AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಬೆಳಗಾವಿಯ ಅಡಿಬಟ್ಟಿ ಗ್ರಾಮದಲ್ಲಿ ರಕ್ಷಣೆಗಾಗಿ ದಂಪತಿ, ಮಗು ಮೊರೆ

Belagavi: ಜಿಲ್ಲೆಯ ಗೋಕಾಕ್ ತಾಲೂಕಿನ ಅಡಬಟ್ಟಿ ಗ್ರಾಮವೊಂದರಲ್ಲಿ ಕುಟುಂಬವೊಂದು ಸಿಲುಕಿಕೊಂಡಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಕುಟುಂಬ ರಕ್ಷಣೆಗಾಗಿ ಮೊರೆಯಿಟ್ಟಿದೆ.

Karnataka Rain: ಬೆಳಗಾವಿಯ ಅಡಿಬಟ್ಟಿ ಗ್ರಾಮದಲ್ಲಿ ರಕ್ಷಣೆಗಾಗಿ ದಂಪತಿ, ಮಗು ಮೊರೆ
ಸಾಂದರ್ಭಿಕ ಚಿತ್ರ
TV9 Web
| Updated By: shivaprasad.hs|

Updated on:Jul 24, 2021 | 2:19 PM

Share

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ದಂಪತಿ, ಮಗು ಸಿಲುಕಿಕೊಂಡಿದ್ದಾರೆ. ಕ್ಷಣಕ್ಷಣಕ್ಕೂ ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಘಟಪ್ರಭಾ ನದಿ ನೀರಿನಿಂದ ಅಡಿಬಟ್ಟಿ ಗ್ರಾಮ ಜಲಾವೃತಗೊಂಡಿದ್ದು, ರಾತ್ರೋರಾತ್ರಿ ಗ್ರಾಮದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಎತ್ತರದ ಮನೆಯಲ್ಲಿದ್ದ ದಂಪತಿ, ಮಗು ತೆರಳಿಲ್ಲ. ಈಗ ಅವರು ಮನೆಯಲ್ಲೇ ಸಿಲುಕಿಕೊಂಡಿದ್ದು, ಜೀವ ಭಯದಲ್ಲಿ ರಕ್ಷಣೆಗೆ ಮೊರೆ ಇಡುತ್ತಿದ್ದಾರೆ.

ಗೋಕಾಕ್: ಗೋಕಾಕ್ ನಗರದಲ್ಲೂ ಪ್ರವಾಹದ ಪರಿಸ್ಥಿತಿಯಿದ್ದು, ಘಟಪ್ರಭಾ ನದಿ ನೀರು‌ ನಗರ ಪ್ರವೇಶ ಮಾಡಿದೆ. ನದಿ ತಟದ ಮನೆಗಳು ಹಾಗೂ ಆಸ್ಪತ್ರೆ ಜಲಾವೃತಗೊಂಡಿದ್ದು, 19ರೋಗಿಗಳನ್ನ ರಕ್ಷಣೆ ಮಾಡಿ ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮವು ನಡುಗಡ್ಡೆಯಂತಾಗಿದ್ದು, ಸ್ಥಳೀಯರಿಂದರಲೇ ಸುರಕ್ಷಿತ ಪ್ರದೇಶಕ್ಕೆ ಗ್ರಾಮಸ್ಥರನ್ನು ಕರೆದೊಯ್ಯಲಾಗುತ್ತಿದೆ. ಸ್ಥಳೀಯರು ತಾವೇ ಸ್ವತಃ ಬೋಟ್ ನಡೆಸಿಕೊಂಡು ಗ್ರಾಮಸ್ಥರ ರಕ್ಷಣೆ ಮಾಡುತ್ತಿದ್ದಾರೆ.

ಬೆಳಗಾವಿಯ ಚಿಕ್ಕಾಲಗುಡ್ಡದಲ್ಲಿ ಸೂರು ಕಳೆದುಕೊಂಡವರ ಅಳಲು:

ಇದನ್ನೂ ಓದಿ: ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಳ; ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಪುಣ್ಯ ಸ್ನಾನ, ಮುಡಿ ಸೇವೆಗೆ ತಾತ್ಕಾಲಿಕ ನಿರ್ಬಂಧ

ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ತತ್ತರಿಸಿದ ಬೆಳಗಾವಿ; ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಲೈನ್​ಮನ್​ಗಳು!

(A family in Belagavi searching for help due to Ghataprabha river flood)

Published On - 2:05 pm, Sat, 24 July 21