ಉತ್ತರಕಾಶಿಯಲ್ಲಿ ಮೇಘಸ್ಫೋಟ; ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳಿ ಹರಿದುಬಂತು ಭಾರೀ ಪ್ರವಾಹ
ಉತ್ತರಾಖಂಡದ ಉತ್ತರಕಾಶಿಯ ಧರಾಲಿಯಲ್ಲಿರುವ ಖಿರ್ ಗಂಗಾ ಜಲಾನಯನ ಪ್ರದೇಶದ ಬಳಿ ಮೇಘಸ್ಫೋಟದ ನಂತರ ಉಂಟಾದ ವಿನಾಶವನ್ನು ಭಯಾನಕ ದೃಶ್ಯಗಳು ತೋರಿಸುತ್ತವೆ. ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಇಂದು ಭಾರಿ ಮೇಘಸ್ಫೋಟ ಸಂಭವಿಸಿದ್ದು, ಇದರಿಂದಾಗಿ ಭೀಕರ ಭೂಕುಸಿತ ಮತ್ತು ದಿಢೀರ್ ಪ್ರವಾಹ ಉಂಟಾಗಿದೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದುಬಂದ ಭಾರೀ ಪ್ರಮಾಣದ ಕಪ್ಪು ಬಣ್ಣದ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂಸ್ಟೇಗಳು ಕೊಚ್ಚಿಹೋಗಿವೆ.
ಉತ್ತರಾಖಂಡ, ಆಗಸ್ಟ್ 5: ಉತ್ತರಾಖಂಡದ (Uttarakhand Flood) ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಇಂದು ಭಾರಿ ಮೇಘಸ್ಫೋಟ (Uttarkashi Cloudburst) ಸಂಭವಿಸಿದ್ದು, ಇದರಿಂದಾಗಿ ಭೀಕರ ಭೂಕುಸಿತ (Landslide) ಮತ್ತು ದಿಢೀರ್ ಪ್ರವಾಹ ಉಂಟಾಗಿದೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದುಬಂದ ಭಾರೀ ಪ್ರಮಾಣದ ಕಪ್ಪು ಬಣ್ಣದ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂಸ್ಟೇಗಳು ಕೊಚ್ಚಿಹೋಗಿವೆ. ಹಲವಾರು ಜನರು ಕಾಣೆಯಾಗಿದ್ದಾರೆ. ಅವಶೇಷಗಳಡಿ 12ಕ್ಕೂ ಅಧಿಕ ಜನರು ಸಿಲುಕಿದ್ದಾರೆ ಎನ್ನಲಾಗಿದೆ. ಬೆಟ್ಟದ ಇಳಿಜಾರಿನಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುವ ಈ ದೃಶ್ಯ ಎಂಥವರ ಎದೆಯನ್ನೂ ನಡುಗಿಸುವಂತಿದೆ. ಇದರಿಂದಾಗಿ ಮನೆಗಳು, ಹೋಸ್ಟೇಗಳು, ಹೋಟೆಲ್ಗಳು ಕೊಚ್ಚಿಕೊಂಡು ಹೋಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 05, 2025 04:47 PM

