AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಅಸಹಾಯಕ ಪತಿ

Video: ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಅಸಹಾಯಕ ಪತಿ

ನಯನಾ ರಾಜೀವ್
|

Updated on:Aug 11, 2025 | 10:06 AM

Share

ಜೀವನ ಪೂರ್ತಿ ಜತೆಯಾಗಿರುತ್ತೇನೆ ಎಂದು ಪ್ರಮಾಣ ಮಾಡಿದವಳು ಕಣ್ಣಮುಂದೆಯೇ ಪ್ರಾಣಬಿಟ್ಟಾಗ ಆ ಸಂಗಾತಿಗೆ ಹೇಗಾಗಿರಬಹುದು. ಒಂದೆಡೆ ಪತ್ನಿಗೆ ಆದ ಅಪಘಾತ, ಇನ್ನೊಂದೆಡೆ ಎಲ್ಲಾದರೂ ಸ್ವಲ್ಪ ಉಸಿರಿದ್ದರೂ ಬದುಕಿಸಿಕೊಳ್ಳುತ್ತೇನೆಂಬ ಸ್ವಲ್ಪ ಭರವಸೆಯೂ ಕೂಡ ಸತ್ತು ಹೋಗಿತ್ತು. ಯಾವ ವಾಹನವು ಸಿಗದೆ ಪರದಾಡುವಂತಾಗಿತ್ತು. ಯಾವುದೇ ವಾಹನ ಸಿಗದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದ ಪತ್ನಿಯ ಶವವನ್ನು ಬೈಕ್​​ನಲ್ಲಿ ಕಟ್ಟಿ ಪತಿಯೊಬ್ಬ ಹೊತ್ತೊಯ್ದಿರುವ ಹೃದಯ ವಿದ್ರಾವಕ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ನಾಗ್ಪುರ, ಆಗಸ್ಟ್​ 11: ಜೀವನ ಪೂರ್ತಿ ಜತೆಯಾಗಿರುತ್ತೇನೆ ಎಂದು ಪ್ರಮಾಣ ಮಾಡಿದವಳು ಕಣ್ಣಮುಂದೆಯೇ ಪ್ರಾಣಬಿಟ್ಟಾಗ ಆ ಸಂಗಾತಿಗೆ ಹೇಗಾಗಿರಬಹುದು. ಒಂದೆಡೆ ಪತ್ನಿಗೆ ಆದ ಅಪಘಾತ, ಇನ್ನೊಂದೆಡೆ ಎಲ್ಲಾದರೂ ಸ್ವಲ್ಪ ಉಸಿರಿದ್ದರೂ ಬದುಕಿಸಿಕೊಳ್ಳುತ್ತೇನೆಂಬ ಸ್ವಲ್ಪ ಭರವಸೆಯೂ ಕೂಡ ಸತ್ತು ಹೋಗಿತ್ತು. ಯಾವ ವಾಹನವು ಸಿಗದೆ ಪರದಾಡುವಂತಾಗಿತ್ತು.

ಯಾವುದೇ ವಾಹನ ಸಿಗದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದ ಪತ್ನಿಯ ಶವವನ್ನು ಬೈಕ್​​ನಲ್ಲಿ ಕಟ್ಟಿ ಪತಿಯೊಬ್ಬ ಹೊತ್ತೊಯ್ದಿರುವ ಹೃದಯ ವಿದ್ರಾವಕ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಈ ಘಟನೆ ನಾಗ್ಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಿಯೋಲಾಪರ್ ಪೊಲೀಸ್ ವ್ಯಾಪ್ತಿಯ ಮೊರ್ಫಾಟಾ ಪ್ರದೇಶದ ಬಳಿಯ ನಾಗ್ಪುರ-ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಗ್ಯಾರ್ಸಿ ಅಮಿತ್ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ನಿರ್ಲಕ್ಷಿಸಲ್ಪಟ್ಟಿದ್ದರಿಂದ ಅವರ ಪತಿ ಅಮಿತ್ ಯಾದವ್ ಅಸಹಾಯಕರಾಗಿದ್ದರು.ಶವವನ್ನು ಸಾಗಿಸಲು ಯಾವುದೇ ಸಹಾಯ ಸಿಗದ ಕಾರಣ, ಹತಾಶನಾದ ಅಮಿತ್ ತನ್ನ ಪತ್ನಿಯ ಶವವನ್ನು ತನ್ನ ದ್ವಿಚಕ್ರ ವಾಹನಕ್ಕೆ ಕಟ್ಟಿ ಮಧ್ಯಪ್ರದೇಶದಲ್ಲಿರುವ ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದ್ದರು.

ಈ ದಂಪತಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾಗಿದ್ದರೂ, ಕಳೆದ 10 ವರ್ಷಗಳಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 11, 2025 10:05 AM