Viral: 10-12 ಮನೆಗಳಲ್ಲಿ ದಿನಕ್ಕೆ 30 ನಿಮಿಷದ ಕೆಲಸ, ತಿಂಗಳಿಗೆ 2 ಲಕ್ಷ ರೂ ಸಂಬಳ, ಏನ್ ಕೆಲಸ ಗೊತ್ತಾ?
ಬದುಕುವ ಕಲೆ ಗೊತ್ತಿರಲೇಬೇಕು, ಎಲ್ಲಿ ಹೋದರೂ ಕಷ್ಟಪಟ್ಟು ಹಾಗೂ ನಿಷ್ಠೆಯಿಂದ ದುಡಿದರೆ ದುಡ್ಡು ತಾನಾಗಿ ಬರುತ್ತದೆ. ಇದಕ್ಕೆ ಈ ವ್ಯಕ್ತಿಯೇ ನೈಜ ಉದಾಹರಣೆ. ಮುಂಬೈನಂತಹ ದೊಡ್ಡ ನಗರದಲ್ಲಿ ಹತ್ತು ಹನ್ನೆರಡು ಮನೆಗಳಲ್ಲಿ ಅಡುಗೆ ಮಾಡಿ ತಿಂಗಳಿಗೆ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ವಕೀಲೆಯೊಬ್ಬರು ತಮ್ಮ ಮನೆಗೆ ಬಂದು ರುಚಿಯಾಗಿ ಅಡುಗೆ ಮಾಡಿ ಉಣಬಡಿಸುವ ವ್ಯಕ್ತಿಯ ಆದಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

ಮುಂಬೈನಂತಹ (Mumbai) ನಗರವೂ ಯಾರೇ ಯಾವ ಮೂಲೆಯಿಂದ ಬಂದರೂ ತಮ್ಮವರು ಎಂಬಂತೆ ಸ್ವೀಕರಿಸುತ್ತದೆ. ಮುಂಬೈ ಯಾರನ್ನು ಹಸಿವಿನಿಂದ ಸಾಯಲು ಬಿಡುವುದಿಲ್ಲ. ಹೀಗಾಗಿ ಸಣ್ಣ ಉದ್ಯೋಗ ಸಿಕ್ಕರೂ ಸರಿಯೇ, ಇಲ್ಲಿ ನೆಮ್ಮದಿಯಿಂದ ಜೀವಿಸಬಹುದು. ಬುದ್ಧಿವಂತಿಕೆಯಿದ್ದರೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಲಕ್ಷಾನುಗಟ್ಟಲೇ ದುಡಿಯಬಹುದು. ಮುಂಬೈನ ವಕೀಲೆಯೊಬ್ಬರು ತಮ್ಮ ಮನೆಗೆ ಅಡುಗೆ ಮಾಡಲು ಬರುವ ಕೆಲಸಗಾರರ ಸಂಬಳದ ಬಗ್ಗೆ ಪೋಸ್ಟ್ ಮಾಡಿದ್ದಾರೆ. 30 ನಿಮಿಷ ಅಡುಗೆ ಕೆಲಸ, ತಿಂಗಳಿಗೆ 18,000 ರೂ ಎಂದಿದ್ದಾರೆ. ಈ ಮಹಿಳೆಯ ಪೋಸ್ಟ್ ವೈರಲ್ ಆಗಿದ್ದು, ಬಳಕೆದಾರರು ನಿಜವೇ ಎಂದು ಕೇಳಿದ್ದಾರೆ.
@AyushiiDoshii ಹೆಸರಿನ ಎಕ್ಸ್ ಖಾತೆಯಲ್ಲಿ ಮಹಿಳೆಯೊಬ್ಬರು ತಮ್ಮ ಮನೆಗೆ ಬರುವ ಅಡುಗೆಯವ ತಿಂಗಳಿಗೆ ಎಷ್ಟು ಸಂಪಾದನೆ ಮಾಡ್ತಾನೆ ಎಂದು ಈ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನನ್ನ ಮಹಾರಾಜ್ (ಅಡುಗೆಯವ)’ ಪ್ರತಿ ದಿನ ಅರ್ಧ ಗಂಟೆ ಕೆಲಸ ಮಾಡುತ್ತಾನೆ. ತಿಂಗಳಿಗೆ 18,000 ರೂ ಪಡೆಯುತ್ತಾರೆ . ಹೀಗೆ ಹತ್ತು ಹನ್ನೆರಡು ಮನೆಗಳಲ್ಲಿ ಪ್ರತಿದಿನ ಕೆಲಸ ಮಾಡುತ್ತಾರೆ. ಉಚಿತ ಊಟ ಚಹಾ ಸಿಗುತ್ತದೆ. ಒಂದು ವೇಳೆ ಸರಿಯಾಗಿ ಸಂಬಳ ಕೊಡದ್ದಿದರೆ ವಿದಾಯ ಹೇಳದೇ ಹೊರಟು ಹೋಗುತ್ತಾರೆ ಎಂದು ಇಲ್ಲಿ ಬರೆಯಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
My Maharaj (Cook) •Charges ₹18k per house •Max 30 mins per house •10–12 houses daily •Free food & free chai everywhere •Gets paid on time or leaves without a goodbye 😭
Meanwhile I’m out here saying “gentle reminder” with trembling hands with minimum salary.🙂
— Adv. Ayushi Doshi (@AyushiiDoshiii) July 29, 2025
ಇದನ್ನೂ ಓದಿ: Viral: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ಈತ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಜುಲೈ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೀವು ಯಾಕೆಅಷ್ಟು ಸಂಬಳ ನೀಡುತ್ತಿದ್ದೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಬಳಕೆದಾರರೊಬ್ಬರು, ನನ್ನ ಅಡುಗೆಯವರು ಇಬ್ಬರಿಗೆ ಅಡುಗೆ ಮಾಡಲು 30 ನಿಮಿಷ ತೆಗೆದುಕೊಳ್ಳುತ್ತಾರೆ. ನಾನು ತಿಂಗಳಿಗೆ 4600 ರೂ ಕೊಡುವೆನು. ಇಷ್ಟು ಸಂಬಳ ನೀಡುವುದು ಯಾಕೆ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಅಷ್ಟು ಸಂಬಳ ಪಡೆಯಲು ಅವರು ಅರ್ಹರು, ಯಾಕಂದ್ರೆ ಅವರು ಮಾಡುವ ಕೆಲಸದಲ್ಲಿ ಅವರ ಶ್ರಮ ಖಂಡಿತ ಇರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬುದ್ಧಿವಂತಿಕೆಯಿದ್ದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೇಗೂ ಬದುಕಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Sun, 3 August 25








