Uttarkashi cloudburst: ಉತ್ತರಕಾಶಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹದಿಂದ 4 ಜನ ಸಾವು, 100ಕ್ಕೂ ಹೆಚ್ಚು ಮಂದಿ ನಾಪತ್ತೆ
ಉತ್ತರಕಾಶಿಯಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 4 ಜನರು ಸಾವನ್ನಪ್ಪಿದ್ದು, ಹಲವಾರು ಕಟ್ಟಡಗಳು ಕೊಚ್ಚಿ ಹೋಗಿವೆ. ಉತ್ತರಾಖಂಡದ ಗ್ರಾಮದಲ್ಲಿ ಮಣ್ಣು ಕುಸಿತ ಸಂಭವಿಸಿದ್ದು, ಹೋಟೆಲ್‌ಗಳು, ಹೋಂಸ್ಟೇಗಳು ನಾಶವಾಗಿವೆ ಎಂದು ಭಾರತೀಯ ಸೇನೆ ಮನಕಲಕುವ ವಿಡಿಯೋವನ್ನು ಹಂಚಿಕೊಂಡಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರವಾಹಪೀಡಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಉತ್ತರಕಾಶಿ, ಆಗಸ್ಟ್ 5: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi cloudburst) ಇಂದು (ಮಂಗಳವಾರ) ಸಂಭವಿಸಿದ ದಿಢೀರ್ ಪ್ರವಾಹದ ಬಳಿಕ 4 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಆರ್ಯ ಅವರು ಇದನ್ನು ದೃಢಪಡಿಸಿದ್ದಾರೆ. ಭಾರಿ ಮೇಘಸ್ಫೋಟವು ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಸೇರಿದಂತೆ ಡಜನ್ಗಟ್ಟಲೆ ಕಟ್ಟಡಗಳನ್ನು ನಾಶಪಡಿಸಿದ ನಂತರ ಈ ಘಟನೆ ಸಂಭವಿಸಿದೆ. ಇದರ ನಿಖರವಾದ ಸ್ಥಳ ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಬಳಿಯ ಧರಾಲಿ ಗ್ರಾಮ.
ನಿರಂತರ ಭಾರೀ ಮಳೆಯು ಗುಡ್ಡಗಾಡು ಪ್ರದೇಶಗಳಲ್ಲಿ ವಿಪತ್ತಾಗಿ ಮಾರ್ಪಟ್ಟಿದೆ. ಈ ಜಿಲ್ಲೆಯ ಹರ್ಸಿಲ್ ಪ್ರದೇಶದ ಧರಾಲೋಯ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಖಿರ್ ಗಂಗಾ ಹೊಳೆಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಯಿತು. ಇದು ಬೃಹತ್ ಶಿಲಾಖಂಡರಾಶಿಗಳನ್ನು ಕೊಚ್ಚಿಕೊಂಡು ಬಂದು ಧರಾಲಿ-ಖಿರ್ ಗಂಗಾ ಪ್ರದೇಶದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿತು.
ಇದನ್ನೂ ಓದಿ: ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡಬೇಡಿ; ಟ್ರಂಪ್ ಸುಂಕ ಬೆದರಿಕೆಗೆ ಭಾರತ ತಿರುಗೇಟು
Big Breaking 🚨🚨
“Cloudburst causes massive Destruction in Dharali Uttarkashi, Uttrakhand”
उत्तराखंड के धराली में बादल फटा,
“Police, SDRF, Army, and other Disaster response teams to engage in relief and rescue operations at the site.”
See the Horrible Video 😢 Prayers 🙏❤️ pic.twitter.com/JnOFtsfbQo
— Mayank (@mayankcdp) August 5, 2025
“ಉತ್ತರಕಾಶಿಯಲ್ಲಿ ಹರ್ಸಿಲ್ ಪ್ರದೇಶದ ಖೀರ್ ಗಡ್ ನೀರಿನ ಮಟ್ಟ ಏರುತ್ತಿರುವುದರಿಂದ ಧರಾಲಿಯಲ್ಲಿ ಪೊಲೀಸರು, ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಇತರ ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ನದಿಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಎಸ್‌ಡಿಆರ್‌ಎಫ್, ಕಂದಾಯ ಇಲಾಖೆ ಮತ್ತು ಸೇನಾ ವಿಪತ್ತು ನಿರ್ವಹಣಾ ಘಟಕಗಳ ತಂಡಗಳು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ಶಿಲಾಖಂಡರಾಶಿಗಳಿಂದ ತುಂಬಿದ ಪ್ರವಾಹದಿಂದಾಗಿ ಪ್ರದೇಶದಲ್ಲಿ ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ.
🚨 “𝗦𝘄𝗶𝗳𝘁 𝘁𝗼 𝗥𝗲𝘀𝗽𝗼𝗻𝗱, 𝗖𝗼𝗺𝗺𝗶𝘁𝘁𝗲𝗱 𝘁𝗼 𝗣𝗿𝗼𝘁𝗲𝗰𝘁.” 🪖
📍Kheer Gad, Dharali Village | Uttarkashi | 1345 Hrs, 05 Aug 2025
A massive mudslide struck #Dharali village in the #KheerGad area near Harsil, triggering sudden flow of debris and water through the… pic.twitter.com/FwPPMrIpqu
— SuryaCommand_IA (@suryacommand) August 5, 2025
ಗಂಗೋತ್ರಿ ಧಾಮ್‌ಗೆ ಹೋಗುವ ಮಾರ್ಗದಲ್ಲಿನ ಪ್ರಮುಖ ನಿಲ್ದಾಣವಾದ ಧರಾಲಿಯಲ್ಲಿ ಖಿರ್ ಗಂಗಾ ನದಿಗೆ ಭೀಕರ ಹಠಾತ್ ಪ್ರವಾಹ ಅಪ್ಪಳಿಸಿತು. ಸುಮಾರು 20ರಿಂದ 25 ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಈ ಪ್ರವಾಹದಲ್ಲಿ ಕೊಚ್ಚಿಹೋಗಿವೆ. 10ರಿಂದ 12 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಪ್ರವಾಹದ ನೀರು ಪ್ರವಾಸಿಗರ ಆಶ್ರಯ ತಾಣಗಳನ್ನು ಧ್ವಂಸ ಮಾಡುತ್ತಿದ್ದಂತೆ ಜನರು ಕಿರುಚುತ್ತಿರುವ ಭಯಾನಕ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು: ಆ.10ರಂದು ಮೋದಿ ಚಾಲನೆ
#WATCH | Tirupati, Andhra Pradesh: On the Uttarkashi cloudburst incident, Uttarakhand CM Pushkar Singh Dhami says, “I have been informed about a cloudburst incident in Dharali of Uttarkashi… We are working to rescue the people. Officials from the District administration, the… pic.twitter.com/MMi5m5Q3c9
— ANI (@ANI) August 5, 2025
ರಕ್ಷಣಾ ಕಾರ್ಯಾಚರಣೆಗೆ ಸಿಎಂ ಧಾಮಿ ಸೂಚನೆ:
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರವಾಹಪೀಡಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತೀಯ ಸೇನೆಯನ್ನು ಸಹ ನಿಯೋಜಿಸಲಾಗಿದೆ. “ಉತ್ತರಕಾಶಿಯ ಧರಾಲಿಯಲ್ಲಿ ಮೇಘಸ್ಫೋಟದ ಘಟನೆಯ ಬಗ್ಗೆ ನನಗೆ ಮಾಹಿತಿ ನೀಡಲಾಗಿದೆ. ನಾವು ಜನರನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದೇವೆ. ಜಿಲ್ಲಾಡಳಿತ, ಭಾರತೀಯ ಸೇನೆ, NDRF ಮತ್ತು SDRF ಅಧಿಕಾರಿಗಳು ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Tue, 5 August 25




