ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶುಭ ಕಾರ್ಯಗಳಿಗೆ ಗಂಡ ಮುಂದೆ, ಹೆಂಡತಿ ಹಿಂದೆ ನಡೆಯಬೇಕು. ಅಶುಭ ಕಾರ್ಯಗಳಿಗೆ ಹೆಂಡತಿ ಮುಂದೆ, ಗಂಡ ಹಿಂದೆ ನಡೆಯಬೇಕು ಎಂಬ ನಂಬಿಕೆಗಳನ್ನು ವಿವರಿಸಲಾಗಿದೆ. ಇದರ ಹಿಂದಿನ ಕಾರಣ ಮತ್ತು ಧಾರ್ಮಿಕ ಅರ್ಥವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಏಪ್ರಿಲ್ 12: ಶುಭ ಕಾರ್ಯಗಳಿಗೆ ಹೋಗುವಾಗ ಗಂಡ ಮುಂದೆ ಮತ್ತು ಹೆಂಡತಿ ಹಿಂದೆ ಹೋಗುವುದು ಸಾಮಾನ್ಯ ಪದ್ಧತಿ. ಇದನ್ನು ಧರ್ಮಗ್ರಂಥಗಳು ಮತ್ತು ಶಾಸ್ತ್ರಗಳು ಸಮರ್ಥಿಸುತ್ತವೆ. ಗಂಡನ ಹಿಂದೆ ಹೆಂಡತಿ ನಡೆದರೆ, ಅವನ ಪುಣ್ಯ ಅವಳಿಗೂ ಸೇರುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಅಶುಭ ಕಾರ್ಯಗಳಿಗೆ ಹೋಗುವಾಗ, ಹೆಂಡತಿ ಮುಂದೆ ಮತ್ತು ಗಂಡ ಹಿಂದೆ ನಡೆಯುವುದು ವಾಡಿಕೆ. ಹೆಂಡತಿಯನ್ನು ತಾಯಿ, ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ವತಿಯ ಸ್ವರೂಪ ಎಂದು ಪರಿಗಣಿಸಿ, ಅವರು ಮುಂದೆ ಹೋಗುವುದರಿಂದ ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ. ಈ ಬಗ್ಗೆ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ ನೋಡಿ.