AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Transport Strike; ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಪರ ಬ್ಯಾಟ್ ಬೀಸಿದ ವಾಟಾಳ್ ನಾಗರಾಜ್

Karnataka Transport Strike; ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಪರ ಬ್ಯಾಟ್ ಬೀಸಿದ ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 05, 2025 | 4:36 PM

Share

ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕಾಗಿ ಕನ್ನಡಪರ ಸಂಘಟನೆಗಳು ಇಷ್ಟರಲ್ಲೇ ಕರ್ನಾಟಕ ಬಂದ್​ಗೆ ಕರೆ ನೀಡಲಿವೆ, ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನು ಸಹ ನಮ್ಮ ಹೋರಾಟದಲ್ಲಿ ಸೇರಿಸಿಕೊಳ್ಳಲು ಹಿಂಜರಿಯಲ್ಲ, ಹಾಗಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡಲೇ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬೆಂಗಳೂರು, ಆಗಸ್ಟ್ 5: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅನಿರ್ದಿಷ್ಟಾವಧಿಗೆ ಮುಷ್ಕರ ಅರಂಭಿಸಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬೇಷರತ್ ಬೆಂಬಲ (unconditional support) ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಸಾರಿಗೆ ನೌಕರರ ಸಂಘದ ಮುಖಂಡರು ನಮ್ಮ ಸ್ನೇಹಿತರು, ಕನ್ನಡ ಪರ ಸಂಘಟನೆಗಳು ಮುಷ್ಕರ, ಬಂದ್ ಮಾಡಿದಾಗೆಲ್ಲ ಅವರು ಕೈ ಜೋಡಿಸಿದ್ದಾರೆ, ನೌಕರ ಸುಮಾru 30ಕ್ಕೂ ಹೆಚ್ಚು ತಿಂಗಳುಗಳ ಸಂಬಳ ಸರ್ಕಾರ ಬಾಕಿಯುಳಿಸಿಕೊಂಡಿದೆ, ಸರ್ಕಾರ ಸಂಬಳ ನೀಡದಿದ್ದರೆ ಅವರು ತಮ್ಮ ದಿನನಿತ್ಯದ ಅಗತ್ಯಗಳನ್ನು ಹೇಗೆ ಪೂರೈಸಿಕೊಳ್ಳಬೇಕು? ಮಕ್ಕಳ ಫೀಸುಗಳನ್ನು ಹೇಗೆ ಕಟ್ಟಬೇಕು ? ಹಾಗಾಗಿ, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದರು.

ಇದನ್ನೂ ಓದಿ:   ಸಾರಿಗೆ ನೌಕರರ ಮುಷ್ಕರ ಎಫೆಕ್ಟ್​: ರಸ್ತೆಗಳಿದ ಖಾಸಗಿ ವಾಹನಗಳು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ