AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಮ್ಯಾಕ್ಸ್​ವೆಲ್ ಮ್ಯಾಜಿಕ್... ಎಂತಹ ಅದ್ಭುತ ಕ್ಯಾಚ್

VIDEO: ಮ್ಯಾಕ್ಸ್​ವೆಲ್ ಮ್ಯಾಜಿಕ್… ಎಂತಹ ಅದ್ಭುತ ಕ್ಯಾಚ್

ಝಾಹಿರ್ ಯೂಸುಫ್
|

Updated on: Aug 11, 2025 | 8:53 AM

Share

Australia vs South Africa: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟಿಮ್ ಡೇವಿಡ್ (83) ಅವರ ಅರ್ಧಶತಕದ ನೆರವಿನೊಂದಿಗೆ 20 ಓವರ್​ಗಳಲ್ಲಿ 178 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 161 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 17 ರನ್​ಗಳ ಜಯ ಸಾಧಿಸಿದೆ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಹಿಡಿದ ಕ್ಯಾಚ್​ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಸ್ಟ್ರೇಲಿಯಾದ ಡಾರ್ವಿನ್​ನ ಮರ್ರಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯರು 20 ಓವರ್​ಗಳಲ್ಲಿ 10 ವಿಕೆಟ್ ಕಳೆದುಕೊಂಡು 178 ರನ್​ ಕಲೆಹಾಕಿದ್ದರು.

179 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಆರಂಭಿಕ ದಾಂಡಿಗ ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕೊನೆಯ ಓವರ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 21 ರನ್​ಗಳ ಅವಶ್ಯಕತೆಯಿತ್ತು. ಬೆನ್ ದ್ವಾರಶುಯಿಸ್ ಎಸೆದ 20ನೇ ಓವರ್​ನ 2ನೇ ಎಸೆತದಲ್ಲಿ ರಿಕೆಲ್ಟನ್ ಲಾಂಗ್ ಆನ್​ನತ್ತ ಭರ್ಜರಿಯಾಗಿ ಬಾರಿಸಿದ್ದರು.

ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಗಾಳಿಯಲ್ಲಿ ಜಿಗಿದ ಗ್ಲೆನ್ ಮ್ಯಾಕ್ಸ್​ವೆಲ್ ಚೆಂಡನ್ನು ತಡೆದರು. ಅಷ್ಟೇ ಅಲ್ಲದೆ ಅಷ್ಟೇ ವೇಗದಲ್ಲಿ ಬೌಂಡರಿ ಲೈನ್​ ಒಳಗೆ ಮರಳಿದ ಮ್ಯಾಕ್ಸಿ ಕ್ಯಾಚ್ ಹಿಡಿದರು. ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಗ್ಲೆನ್ ಮ್ಯಾಕ್ಸ್​ವೆಲ್ ಫೀಲ್ಡಿಂಗ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 179 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 161 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 17 ರನ್​ಗಳ ಜಯ ಸಾಧಿಸಿದೆ.