ನಮ್ಮ ಹೋರಾಟದ ವಿಷಯ ಕೇಳಿ ಸರ್ಕಾರಕ್ಕೆ ತಳಮಳ ಶುರುವಾಗಿದೆ: ನಿಖಿಲ್ ಕುಮಾರಸ್ವಾಮಿ
ಇವತ್ತು 11 ಗಂಟೆಗೆ ಶುರುವಾಗುವ ಹೋರಾಟದ ನೇತೃತ್ವವನ್ನು ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ವಹಿಸಲಿದ್ದಾರೆ ಮತ್ತು ಪಕ್ಷದ ಅನೇಕ ಮುಖಂಡರು, ಮಾಜಿ ಮತ್ತು ಹಾಲಿ ಶಾಸಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ, ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು, ಏಪ್ರಿಲ್ 12: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತ್ಯೇಕ ಹೋರಾಟ ಮಾಡುತ್ತೇವೆಂದಿದ್ದ ಜೆಡಿಎಸ್ ಮುಖಂಡರು (JDS leaders) ಇಂದಿನಿಂದ ಆರಂಭಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಸಿದ್ಧತೆಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ದಾಖಲೆಗಳನ್ನು ಹೊತ್ಯೋಯಲು ನಮ್ಮ ಕಚೇರಿಗೆ ಲಾರಿ ಕಳಿಸುವ ಬದಲು ಬೆಂಗಳೂರ ನಗರದ ತುಂಬಾ ಹರಡಿರುವ ಕಸವನ್ನು ಎತ್ತಲು ಅದನ್ನು ಬಳಸಲಿ, ಭ್ರಷ್ಟಾಚಾರದ ಅರೋಪಗಳ ದಾಖಲೆಗಳನ್ನು ಹೊತ್ತ ಒಂದು ಕ್ಯಾಂಟರ್ ಅನ್ನು ನಾವೇ ಕೆಪಿಸಿಸಿ ಕಚೇರಿಗೆ ಕಳಿಸ್ತೀವಿ, ನಮ್ಮ ಹೋರಾಟದ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಶಿಬಿರದಲ್ಲಿ ತಳಮಳ ಶುರುವಾಗಿದೆ ಎಂದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ, ಭಜನೆ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ