ಕೇರಳದ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರು ಪತ್ತೆ
ಕೇರಳದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ನೇಣು ಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಸಜೀವ್ ಮೋಹನನ್ (34), ಅವರ ಪತ್ನಿ ರೇಷ್ಮಾ (30) ಮತ್ತು ಅವರ ಇಬ್ಬರು ಮಕ್ಕಳು - 1 ನೇ ತರಗತಿಯಲ್ಲಿ ಓದುತ್ತಿದ್ದ ಆರು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ. ಉಪ್ಪುತರಾದ ಪಟ್ಟತಂಬಲಂನ ಆಟೋ ಚಾಲಕ ಸಂಜೀವ್ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಕೇರಳ, ಏಪ್ರಿಲ್ 11: ಇಡುಕ್ಕಿಯ ಮನೆಯೊಂದರಲ್ಲಿ ಕುಟುಂಬದ ನಾಲ್ವರು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರು ಮಕ್ಕಳು ಸೇರಿ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ. ಸಂಜೆ 4.30 ರ ಸುಮಾರಿಗೆ ಲಿವಿಂಗ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಸ್ವಲ್ಪ ಸಮಯದಿಂದ ಕುಟುಂಬ ಸದಸ್ಯರು ಕಾಣಿಸಿಕೊಂಡಿರಲಿಲ್ಲ, ಮಾತು ಕೂಡ ಕೇಳಿರಲಿಲ್ಲ. ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರನ್ನು ಸಜೀವ್ ಮೋಹನನ್ (34), ಅವರ ಪತ್ನಿ ರೇಷ್ಮಾ (30) ಮತ್ತು ಅವರ ಇಬ್ಬರು ಮಕ್ಕಳು – 1 ನೇ ತರಗತಿಯಲ್ಲಿ ಓದುತ್ತಿದ್ದ ಆರು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ. ಉಪ್ಪುತರಾದ ಪಟ್ಟತಂಬಲಂನ ಆಟೋ ಚಾಲಕ ಸಂಜೀವ್ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಪೋಷಕರು ಮಕ್ಕಳ ಪ್ರಾಣ ತೆಗೆಯುವ ಮೊದಲು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿವರವಾದ ತನಿಖೆಯ ನಂತರ ಘಟನೆಗಳ ನಿಖರವಾದ ಕಾರಣ ತಿಳಿದುಬರಲಿದೆ. ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಮತ್ತಷ್ಟು ಓದಿ: ಗುಂಡಿಕ್ಕಿ ಕೇಂದ್ರ ಸಚಿವ ಜಿತನ್ ಮಾಂಝಿ ಮೊಮ್ಮಗಳ ಹತ್ಯೆ
ಫೆಬ್ರವರಿಯಲ್ಲಿ, ತಿರುವನಂತಪುರಂನಲ್ಲಿರುವ ತನ್ನ ಮನೆಯಲ್ಲಿ 11 ವರ್ಷದ ಬಾಲಕಿ ಕಿಟಕಿಯ ಗ್ರಿಲ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅಪಘಾತ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ತಿಂಗಳು, ಮಾರ್ಚ್ 3 ರಂದು, ಮೂತ್ರಪಿಂಡ ಕಸಿ ಮಾಡುವಿಕೆಯ ಡಾ. ಜಾರ್ಜ್ ಪಿ ಅಬ್ರಹಾಂ ಅವರು ಕೇರಳದ ಎರ್ನಾಕುಲಂನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಘಟನಾ ಸ್ಥಳದಲ್ಲಿ ದೊರೆತ ಆತ್ಮಹತ್ಯೆ ಪತ್ರದ ಪ್ರಕಾರ, ಅವರು ಆತ್ಮಹತ್ಯೆಗೆ ಶಸ್ತ್ರಚಿಕಿತ್ಸಾ ಕೌಶಲ್ಯ ಕಡಿಮೆಯಾಗುವುದೇ ಕಾರಣ ಎಂದು ಉಲ್ಲೇಖಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ