AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು 500 ಕೋಟಿ ಸಲ ಬಸ್​ಗಳಲ್ಲಿ ಸಂಚರಿಸಿದರೆಂದು ಸಂಭ್ರಮಿಸುವ ಸಿಎಂ ಸಾರಿಗೆ ನೌಕರಿಗಾಗಿ ಮರುಗಲಿಲ್ಲ: ಅನಂತ ಸುಬ್ಬಾರಾವ್

ಮಹಿಳೆಯರು 500 ಕೋಟಿ ಸಲ ಬಸ್​ಗಳಲ್ಲಿ ಸಂಚರಿಸಿದರೆಂದು ಸಂಭ್ರಮಿಸುವ ಸಿಎಂ ಸಾರಿಗೆ ನೌಕರಿಗಾಗಿ ಮರುಗಲಿಲ್ಲ: ಅನಂತ ಸುಬ್ಬಾರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 16, 2025 | 7:18 PM

Share

ಮೊನ್ನೆ ಶಕ್ತಿ ಯೋಜನೆಯಡಿ 500 ಕೋಟಿ ಸಲ ಮಹಿಳೆಯರು ಸಂಚರಿಸಿದ್ದಾರೆ ಅಂತ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಮಲಿಂಗಾರೆಡ್ಡಿ ಸಂಭ್ರಮಿಸಿ ಬಸ್ಸು ಹತ್ತು ತಾವೇ ಟಿಕೆಟ್ ನೀಡಿದರು, ಅದರೆ ಕಳೆದ 2ವರ್ಷಗಳ ಅವಧಿಯಲ್ಲಿ ಸಾರಿಗೆ ನೌಕರರು ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಕೇಳುವ ಮನಸ್ಸು ಇವರಲ್ಲಿ ಯಾರಿಗೂ ಬರಲಿಲ್ಲ, ಪ್ರತಿ 4 ವರ್ಷಕ್ಕೊಮ್ಮೆ ನೌಕರರ ವೇತನ ಪರಿಷ್ಕರಣೆ ಆಗಲೇಬೇಕು ಎಂದು ಅನಂತ ಸುಬ್ಬಾರಾವ್ ಹೇಳಿದರು.

ಬೆಂಗಳೂರು, ಜುಲೈ 16: ಕರ್ನಾಟಕ ಸಾರಿಗೆ ಸಂಸ್ಥೆ ನಾಲ್ಕು ವಿಭಾಗಗಳ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆಂದು ಸಾರಿಗೆ ಸಂಘಟನೆಗಳ ಮುಖಂಡ ಅನಂತ್ ಸುಬ್ಬರಾವ್ (Anant Subbarao) ಹೇಳಿದರು. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರು ಶೇಕಡ 25ರಷ್ಟು ವೇತನ ಹೆಚ್ಚಳ ಕೇಳಿದ್ದರೆ, ಶೇಕಡ 15ರಷ್ಟು ಮಾತ್ರ ನೀಡಲಾಗಿತ್ತು ಆದರೆ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಿಲ್ಲ. 2024, ಜನವರಿ 1ರಿಂದಲೇ ಶೇಕಡ 25ರಷ್ಟು ವೇತನ ಹೆಚ್ಚಿಸಬೇಕೆಂದು ಅಗ್ರಹಿಸಿ ಡಿಸೆಂಬರ್ 31, 2023ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದಾಗ ಸಿದ್ದರಾಮಯ್ಯ ಸರ್ಕಾರ ಹೆಚ್ಚಳ ಮಾಡುವ ಭರವಸೆ ನೀಡಿತ್ತು, ಅದರೆ ಇದುವರೆಗೆ ಹೆಚ್ಚಳ ಮಾಡಿಲ್ಲ ಎಂದು ಸುಬ್ಬಾರಾವ್ ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಭೆ ಬೆನ್ನಲ್ಲೇ ನಾಳೆಯ ಸಾರಿಗೆ ಮುಷ್ಕರ ಹಿಂಪಡೆದ ಜಂಟಿ ಕ್ರಿಯಾ ಸಮಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ