Video: ಪುಟ್‌ಪಾತ್‌ನಲ್ಲೇ ಅಡುಗೆ ಮಾಡುತ್ತಿರುವ ವ್ಯಕ್ತಿ, ಮಳೆಯಿಂದ ಒಲೆ ಆರದಿರಲು ಹಲಗೆ ಹಿಡಿದು ನಿಂತ ಪುಟಾಣಿಗಳು
ಬದುಕು ಎಲ್ಲರಿಗೂ ಒಂದೇ ರೀತಿ ಇರಲ್ಲ, ಕೆಲವರಿಗೆ ಬದುಕು ಎಂಜಾಯ್‌ಮೆಂಟ್ ಆದರೆ, ಇನ್ನು ಕೆಲವರಿಗೆ ಮೂರು ಹೊತ್ತಿನ ತುತ್ತಿಗಾಗಿ ಹೋರಾಟ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ವಿಡಿಯೋ. ಬೀದಿ ಬದಿಯಲ್ಲಿಯೇ ಬದುಕು ಕಟ್ಟಿಕೊಂಡ ಕುಟುಂಬದ ದಿನನಿತ್ಯದ ಹೋರಾಟವನ್ನು ನೀವಿಲ್ಲಿ ಕಾಣಬಹುದು. ಪುಟ್‌ಪಾತ್‌ನಲ್ಲಿ ಅಪ್ಪ ಅಡುಗೆ ಮಾಡುತ್ತಿದ್ದರೆ, ಒಲೆಯ ಮೇಲೆ ಮಳೆ ನೀರು ಬೀಳದಂತೆ ತಡೆಯಲು ಮಕ್ಕಳು ಏನ್ ಮಾಡಿದ್ದಾರೆ ನೋಡಿ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬದುಕು (life) ಎಂದರೇನೇ ಹೀಗೆ, ಕೆಲವರಿಗೆ ಐಷಾರಾಮಿ ಬದುಕು, ಇನ್ನು ಕೆಲವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಪರದಾಟ. ಮಧ್ಯಮವರ್ಗ ಅಥವಾ ಬಡವರ್ಗದ ಜನರು ನಿತ್ಯವು ದುಡಿದರೆ ಮಾತ್ರ ಹೊಟ್ಟೆ ತುಂಬಲು ಸಾಧ್ಯ. ಕೆಲವರು ಸೂರು ಇಲ್ಲದೇ, ಹೀಗಾಗಿ ರಸ್ತೆಯಲ್ಲಿ ತನ್ನ ಕುಟುಂಬ ಸಂಸಾರವನ್ನು ಕಟ್ಟಿಕೊಂಡು ಕಷ್ಟನೋ ಸುಖನೋ ಎಂದು ಜೀವನ ಸಾಗಿಸುತ್ತಾರೆ. ಇಂತಹ ಜನರನ್ನು ಕಂಡಾಗ ಇವರಿಗಿಂತ ನಾವು ಎಷ್ಟೋ ವಾಸಿ ಎಂದೆನಿಸುತ್ತದೆ. ಇದೀಗ ಈ ವಿಡಿಯೋ ನೋಡಿದ ಮೇಲೂ ನಿಮಗೂ ಇದೇ ರೀತಿ ಅನಿಸದೇ ಇರದು. ಅಪ್ಪನು ಪುಟ್‌ಪಾತ್‌ನಲ್ಲೆ (footpath life) ಅಡುಗೆ ಮಾಡಿ ಮಕ್ಕಳ ಹೊಟ್ಟೆಯ ಹಸಿವನ್ನು ನೀಗಿಸಲು ಪ್ರಯತ್ನಿಸುತ್ತಿದ್ದು, ಇತ್ತ ಮಳೆಗೆ ಅಡುಗೆಯೂ ನೆನೆಯದಿರಲು, ಒಲೆ ಆರದಿರಲು ಫುಟ್‌ಪಾತ್‌ನಲ್ಲೇ ಹಲಗೆ ಹಿಡಿದು ಮಕ್ಕಳು ನಿಂತು ಕೊಂಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರ ಕಣ್ಣಂಚಲಿ ನೀರು ತರಿಸಿದೆ.
@Babaxwale ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಸೂರಿಲ್ಲದೇ ಬೀದಿಬದಿಯಲ್ಲಿ ತಮ್ಮ ಜೀವನ ನಡೆಸುವ ಕುಟುಂಬದ ಚಿತ್ರಣ ಇಲ್ಲಿದೆ. ಮಳೆ ಎಲ್ಲರಿಗೂ ರೋಮ್ಯಾಂಟಿಕ್ ಅನುಭವ ನೀಡುವುದಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ ನೋಡಿದರೆ ಮಳೆ ಬಂದು ನೆಲೆ ಎಲ್ಲಾ ಒದ್ದೆಯಾಗಿದೆ. ಇತ್ತ ರಸ್ತೆಬದಿಯನ್ನು ತಮ್ಮ ಸೂರು ಎಂದು ನಂಬಿಕೊಂಡಿರುವ ಕುಟುಂಬವೊಂದನ್ನು ಕಾಣಬಹುದು. ವ್ಯಕ್ತಿಯೊಬ್ಬನು ಅಡುಗೆ ಮಾಡುತ್ತಿದ್ದು, ಈ ವ್ಯಕ್ತಿಯ ಇಬ್ಬರೂ ಮಕ್ಕಳು ಅಪ್ಪ ಮಾಡುತ್ತಿರುವ ಅಡುಗೆ ಹಾಳಾಗಬಾರದೆಂದು ದೊಡ್ಡ ಮರದ ಹಲಗೆ ಹಿಡಿದು ನಿಂತಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Rain is not Romantic for everyone 😔🥺 pic.twitter.com/0MVPofDG1s
— बाबा ट्विटर वाले (@Babaxwale) August 4, 2025
ಇದನ್ನೂ ಓದಿ: Video: ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ
ಆಗಸ್ಟ್ 5 ರಂದು ಶೇರ್ ಮಾಡಲಾದ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ಈ ದೃಶ್ಯ ನೋಡಿದ್ರೆ ನಮಗಿಂತ ಇವರ ಜೀವನ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಬಡವರು ಯಾವತ್ತಿದ್ರೂ ಖುಷಿಯಿಂದಲೇ ಎಲ್ಲವನ್ನು ಸ್ವೀಕರಿಸ್ತಾರೆ. ಆದರೆ, ಆರ್ಥಿಕವಾಗಿ ಅಸಮರ್ಥರು ಆಗಿದ್ದರೂ ಹೆಚ್ಚು ಮಕ್ಕಳನ್ನು ಯಾಕೆ ಹೊಂದುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ದೃಶ್ಯವು ಮನಸ್ಸಿಗೆ ಹತ್ತಿರವಾಯ್ತು, ಇವರನ್ನೇ ನೋಡಿ ನಮ್ಮ ಬದುಕು ಇವರಿಗಿಂತ ವಾಸಿ ಎಂದು ತೃಪ್ತಿ ಪಟ್ಟುಕೊಳ್ಳಬೇಕು ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








