ಬೆಂಗಳೂರು-ಮುಂಬೈ ಹೆದ್ದಾರಿ ಮೇಲೆ ಗುಡ್ಡದ ಕಲ್ಲು ಮಣ್ಣು; ಬೈಕ್ ಸವಾರನ ರಕ್ಷಣೆ, 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಹಿರಣ್ಯಕೇಶಿ ನದಿಯಿಂದ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಕುಂಬಾರಗಲ್ಲಿ, ಹೊಸ ಓಣಿ, ಮಠ ಗಲ್ಲಿಯಲ್ಲಿದ್ದ ಜನರನ್ನ ಶಿಫ್ಟ್ ಮಾಡಲಾಗಿದೆ. ಮೂರು ಕಾಲೋನಿಯಲ್ಲಿ ಇನ್ನೂರಕ್ಕೂ ಅಧಿಕ ಜನರಿದ್ದಾರೆ. ಆದರೆ ಕೆಲ ಗ್ರಾಮಸ್ಥರು ಜಾನುವಾರು ಬಿಟ್ಟು ಬರಲ್ಲವೆಂದು ಹೇಳುತ್ತಿದ್ದಾರೆ.

ಬೆಂಗಳೂರು-ಮುಂಬೈ ಹೆದ್ದಾರಿ ಮೇಲೆ ಗುಡ್ಡದ ಕಲ್ಲು ಮಣ್ಣು; ಬೈಕ್ ಸವಾರನ ರಕ್ಷಣೆ, 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ
ಸಂಕಷ್ಟಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ:


ಬೆಳಗಾವಿ: ರಾಜ್ಯದ ತುದಿ ಭಾಗವಾದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಹಾವಳಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಭಾರಿ ಮಳೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರು-ಮುಂಬೈ ರಸ್ತೆಗೆ ಗುಡ್ಡದ ಕಲ್ಲು, ಮಣ್ಣು ಅಡ್ಡಲಾಗಿ ಬಿದ್ದಿದೆ. ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವ ನಿಧಿ ಘಾಟ್ ನಲ್ಲಿ ಗುಡ್ಡ ಕುಸಿದು ಕಲ್ಲುಗಳು ರಸ್ತೆ ಮೇಲೆ ಬರ್ತಿವೆ. ಇದರಿಂದಾಗಿ ಚತುಷ್ಪದ ರಸ್ತೆಯಲ್ಲಿ ಒಂದು ಕಡೆ ರಸ್ತೆ ಬಂದ್ ಆಗಿದೆ.

ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ:
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಹೊರ ವಲಯದಲ್ಲಿ ಮಳೆ ನೀರಿಗೆ ಕೆರೆಗಳೆಲ್ಲವೂ ಭರ್ತಿ‌ಯಾಗಿವೆ. ಸಂಕೇಶ್ವರ-ಚಿಕ್ಕೋಡಿ ರಸ್ತೆಯಲ್ಲಿ ಕೆರೆ ನೀರು ರಭಸದಿಂದ ಹರಿಯುತ್ತಿದೆ. ಆದರೂ ನೀರು ಲೆಕ್ಕಿಸದೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನೀರಿನ ಸೆಳೆತಕ್ಕೆ ಆಯತಪ್ಪಿ ಬಿದ್ದು, ಕೊಚ್ಚಿ ಹೋಗುತ್ತಿದ್ದ ಸವಾರನನ್ನು ತಕ್ಷಣ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ SDRF ತಂಡದಿಂದ ರಕ್ಷಣಾ ಕಾರ್ಯ ನಡೆದಿದ್ದು, ಸಂಕಷ್ಟಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ಹಿರಣ್ಯಕೇಶಿ ನದಿಯಿಂದ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಕುಂಬಾರಗಲ್ಲಿ, ಹೊಸ ಓಣಿ, ಮಠ ಗಲ್ಲಿಯಲ್ಲಿದ್ದ ಜನರನ್ನ ಶಿಫ್ಟ್ ಮಾಡಲಾಗಿದೆ. ಮೂರು ಕಾಲೋನಿಯಲ್ಲಿ ಇನ್ನೂರಕ್ಕೂ ಅಧಿಕ ಜನರಿದ್ದಾರೆ. ಆದರೆ ಕೆಲ ಗ್ರಾಮಸ್ಥರು ಜಾನುವಾರು ಬಿಟ್ಟು ಬರಲ್ಲವೆಂದು ಹೇಳುತ್ತಿದ್ದಾರೆ. ಎಲ್ಲರನ್ನೂ ಶಿಫ್ಟ್​​ ಮಾಡುವ ಕೆಲಸ ಮಾಡ್ತೇವಿ ಎಂದು ಟಿವಿ9ಗೆ ತಹಶಿಲ್ದಾರ ದುಂಡಪ್ಪ ಹೂಗಾರ‌ ತಿಳಿಸಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿರುವ ವೃದ್ಧನ ರಕ್ಷಣೆ-ಆರೈಕೆ:

ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಂಕೇಶ್ವರದ ಕುಂಬಾರಗಲ್ಲಿಯಲ್ಲಿದ್ದ ರೋಗಿ ವೃದ್ಧನನ್ನು ರಕ್ಷಣೆ ಮಾಡಲಾಗಿದೆ. ಹಿರಣ್ಯಕೇಶಿ ನದಿ ನೀರು ನುಗ್ಗಿ, ಆತನ ಮನೆ ಜಲಾವೃತವಾಗಿತ್ತು. ಎಸ್​ಡಿಆರ್‌ಎಫ್ ಸಿಬ್ಬಂದಿ ವೃದ್ಧನನ್ನು ರಕ್ಷಣೆ ಮಾಡಿದ್ದಾರೆ. ಬೆಳಗ್ಗೆಯಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಆತನನ್ನು ತಕ್ಷಣ ರಕ್ಷಣೆ ಮಾಡಿ ಆರೈಕೆಗೆ ಆಸ್ಪತ್ರೆಗೆ ಸೇರಿಸಿದ್ದಾರೆ.

ಬೆಳಗಾವಿ: ವಸತಿ ಗೃಹದಿಂದ ನೆರೆ ಸಂತ್ರಸ್ತರನ್ನು ಹೊರ ಹಾಕಿದ ತಹಶೀಲ್ದಾರ್; ಸುರಿಯುವ ಮಳೆಯಲ್ಲಿ ಕುಳಿತ ಹತ್ತಾರು ಕುಟುಂಬ

(Belagavi heavy rains bangalore mumbai nh road blockage 20 families rescued in sankeshwar )

Click on your DTH Provider to Add TV9 Kannada