AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಉತ್ಪನ್ನ ರಫ್ತಿನಲ್ಲಿ ಭಾರತಕ್ಕೆ 9ನೇ ಸ್ಥಾನ; ಪ್ರಧಾನಿ ಮೋದಿ ಸರ್ಕಾರದ ಪ್ರಯತ್ನಗಳ ಫಲವೆಂದ ಸಚಿವ ಪ್ರಲ್ಹಾದ್ ಜೋಶಿ

ಹಾಗೇ ಭಾರತ 2019ರಲ್ಲಿ, ಹತ್ತಿ ಉತ್ಪನ್ನದ ಶೇ.7.6ರಷ್ಟನ್ನು ರಫ್ತು ಮಾಡುತ್ತಿದ್ದು, ಸದ್ಯ ಮೂರನೇ ದೊಡ್ಡರಾಷ್ಟ್ರವಾಗಿದೆ. ಹಾಗೇ ಶೇ.10ರಷ್ಟು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ನಾಲ್ಕನೇ ದೊಡ್ಡ ದೇಶವಾಗಿದೆ.

ಕೃಷಿ ಉತ್ಪನ್ನ ರಫ್ತಿನಲ್ಲಿ ಭಾರತಕ್ಕೆ 9ನೇ ಸ್ಥಾನ; ಪ್ರಧಾನಿ ಮೋದಿ ಸರ್ಕಾರದ ಪ್ರಯತ್ನಗಳ ಫಲವೆಂದ ಸಚಿವ ಪ್ರಲ್ಹಾದ್ ಜೋಶಿ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Jul 24, 2021 | 1:09 PM

Share

ಜಾಗತಿಕವಾಗಿ ಕೃಷಿ ಉತ್ಪನ್ನ ರಫ್ತು ( Agricultural Produce Export) ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೀಗ ವಿಶ್ವ ಮಟ್ಟದಲ್ಲಿ 9ನೇ ಸ್ಥಾನ ಸಿಕ್ಕಿದೆ. ಭಾರತ ಅಕ್ಕಿ, ಹತ್ತಿ, ಸೋಯಾಬೀನ್ಸ್​, ಮಾಂಸಗಳನ್ನು ಗಣನೀಯ ಪ್ರಮಾಣದಲ್ಲಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದ್ದು, 2019ರಲ್ಲೇ ಟಾಪ್​ 10 ಪಟ್ಟಿಯನ್ನು ಸೇರಿದೆ ವಿಶ್ವ ವಾಣಿಜ್ಯ ಸಂಸ್ಥೆ (World Trade Organization) ಹೇಳಿದೆ. ಕಳೆದ 25ವರ್ಷಗಳ ಜಾಗತಿಕ ಕೃಷಿ ವ್ಯಾಪಾರದ ಒಟ್ಟಾರೆ ಗತಿಯನ್ನಾಧರಿಸಿ ಡಬ್ಲ್ಯೂಟಿಒ ಈ ವರದಿ ಮಾಡಿದೆ.

2019ಕ್ಕೂ ಮೊದಲು ಜಾಗತಿಕ ಕೃಷಿ ಉತ್ಪನ್ನ ರಫ್ತಿನಲ್ಲಿ ನ್ಯೂಜಿಲ್ಯಾಂಡ್​ 9ನೇ ಸ್ಥಾನದಲ್ಲಿತ್ತು. 2019ರಲ್ಲಿ ಆ 9ನೇ ಸ್ಥಾನಕ್ಕೆ ಭಾರತ ಏರಿದೆ. ಹಾಗೇ 7ನೇ ಸ್ಥಾನದಲ್ಲಿದ್ದ ಮಲೇಷಿಯಾವನ್ನು ರಿಪ್ಲೇಸ್ ಮಾಡಿ ಮೆಕ್ಸಿಕೋ ಆ ಸ್ಥಾನಕ್ಕೆ ಏರಿದೆ. 2019ರ ಹೊತ್ತಿಗೆ ಭಾರತ ಜಾಗತಿಕ ಮಟ್ಟದಲ್ಲಿ ಶೇ.3.1ರಷ್ಟು ಕೃಷಿ ಉತ್ಪನ್ನ ರಫ್ತು ಮಾಡುತ್ತಿತ್ತು..ಹಾಗೇ ಮೆಕ್ಸಿಕೋ ಶೇ.3.4ರಷ್ಟು ರಫ್ತು ಮಾಡುತ್ತಿತ್ತು. ಅಮೆರಿಕ 1995ರಲ್ಲಿ ಟಾಪ್​ 1ರಲ್ಲಿ (ಶೇ.22.2)ಇತ್ತು. ಆದರೆ 2019ರಲ್ಲಿ ಅದರ ಪಾಲು ಶೇ. 13.8ಕ್ಕೆ ಕುಸಿದು ಎರಡನೇ ಸ್ಥಾನದಲ್ಲಿದೆ. ಯುರೋಪಿಯನ್​ ಒಕ್ಕೂಟದ ಪಾಲು ಶೇ.16.1 ಆಗಿ, ಅದು ಮೊದಲ ಸ್ಥಾನ ಪಡೆದಿದೆ. ಹಾಗೇ, 2019ರಲ್ಲಿ ಇನ್ನೂ ಕೆಲವು ದೇಶಗಳ ಸ್ಥಾನ ಬದಲಾಗಿದೆ. 1995ರಲ್ಲಿ ಶೇ.4.8ರಷ್ಟು ಮಾತ್ರ ಕೃಷಿ ಉತ್ಪನ್ನ ರಫ್ತು ಮಾಡುತ್ತಿದ್ದ ಬ್ರೆಜಿಲ್​ 2019ರಲ್ಲಿ 7.8ಕ್ಕೆ ಏರಿಕೆಯಾಗಿದ್ದು, ಮೂರನೇ ಅತಿದೊಡ್ಡ ರಾಷ್ಟ್ರವೆನಿಸಿಕೊಂಡಿದೆ. ಅಂದು ಚೀನಾ ಶೇ.4ರಷ್ಟು ಪಾಲಿನೊಂದಿಗೆ 6ನೇ ಸ್ಥಾನದಲ್ಲಿತ್ತು..ಈಗ ಶೇ.5.4ರಷ್ಟು ಪ್ರಮಾಣದೊಂದಿಗೆ ನಾಲ್ಕನೇ ಸ್ಥಾನಕ್ಕೇರಿದೆ

ಅಕ್ಕಿ ರಫ್ತಿನಲ್ಲಿ ಟಾಪ್​ 1 ಭಾರತ ಅಕ್ಕಿ ರಫ್ತಿನಲ್ಲಿ ಸದ್ಯ ಮೊದಲ ಸ್ಥಾನದಲ್ಲಿ ಇದೆ. 1995ರಲ್ಲಿ ಥೈಲ್ಯಾಂಡ್ ಶೇ.38ರಷ್ಟು ಅಕ್ಕಿ ರಫ್ತು ಮಾಡುತ್ತಿತ್ತು ಮತ್ತು ಅದೇ ಮೊದಲ ಸ್ಥಾನದಲ್ಲಿತ್ತು. ಆದರೀಗ ಭಾರತ ಅದನ್ನು ಹಿಂದಿಕ್ಕಿದೆ. 2019ರಲ್ಲಿ ಭಾರತ ಶೇ.33ರಷ್ಟು ಅಕ್ಕಿ ರಫ್ತು ಮಾಡುತ್ತಿದ್ದರೆ, ಥೈಲ್ಯಾಂಡ್​ ಪಾಲು ಶೇ.26ಕ್ಕೆ ಕುಸಿತವಾಗಿದೆ. ಅಂದು ಶೇ.19ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದ್ದ ಯುಎಸ್​ ಈಗ ಟಾಪ್​ 3 ಪಟ್ಟಿಯಲ್ಲಿಲ್ಲ. ಯುಎಸ್​ನ ಸ್ಥಾನಕ್ಕೆ 2019ರಲ್ಲಿ ವಿಯೆಟ್ನಾಂ ಏರಿದ್ದು, ಇದು ಜಾಗತಿಕವಾಗಿ ಶೇ. 12 ರಷ್ಟು ಅಕ್ಕಿ ರಫ್ತು ಮಾಡುತ್ತಿದೆ.

ಹತ್ತಿ ರಫ್ತಿನಲ್ಲಿ ಮೂರನೇ ದೊಡ್ಡ ರಾಷ್ಟ್ರ ಹಾಗೇ ಭಾರತ 2019ರಲ್ಲಿ, ಹತ್ತಿ ಉತ್ಪನ್ನದ ಶೇ.7.6ರಷ್ಟನ್ನು ರಫ್ತು ಮಾಡುತ್ತಿದ್ದು, ಸದ್ಯ ಮೂರನೇ ದೊಡ್ಡರಾಷ್ಟ್ರವಾಗಿದೆ. ಹಾಗೇ ಶೇ.10ರಷ್ಟು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ನಾಲ್ಕನೇ ದೊಡ್ಡ ದೇಶವಾಗಿದೆ. 1995ರಲ್ಲಿ ಹತ್ತಿ ರಫ್ತಿನಲ್ಲಿ ಭಾರತ ಟಾಪ್​ 10 ಲಿಸ್ಟ್​ನಲ್ಲಿ ಇರಲಿಲ್ಲ. ಹಾಗೇ, ಭಾರತ ಶೇ.0.1ರಷ್ಟು ಸೋಯಾಬಿನ್​ ರಫ್ತು ಮಾಡುತ್ತಿದ್ದರೂ, ಇದರಲ್ಲಿ 9ನೇ ಸ್ಥಾನದಲ್ಲಿದೆ. ಮಾಂಸ ಮತ್ತು ಖಾದ್ಯ ಮಾಂಸ ರಫ್ತು ವಿಭಾಗದಲ್ಲಿ ಜಾಗತಿಕ ವ್ಯಾಪಾರದಲ್ಲಿ 4% ಪಾಲನ್ನು ಹೊಂದಿ, ಎಂಟನೇ ಸ್ಥಾನದಲ್ಲಿದೆ. ಆದರೆ ಗೋಧಿ ಮತ್ತು ಮೆಸ್ಲಿನ್​ ರಫ್ತಿನಲ್ಲಿ 1995ರಲ್ಲಿ ಏಳನೇ ದೊಡ್ಡ ರಾಷ್ಟ್ರವಾಗಿದ್ದ ಭಾರತಕ್ಕೆ 2019ರಲ್ಲಿ ಯಾವುದೇ ಸ್ಥಾನ ಸಿಗಲಿಲ್ಲ.

ಸಚಿವ ಪ್ರಲ್ಹಾದ್ ಜೋಶಿಯವರಿಂದ ಟ್ವೀಟ್​ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ 9ನೇ ಸ್ಥಾನ ತಲುಪಿರುವುದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಳೆದ 7ವರ್ಷಗಳಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅದರ ಫಲವಾಗಿ 2019ರಲ್ಲಿ ಭಾರತ 9ನೇ ಸ್ಥಾನಕ್ಕೆ ಏರಿದೆ ಎಂದಿದ್ದಾರೆ.

ಇದನ್ನೂ ಓದಿ: ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ ಸಿಎಂ ಯಡಿಯೂರಪ್ಪ; 1800 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ

India entered into the top 10 list of agricultural produce exporters in 2019

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?