಯ ಸುಖಿ ಟಾಪ್‌ನಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ ಅಥವಾ ಕೆಸರಿನ ನೀರಿನಲ್ಲಿ ಕೊಚ್ಚಿಹೋಗಿವೆ. “ಪ್ರವಾಹ ಬಂದಾಗ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರು. ಹಲವಾರು ಮನೆಗಳು, ಹೋಟೆಲ್‌ಗಳು ಮತ್ತು ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ” ಎಂದು ಅವರು ಹೇಳಿದ್ದಾರೆ. ಉತ್ತರಕಾಶಿ ಮತ್ತು ಸುಖಿ ಬಳಿಯ ಧರಾಲಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ 34ರ ಮೂಲಕ ಸುಮಾರು 16 ಕಿಲೋಮೀಟರ್ ದೂರದಲ್ಲಿದೆ. ಎರಡೂ ಪ್ರದೇಶಗಳು ಹರ್ಷಲ್ ಮತ್ತು ಮಹತ್ವದ ಧಾರ್ಮಿಕ ತಾಣವಾದ ಗಂಗೋತ್ರಿಯ ಹತ್ತಿರದಲ್ಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

