LPG Cylinder Explosion: ಅಹ್ಮದಾಬಾದ್ನಲ್ಲಿ ಎಲ್ಪಿಜಿ ಸಿಲಿಂಡರ್ ಲೀಕೇಜ್ನಿಂದ ಸ್ಫೋಟ; 7 ಮಂದಿ ಸಾವು
ಈ ಫ್ಯಾಕ್ಟರಿಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಸದಸ್ಯರು ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಆ ಕೋಣೆಯಲ್ಲಿದ್ದ ಎಲ್ಪಿಜಿ ಗ್ಯಾಸ್ನಿಂದ ಲೀಕೇಜ್ ಆಗಲು ಶುರುವಾಗಿತ್ತು.
ಗುಜರಾತ್ನ ಅಹ್ಮದಾಬಾದ್ನ ಹೊರವಲಯದಲ್ಲಿರುವ ಒಂದು ಫ್ಯಾಕ್ಟರಿಯ ಕೋಣೆಯಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟ(LPG Cylinder Explosion )ವಾಗಿ ಏಳು ಮಂದಿ (7 Killed) ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಸಂಭವಿಸಿದ ಘಟನೆ ಈಗ ಬೆಳಕಿಗೆ ಬಂದಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಲಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಸ್.ಎಸ್.ಗಮೇಟಿ ಶುಕ್ರವಾರ ತಿಳಿಸಿದ್ದಾರೆ. ಗ್ಯಾಸ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆಂದು ಹೇಳಿದ್ದಾರೆ.
ಈ ಫ್ಯಾಕ್ಟರಿಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಸದಸ್ಯರು ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಆ ಕೋಣೆಯಲ್ಲಿದ್ದ ಎಲ್ಪಿಜಿ ಗ್ಯಾಸ್ನಿಂದ ಲೀಕೇಜ್ ಆಗಲು ಶುರುವಾಗಿತ್ತು. ವಾಸನೆ ಬಂದ ಕೂಡಲೇ ನೆರೆಮನೆಯವರು ಈ ಕೋಣೆಯ ಬಾಗಿಲು ತಟ್ಟಿ, ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಆದರೂ ಕಾಲ ಮಿಂಚಿ ಹೋಗಿತ್ತು. ಸ್ಫೋಟವಾಗಿದೆ. ನಂತರ ಸ್ಫೋಟಗೊಂಡಿದೆ. ಒಟ್ಟು 10 ಜನರು ಇಲ್ಲಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿಯೇ ಇದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಶಾಕ್ ಕೊಟ್ಟ ಖಾಸಗಿ ಶಾಲೆಗಳು; ಅಗಸ್ಟ್ 2 ರಿಂದ ಶಾಲೆಗಳ ಆರಂಭಕ್ಕೆ ಸಿದ್ಧತೆ
Seven dead in LPG Cylinder Explosion at Gujarat