AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Transport Strike; ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು: ಅನಂತ್ ಸುಬ್ಬಾರಾವ್

Karnataka Transport Strike; ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು: ಅನಂತ್ ಸುಬ್ಬಾರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 05, 2025 | 5:46 PM

Share

ಮಾತುಕತೆಗೆ ಅಂತ ಕೂತಾಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಹಿಂದೆ ನಡೆದ ಮೀಟಿಂಗ್​ಗಳಲ್ಲಿ ಸರ್ಕಾರ ನಮಗೆ ಮೂರು ನಾಮ ಹಾಕಿತ್ತು, ಈಗ ಒಂದು ನಾಮ ಹೋಗಿದೆ, ಉಳಿದರೆಡು ನಾಮಗಳನ್ನೂ ಕೋರ್ಟ್ ತೆಗೆಸಿಬಿಡಬಹುದು, ಮುಖ್ಯಮಂತ್ರಿಯವರೊಂದಿಗೆ ಕೋರ್ಟ್ ಚರ್ಚೆ ನಡೆಸಿದೆ, ಅದು ನೀಡುವ ಆದೇಶಕ್ಕೆ ತಲೆ ಬಾಗುತ್ತೇವೆ ಎಂದು ಅನಂತ್ ಸುಬ್ಬಾರಾವ್ ಹೇಳಿದರು.

ಬೆಂಗಳೂರು, ಆಗಸ್ಟ್ 5: ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಇಂದು ಮೀಟಿಂಗ್ ನಡೆಸಿದ ಬಳಿಕ ಪ್ರೆಸ್ ಮೀಟ್ ನಡೆಸಿ ಮಾತಾಡಿದ ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ (Joint Action Committee) ಅಧ್ಯಕ್ಷ ಹೆಚ್ ವಿ ಅನಂತ್ ಸುಬ್ಬಾರಾವ್, ಸಾರಿಗೆ ನೌಕರರು ಕೋರ್ಟ್ ಆದೇಶವನ್ನು ಉಲ್ಲಂಘಿಸಿಲ್ಲ, ಅದೇಶದ ಪ್ರತಿ ನಮ್ಮ ಕೈಸೇರುವಷ್ಟು ಹೊತ್ತಿಗೆ ಮುಷ್ಕರ ಆರಂಭವಾಗಿತ್ತು ಮತ್ತು ಅದು ಸಿಕ್ಕ ಬಳಿಕ ಯಾವ ವಾಹನವನ್ನೂ ತಡೆದಿಲ್ಲ ಎಂದು ಹೇಳಿದರು. ಸಿಎಂ ಜೊತೆ ನಡೆದ ಮಾತುಕತೆಯಲ್ಲಿ ನಾವು ಸಲ್ಲಿಸಿದ ಬೇಡಿಕೆ ಏನು ಮತ್ತು ಸರ್ಕಾರ ನೀಡಲು ಒಪ್ಪಿದ್ದು ಏನು ಅನ್ನೋದನ್ನು ಕೋರ್ಟ್​ಗೆ ತಿಳಿಸುವಂತೆ ನಮ್ಮ ವಕೀಲರಿಗೆ ಹೇಳಿದ್ದೇವೆ ಎಂದು ಸುಬ್ಬಾರಾವ್ ಹೇಳಿದರು. ನಾವು 38 ತಿಂಗಳ ಹಿಂಬಾಕಿ ಕೊಡಬೇಕೆಂದು ಬೇಡಿಕೆಯಿಟ್ಟರೆ ಸರ್ಕಾರ 14 ತಿಂಗಳ ಬಾಕಿ ಕೊಡಲು ತಯಾರಿದೆ, ಸರ್ಕಾರ ಮತ್ತು ನಮ್ಮ ನಡುವೆ ಹೆಚ್ಚೆಂದರೆ ₹1,000 ಕೋಟಿಗಳ ವ್ಯತ್ಯಾಸವಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಮಹಿಳೆಯರು 500 ಕೋಟಿ ಸಲ ಬಸ್​ಗಳಲ್ಲಿ ಸಂಚರಿಸಿದರೆಂದು ಸಂಭ್ರಮಿಸುವ ಸಿಎಂ ಸಾರಿಗೆ ನೌಕರಿಗಾಗಿ ಮರುಗಲಿಲ್ಲ: ಅನಂತ ಸುಬ್ಬಾರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 05, 2025 05:35 PM