ಕಾಂಗ್ರೆಸ್ MLC ಶರಣಗೌಡ ಬಯ್ಯಾಪುರ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ
ರಾಯಚೂರು ಜಿಲ್ಲೆಯ ಲಿಂಗಸುಗೂರು ಕಾಂಗ್ರೆಸ್ ನಲ್ಲಿ ಬಣಬಡಿದಾಟ ತಾರಕಕ್ಕೇರಿದೆ. ಮಾಜಿ ಶಾಸಕ ಡಿ.ಎಸ್.ಹೂಲಿಗೇರಿ ಹಾಗೂ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಬಣ ರಾಜಕೀಯ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಕಾರು ಅಡ್ಡಗಟ್ಟಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ರಾಯಚೂರು, (ಆಗಸ್ಟ್ 05): ರಾಯಚೂರು ಜಿಲ್ಲೆಯ ಲಿಂಗಸುಗೂರು ಕಾಂಗ್ರೆಸ್ ನಲ್ಲಿ ಬಣಬಡಿದಾಟ ತಾರಕಕ್ಕೇರಿದೆ. ಮಾಜಿ ಶಾಸಕ ಡಿ.ಎಸ್.ಹೂಲಿಗೇರಿ ಹಾಗೂ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಬಣ ರಾಜಕೀಯ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಕಾರು ಅಡ್ಡಗಟ್ಟಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಹೌದು.. ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ಗೋವಿಂದ ನಾಯಕ್ ಯಾರೂ ಅಂತಾ ಗೊತ್ತಿಲ್ಲ ಎಂದು ಶರಣಗೌಡ ಬಯ್ಯಾಪುರ ಮಾಧ್ಯಮ ಹೇಳಿಕೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದು, ಇಂದು (ಆಗಸ್ಟ್ 05) ಶರಣಗೌಡ ಬಯ್ಯಾಪುರ ಕಾರನ್ನು ಅಡ್ಡಗಟ್ಟಿ ಅವರ ಆಪ್ತನಿಗೆ ಥಳಿಸಿದ್ದಾರೆ. ಅಲ್ಲದೇ ಶರಣಗೌಡ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಲಿಂಗಸಗೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ನಾಯಕ್ ಯಾರೂ ಅಂತ ಗೊತ್ತಿಲ್ಲ ಎಂದು ಎಂಎಲ್ ಸಿ ಬಯ್ಯಾಪೂರ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಡಿಎಸ್ ಹೂಲಗೇರಿ ಬೆಂಬಲಿಗರು, ಇಂದು ಗೊರೇಬಾಳ ಗ್ರಾಮದಲ್ಲಿ ಶರಣಗೌಡ ಬಯ್ಯಾಪೂರ ಕಾರು ಅಡ್ಡಗಟ್ಟಿದ್ದಾರೆ. ಅಲ್ಲದೇ ಇದೇ ವೇಳೆ ಶರಣಗವಡ ಬಯ್ಯಾಪುರ ಆಪ್ತನಿಗೆ ಥಳಿಸಿದ್ದಾರೆ.



