AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರಮಾತೆ! ಬೆಂಕಿಯಿಂದ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ

ವೀರಮಾತೆ! ಬೆಂಕಿಯಿಂದ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ

ಸುಷ್ಮಾ ಚಕ್ರೆ
|

Updated on: Apr 11, 2025 | 10:18 PM

ಅಹಮದಾಬಾದ್ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯೊಳಗಿನ ವಸ್ತುಗೆಲ್ಲ ಸುಟ್ಟುಹೋಗಿವೆ. ಈ ವೇಳೆ ಮಕ್ಕಳನ್ನು ಕಾಪಾಡಲು ಪಣತೊಟ್ಟ ಅಮ್ಮ ಆ ಮಕ್ಕಳನ್ನು ಕೆಳಗಿನ ಮಹಡಿಯಲ್ಲಿದ್ದವರಿಗೆ ನೀಡಲು ತನ್ನ ಪ್ರಾಣವನ್ನೇ ಒತ್ತಯಿಟ್ಟು ಪ್ರಯತ್ನಿಸಿ ಗೆದ್ದಿದ್ದಾಳೆ. ಬೆಂಕಿಯಿಂದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ಧೈರ್ಯ ತೋರಿ ಸಾಹಸ ಮಾಡಿದ ತಾಯಿಯ ವಿಡಿಯೋ ವೀಕ್ಷಿಸಿ.

ಅಹಮದಾಬಾದ್, ಏಪ್ರಿಲ್ 11: ಗುಜರಾತ್‌ನ (Gujarat) ಅಹಮದಾಬಾದ್‌ನ ಖೋಖ್ರಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 3ನೇ ಮಹಡಿಯಲ್ಲಿದ್ದ ಮಹಿಳೆ ತನ್ನ ಮಕ್ಕಳನ್ನು ಬೆಂಕಿಯಿಂದ ಕಾಪಾಡಲು ಕೆಳಗಿನ ಮಹಡಿಯಲ್ಲಿದ್ದವರಿಗೆ ಆ ಮಕ್ಕಳನ್ನು ಕಿಟಕಿಯಿಂದ ಕೆಳಗೆ ನೀಡುವ ಮೂಲಕ ರಕ್ಷಿಸಿದ್ದಾಳೆ. ಧೈರ್ಯ ತೋರಿ, ಸಮಯಪ್ರಜ್ಞೆಯಿಂದ ಮಕ್ಕಳನ್ನು ಕಾಪಾಡಿದ್ದಷ್ಟೇ ಅಲ್ಲದೆ ತಾನೂ ಬಚಾವಾಗಿರುವ ಆ ಮಹಿಳೆಯ ಸಾಹಸಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ