AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಷ್ಟ ಕಾಲದಲ್ಲಿ 2 ಸಾವಿರ ರೂ. ನೀಡಿದ ಅಪರಿಚಿತ ಹುಡುಗಿಗೆ ಹಣ ನೀಡಲು ಮುಂದಾದ ವ್ಯಕ್ತಿಗೆ ಆಕೆ ಏನು ಹೇಳಿದ್ಳು ನೋಡಿ

ನಮ್ಮ ಸಂಕಷ್ಟ ಕಾಲದಲ್ಲಿ ಒಬ್ಬರೇ ಅಸಹಾಯಕರಾಗಿ ನಿಂತಾಗ, ಅಪರಿಚಿತರು ನಮ್ಮ ಮುಂದೆ ದೇವರಂತೆ ಬಂದು ನಿಲ್ಲುತ್ತಾರೆ. ಆ ಸಹಾಯವನ್ನು ಎಂದಿಗೂ ಮರೆಯಬಾರದು. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆಯ ಬಗ್ಗೆ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಪೋಸ್ಟ್ವೊಂದು ಹಂಚಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನನಗೆ ಅಪರಿಚಿತ ಹುಡುಗಿಯೊಬ್ಬಳು ಸಹಾಯ ಮಾಡಿದ್ದಾಳೆ. ಇದೀಗ ಆ ಹಣವನ್ನು ಆಕೆಗೆ ಮತ್ತೆ ನೀಡಬೇಕು ಎಂದು ಹೇಳಿ ಪೋಸ್ಟ್ ಮಾಡಿದ್ದಾರೆ. ಇದೀಗ ಆ ಹುಡುಗಿಯೇ ಪ್ರತಿಕ್ರಿಯೆ ನೀಡಿದ್ದು, ಆಕೆ ಏನ್ ಹೇಳಿದ್ದಾಳೆ ಎಂಬುದನ್ನು ನೋಡಿ.

ಕಷ್ಟ ಕಾಲದಲ್ಲಿ 2 ಸಾವಿರ ರೂ. ನೀಡಿದ ಅಪರಿಚಿತ ಹುಡುಗಿಗೆ ಹಣ ನೀಡಲು ಮುಂದಾದ ವ್ಯಕ್ತಿಗೆ ಆಕೆ ಏನು ಹೇಳಿದ್ಳು ನೋಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on:Aug 09, 2025 | 2:44 PM

Share

ಕೆಲವೊಂದು ಬಾರಿ ಜೀವನದಲ್ಲಿ ಅಪರಿಚಿತರಿಂದ ಸಹಾಯ ಪಡೆಯುವ ಕ್ಷಣಗಳು ಬರುತ್ತದೆ.ಆದರೆ ಆ ಸಹಾಯ ಎಷ್ಟು ಮೌಲ್ಯಯುತವಾಗಿರುತ್ತದೆ ಎಂದರೆ, ಅದನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಹಣ ಸಹಾಯವನ್ನು (Stranger Helps) ಮಾಡಿದ್ರೆ ಇನ್ನು ಕಾಡುತ್ತದೆ. ಅದನ್ನು ಹಿಂದಿರುಗಿಸುವವರೆಗೆ ಸಮಾಧಾನ ಇಲ್ಲ. ಇಲ್ಲೊಂದು ಇಂತಹದೇ ಘಟನೆಯ ಕುರಿತು ವ್ಯಕ್ತಿಯೊಬ್ಬರು ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸಂಕಷ್ಟದ ಕಾಲದಲ್ಲಿ ಯುವತಿಯೊಬ್ಬಳು ಮಾಡಿದ (Rakshabandhan Gift) ಸಹಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಜೀವನದ ಅತ್ಯಂತ ಕಠಿಣ ಸಮಯದಲ್ಲಿ ಅಪರಿಚಿತ ಹುಡುಗಿಯೊಬ್ಬಳು ಹೇಗೆ ಸಹಾಯ ಮಾಡಿದ್ದಾಳೆ ಎಂಬುದನ್ನು ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಹುಡುಗಿಯೊಬ್ಬಳಿಂದ ಪಡೆದ ಹಣವನ್ನು ಆಕೆಗೆ ಹಿಂದಿರುಗಿಸಲು ಒದ್ದಾಡಿದ್ದಾರೆ. ಅಪರಿಚಿತ ಹುಡುಗಿಯೊಬ್ಬಳು ಅನಿರೀಕ್ಷಿತವಾಗಿ ಆರ್ಥಿಕ ಸಹಾಯ ಮಾಡಿದ್ದಾಳೆ. ಇದೀಗ ಆ ಹಣದ ಋಣ ನನ್ನಲ್ಲಿ ಉಳಿದಿದೆ. ಅದನ್ನು ಹೇಗೆ ಮತ್ತೆ ಅವರಿಗೆ ನೀಡಲಿ ಎಂದು ರೆಡ್ಡಿಟ್​​​ನಲ್ಲಿ ಕೇಳಿದ್ದಾರೆ.

ಈ ಸಹಾಯದ ಬಗ್ಗೆ ರೆಡ್ಡಿಟ್​​​ ಬಳಕೆದಾರರೂ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್​​​ನಲ್ಲಿ ಆ ವ್ಯಕ್ತಿ  ಹೀಗೆ ಬರೆದುಕೊಂಡಿದ್ದಾರೆ, ನನಗೆ ಸಂಕಷ್ಟದಲ್ಲಿದ್ದಾಗ  ಹುಡುಗಿಯೊಬ್ಬಳು ಹಣ ನೀಡಿದ್ದಾಳೆ. ಇದೀಗ ಈ ಹಣವನ್ನು ಆಕೆಗೆ ನೀಡಬೇಕು.  ಆ ಕ್ಷಣದಲ್ಲಿ ನೀಡುವ ಎಂದರೆ ನನ್ನ ಯುಪಿಐ ಕೂಡ ಕೆಲಸ ಮಾಡುತ್ತಿರಲಿಲ್ಲ, ಇದೀಗ ಈ ಬಗ್ಗೆ ನನಗೆ ಕಾಡುತ್ತಿದೆ. ಆಕೆಗೆ ಹೇಗಾದರೂ ಹಣವನ್ನು ವಾಪಸ್ಸು ನೀಡಬೇಕು. ಈ ಬಗ್ಗೆ ಸಲಹೆಯನ್ನು ನೀಡಿ ಎಂದು ಹೇಳಿದ್ದಾರೆ. ಇನ್ನು ಪೋಸ್ಟ್​​ ನೋಡಿ ಸ್ವತಃ ಸಹಾಯ ಮಾಡಿದ ಹುಡುಗಿಯೇ ಪ್ರತಿಕ್ರಿಯೆ ನೀಡಿದ್ದು,  2,800 ರೂ. ಹಣವನ್ನು ನನಗೆ ನೀಡುವ ಅವಶ್ಯಕತೆ ಇಲ್ಲ. ಅದರ ಬಗ್ಗೆ ಚಿಂತಿಸಬೇಡ ಮತ್ತು ಅದನ್ನು ಅಕ್ಕನಿಂದ ರಕ್ಷಾ ಬಂಧನ ಉಡುಗೊರೆಯಾಗಿ ತೆಗೆದುಕೊಳ್ಳುವಂತೆ ಹೇಳಿದ್ದಾಳೆ.

ಇದನ್ನೂ ಓದಿ: ಮಾಡೆಲ್ ಮುಂದೆಯೇ ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ

ಇದನ್ನೂ ಓದಿ
Image
ಕಾರು ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಹಿಡಿದು ಗೋಳಾಡಿದ ತಾಯಿ ಕರಡಿ
Image
ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ
Image
ಮಹಿಳೆಯ ಹಾಡಿಗೆ ಮನಸೋತ ಗಜರಾಜ
Image
ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ರೆಡ್ಡಿಟ್ ಪೋಸ್ಟ್‌ನ ಸ್ಕ್ರೀನ್‌ಶಾಟ್.(@xo_aum/Reddit)

ಈ ಕಾಲದಲ್ಲೂ ಇಂತಹ ಒಳ್ಳೆಯ ಹೃದಯದ ಜನರು ಇನ್ನೂ ಇದ್ದಾರೆಯೇ ಎಂದು ಅನೇಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್ ಬಳಕೆದಾರರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಆ ಹುಡುಗಿಯ ಸಹಾಯವನ್ನು ಹಾಗೂ ಆಕೆಯ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಕೆಲವು ಬಳಕೆದಾರರು ಇದು ಮಾನವೀಯತೆಯ ಮೇಲಿನ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು. ಇನ್ನು ಕೆಲವರು ಇದು ನಿಜವಾದ ರಕ್ಷಾ ಬಂಧನ ಎಂದು ಹೇಳಿದರು. ನಾವೆಲ್ಲರೂ ಜೀವನದಲ್ಲಿ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ನಿರೀಕ್ಷೆಯಿಲ್ಲದೆ ಸಹಾಯ ಮಾಡಿ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sat, 9 August 25