ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್ಕೌಂಟರ್; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ
Encounter In Kashmir: ಶೊಕ್ಬಾಬಾದ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ರಕ್ಷಣಾ ಪಡೆಗಳ ಜಂಟಿ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆಗಳು ಅರಣ್ಯಕ್ಕೆ ತೆರಳುತ್ತಿದ್ದಂತೆ, ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು.
ಉತ್ತರ ಕಾಶ್ಮೀರ (North Kashmir)ದ ಬಂಡಿಪೋರಾದಲ್ಲಿ ಇಂದು ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರ ಹತ್ಯೆ (Terrorists Killed)ಯಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಬಂಡಿಪೋರಾ ಜಿಲ್ಲೆಯ ಸುಮ್ಲಾರ್ನ ಶೊಕ್ಬಾಬಾ ಎಂಬ ಪ್ರದೇಶದಲ್ಲಿ ರಕ್ಷಣಾ ಪಡೆಗಳು(Security Forces) ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದ್ದು, ಅವರು ಯಾವ ಸಂಘಟನೆಗೆ ಸೇರಿದವರು, ಹೆಸರೇನು ಎಂಬಿತ್ಯಾದಿ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.
ಶೊಕ್ಬಾಬಾದ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ರಕ್ಷಣಾ ಪಡೆಗಳ ಜಂಟಿ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆಗಳು ಅರಣ್ಯಕ್ಕೆ ತೆರಳುತ್ತಿದ್ದಂತೆ, ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಹಾಗಾಗಿ ನಾವೂ ಪ್ರತಿ ದಾಳಿ ಮಾಡಬೇಕಾಯಿತು. ಈ ಗುಂಡಿನ ವಿನಿಮಯದ ವೇಳೆ ಮೂವರು ಯೋಧರಿಗೆ ಗಾಯವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
#BandiporaEncounterUpdate: 02 unidentified #terrorists killed. #Operation in progress. Further details shall follow. @JmuKmrPolice https://t.co/Oa4SuJJHkR
— Kashmir Zone Police (@KashmirPolice) July 24, 2021
ಭಾರತೀಯ ಸೇನೆಯ ಸಿಆರ್ಪಿಎಫ್ ಸೈನಿಕರೊಂದಿಗೆ, 13ಆರ್ಆರ್ ಮತ್ತು 14 ಆರ್ಆರ್ ಯೋಧರು, ಪೊಲೀಸರು ಸೇರಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನಷ್ಟು ಉಗ್ರರು ಇರಬಹುದು ಎಂದು ಹೇಳಲಾಗಿದ್ದು, ರಕ್ಷಣಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ತತ್ತರಿಸಿದ ಬೆಳಗಾವಿ; ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಲೈನ್ಮನ್ಗಳು!
Published On - 1:34 pm, Sat, 24 July 21