AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Transport Strike; ಹುಬ್ಬಳ್ಳಿಯ ಕಿಮ್ಸ್​ಗೆ ಚಿಕಿತ್ಸೆಗೆಂದು ಬಂದವರಿಗೆ ವಾಪಸ್ಸು ಹೋಗಲು ಬಸ್ಸಿಲ್ಲ

Karnataka Transport Strike; ಹುಬ್ಬಳ್ಳಿಯ ಕಿಮ್ಸ್​ಗೆ ಚಿಕಿತ್ಸೆಗೆಂದು ಬಂದವರಿಗೆ ವಾಪಸ್ಸು ಹೋಗಲು ಬಸ್ಸಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 05, 2025 | 3:11 PM

Share

ಬೆನ್ನು ನೋವಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ಬಂದಿರುವ ಮಹಿಳೆಯೊಬ್ಬರು ವೈದ್ಯರನ್ನು ಕಂಡು ಔಷಧಿ ಮಾಡಿಸಿಕೊಂಡಿದ್ದಾರೆ, ಬರುವಾಗ ಆಟೋದಲ್ಲಿ ಬಂದವರು ವಿದ್ಯಾಪೇಟೆಗೆ ವಾಪಸ್ಸು ಹೋಗಲು ಬಸ್​​ಗಾಗಿ ಕಾಯುತ್ತಿದ್ದಾರೆ. ಆಟೋದವರು ಪ್ರಾಯಶಃ ದುಪ್ಪಟ್ಟು ಹಣ ಕೇಳಿರಬಹುದು. ಮತ್ತೊಬ್ಬ ಮಹಿಳೆಗೆ ಬಂಕಾಪುರಕ್ಕೆ ಹೋಗಬೇಕಿದೆ, ಇವತ್ತಿನ ತಮ್ಮ ಪ್ರಯಾಣವನ್ನೇ ರದ್ದು ಮಾಡಿ ನಾಳೆಗೆ ಮುಂದೂಡಿದ್ದಾರೆ. ನಾಳೆ ಬಸ್ ಸಂಚಾರ ಆರಂಭವಾಗಿತ್ತೋ ಇಲ್ಲವೋ ಗೊತ್ತಿಲ್ಲ.

ಹುಬ್ಬಳ್ಳಿ, ಆಗಸ್ಟ್ 5: ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಾಷ್ಟಾವಧಿ ಮುಷ್ಕರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆಗಳ ಮುಂದೆ ಜನ ಕಾಣದ ಬಸ್ಸು ಮತ್ತು ಸರ್ಕಾರ ಮಾಡಿರುವ ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ, ಆದರೆ ಅವರಿಗಾಗಿ ಕಾಯುತ್ತಿರೋದು ನಿರಾಶೆ ಮಾತ್ರ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ (KIMS, Hubballi) ಈ ಭಾಗದ ಏಮ್ಸ್ ಇದ್ದಂತೆ. ಪ್ರತಿದಿನ ಇಲ್ಲಿಗೆ ಸಾವಿರಾರು ರೋಗಿಗಳು ಬರುತ್ತಾರೆ. ಕಿಮ್ಸ್ ಮುಂದಿರುವ ಬಸ್ ನಿಲ್ದಾಣದಲ್ಲಿ ಬೇರೆ ಬೇರೆ ಊರಿಗಳಿಗೆ ಹೋಗಬೇಕಿರುವ ಜನ ಇದ್ದಾರೆ. ಉಳ್ಳವರು ಆಟೋ, ಕ್ಯಾಬ್ ಅಥವಾ ತಮ್ಮ ಸ್ವಂತ ವಾಹನಗಳಲ್ಲಿ ವಾಪಸ್ಸು ಹೋಗಿದ್ದಾರೆ. ಆದರೆ ಸರ್ಕಾರೀ ಬಸ್​ಗಳನ್ನು ನೆಚ್ಚಿಕೊಂಡವರು ಮಾತ್ರ ತಮ್ಮ ಅದೃಷ್ಟದ ಪರೀಕ್ಷೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:  ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ