AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಇಮೇಲ್​​ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್​ಗೆ 1 ಕೋಟಿ ರೂ. ವಂಚನೆ

ಬೆಂಗಳೂರು ಪೊಲೀಸರು ನಕಲಿ ನ್ಯಾಯಾಲಯದ ಆದೇಶಗಳನ್ನು ಬಳಸಿ ಬ್ಯಾಂಕ್‌ಗಳನ್ನು ವಂಚಿಸಿದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು 18 ನಕಲಿ ಆದೇಶಗಳ ಮೂಲಕ 1.23 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ. ಪೊಲೀಸರು ತನಿಖೆಯಲ್ಲಿ 62 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸರ್ಕಾರಿ ಇಮೇಲ್ ಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಸರ್ಕಾರಿ ಇಮೇಲ್​​ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್​ಗೆ 1 ಕೋಟಿ ರೂ. ವಂಚನೆ
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on:Apr 11, 2025 | 7:33 PM

ಬೆಂಗಳೂರು ಏಪ್ರಿಲ್​ 11: ನಕಲಿ ಕೊರ್ಟ್ (Court) ಆದೇಶ ನೀಡಿ ಬ್ಯಾಂಕ್​ಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು (Bengaluru) ಬಂಧಿಸಿದ್ದಾರೆ. ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಬ್ಯಾಂಕ್​ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ​ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್​ಗೆ ಕಳುಹಿಸಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು.

ಬ್ಯಾಂಕ್​ನ ಸಿಬ್ಬಂದಿ ಪರಿಶೀಲನೆ ನಡೆಸಲು ಕರೆ ಮಾಡಿದಾಗಲೂ ಇವರು ಸುಳ್ಳು ಮಾಹಿತಿ ನೀಡುತ್ತಿದ್ದರು. ಇದೇ ರೀತಿ ಒಟ್ಟು 18 ನಕಲಿ ಕೋರ್ಟ್ ಆದೇಶಗಳನ್ನು ಆರೋಪಿಗಳು ಬ್ಯಾಂಕ್​ಗೆ ನೀಡಿದ್ದಾರೆ. ನಕಲಿ ಆದೇಶಗಳ ಮೂಲಕ 1.23 ಕೋಟಿ ರೂ. ವಂಚಿಸಿದ್ದಾರೆ. ತನಿಖೆ ವೇಳೆ ಪೊಲೀಸರು 62 ಲಕ್ಷ ರೂ. ಹಣವನ್ನು ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿದ್ದಾರೆ.

ಆರೋಪಿಗಳು ವಂಚನೆ ಮಾಡಲು ಸರ್ಕಾರದಿಂದಲೇ ಇ ಮೇಲ್ ಐಡಿ ಪಡೆದುಕೊಂಡಿದ್ದಾರೆ. ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ ಮೂಲಕ ಇಮೆಲ್ ಐಡಿ ಪಡೆದಿದ್ದಾರೆ. ತಾವು ಸರ್ಕಾರದ ಅಧಿಕಾರಿಗಳು ಹೀಗಾಗಿ ಇಮೇಲ್ ಐಡಿ ಬೇಕು ಎಂದು ಆರೋಪಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಅಧಿಕೃತವಾಗಿ cb-crime-sog@karnataka.gov.in ಎಂಬ ಹೆಸರಿನ ಇಮೇಲ್ ಐಡಿ ಪಡೆದಿದ್ದಾರೆ. ಇದೇ ಇಮೇಲ್ ಐಡಿ ಬಳಸಿ ಬ್ಯಾಂಕ್ ಗಳಿಗೆ ನಕಲಿ ಕೋರ್ಟ್ ಆರ್ಡರ್ ಕಳಿಸಿ ಹಣ ವಂಚನೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ
Image
ಬೆಂಗಳೂರು ಪೊಲೀಸ್​ ಆಯುಕ್ತರನ್ನೇ ಬಿಡದ ಸೈಬರ್​ ಖದೀಮರು: ಫೇಕ್ ಅಕೌಂಟ್ ಓಪನ್
Image
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
Image
ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು
Image
ಕರಾಳ ಗುರುವಾರ: ಕರ್ನಾಟಕದಾದ್ಯಂತ ಸರಣಿ ಅಪಘಾತಗಳಲ್ಲಿ 17 ಜನ ಸಾವು

ಇದನ್ನೂ ಓದಿ: ಬುರ್ಖಾ ಧರಿಸಿ ಸ್ನೇಹಿತನೊಂದಿಗೆ ಪಾರ್ಕ್​ನಲ್ಲಿ ಕುಳಿತ ಯುವತಿ: ಐವರು ಯುವಕರಿಂದ ನಿಂದನೆ, ಹಲ್ಲೆ ಆರೋಪ

ಐಪಿಎಲ್​ ಕ್ರಿಕೆಟ್​​ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರ ಬಂಧನ

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಐಪಿಎಲ್​ ಕ್ರಿಕೆಟ್​​ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಮಂಚೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಶ್ವತ್ಥ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 8 ಸಾವಿರ ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಮೇಲೆ ರೌಡಿಶೀಟ್ ತೆರೆಯಲು ಪೊಲೀಸರು ನಿರ್ಧರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Fri, 11 April 25

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ