ತುಮಕೂರು: ತೋಟಕ್ಕೆ ನುಗ್ಗಿ ಹಲವಾರು ಅಡಿಕೆ ಸಸಿಗಳನ್ನು ಕಡಿದು ಹಾಕಿದ ದುಷ್ಟರು, ರೈತನ ಗೋಳಾಟ
ತಿರುಮಲ್ಲಯ್ಯನವರ ಗೋಳಾಟ ಕೇಳಲಾಗದು. ಸಾಲಸೋಲ ಮಾಡಿ ಅವರು ಅಡಿಕೆ ತೋಟ ಮಾಡುತ್ತ್ತಿದ್ದಾರೆ. ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ ತಮ್ಮ ನೆರವಿಗೆ ಬಂದಾರು ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. ಯಾಕೆಂದರೆ, ಚೇಳೂರು ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದರೂ ಪ್ರಯೋಜನವಾಗಿಲ್ಲವಂತೆ. ಶಾಸಕ ಸಹಾಯ ಮಾಡುತ್ತಾರೆಯೇ? ಕಾದು ನೋಡಬೇಕು.
ತುಮಕೂರು, ಏಪ್ರಿಲ್ 12: ಇದು ದುಷ್ಟತನದ ಪರಮಾವಧಿ ಅಂದರೆ ತಪ್ಪಾಗಲಾರದು. ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಶಿವರಾಂಪುರ ಗ್ರಾಮದಲ್ಲಿರುವ ತಿರುಮಲ್ಲಯ್ಯನವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಗಿಡಗಳನ್ನು ನಿಷ್ಕರುಣೆಯಿಂದ ಕಡಿದುಹಾಕಿದ್ದಾರೆ. ಬೆಳೆದು ನಿಂತ ಸಸಿಗಳನ್ನು ಕಡಿದು ಹಾಕುವುದರಿಂದ ಯಾವ ಬಗೆಯ ವೈರತ್ವ ಸಾಧಿಸಿದಂತಾಗುತ್ತದೆ? ಅಡಿಕೆ ಗಿಡಗಳನ್ನು ಬೆಳೆಸಲು ರೈತ ಪಡುವ ಕಷ್ಟ ಅಷ್ಟಿಷ್ಟಲ್ಲ. ತಿರುಮಲ್ಲಯ್ಯನವರಿಗೆ ಆಗದವರು ಮಾಡಿರುವ ದುಷ್ಕೃತ್ಯವಿದು. ಹಿಂದೆಯೂ ಅವರು ಬೆಳೆದ ಮೆಡಿಸಿನಲ್ ಸೌತೆಕಾಯಿ ಬೆಳೆಯನ್ನು ದುಷ್ಟರು ನಾಶಮಾಡಿದ್ದರಂತೆ.
ಇದನ್ನೂ ಓದಿ: ದಾವಣಗೆರೆ: ಕಿಡಿಗೇಡಿಗಳ ಕಿತಾಪತಿ; ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ