Viral : ಶ್ವಾನದ ಮುಖವಾಡ ಧರಿಸಿ ಎಣ್ಣೆ ಖರೀದಿಸಲು ಮದ್ಯದ ಅಂಗಡಿಗೆ ಬಂದ ವ್ಯಕ್ತಿ, ವಿಡಿಯೋ ವೈರಲ್
ಕುಡಿದ ಅಮಲಿನಲ್ಲಿ ಕುಡುಕ ಮಹಾಶಯರು ಮಾಡುವ ಎಡವಟ್ಟುಗಳು ಹಾಗೂ ಅವಾಂತರಗಳು ಒಂದೆರಡಲ್ಲ. ಹೌದು, ತಾವೇನು ಮಾಡುತ್ತಿದ್ದೇವೆ ಎನ್ನುವ ಪರಿವೇ ಇರುವುದಿಲ್ಲ. ಕೆಲವೊಮ್ಮೆ ಈ ಎಡವಟ್ಟುಗಳು ನಗು ತರಿಸುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಮದ್ಯ ಖರೀದಿಸಲು ಅಂಗಡಿಗೆ ಶ್ವಾನದ ಮುಖವಾಡ ಧರಿಸಿ ತೆರಳಿದ್ದು, ಈ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಳಕೆದಾರರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ಕುಡುಕ ಮಹಾಶಯರಿಗೆ ಮದ್ಯ ಅಂದ್ರೆ ಎಲ್ಲಿಲ್ಲದ ಪ್ರೀತಿ. ಊಟ ತಿಂಡಿಯಾದ್ರೂ ಬಿಟ್ಟು ಹಾಗೆ ಇರ್ತಾರೆ, ಆದರೆ ಎಣ್ಣೆ ಮಾತ್ರ ಕುಡಿಯಲೇಬೇಕು. ಹೀಗಾಗಿ ಮದ್ಯವೆಸನಿ (alcoholic) ಗಳು ಎಣ್ಣೆಗಾಗಿ ತಮ್ಮ ಪ್ರಾಣವನ್ನು ಬೇಕಾದ್ರು ಬಿಡಲು ಸಿದ್ದವಿರುತ್ತದೆ. ಕೆಲವರಂತೂ ಬೆಳ್ಳಂಬೆಳ್ಳಗೆ ಮದ್ಯದ ಅಂಗಡಿಯ (liquor shop) ಮುಂದೆ ಕ್ಯೂ ನಿಂತಿರುವುದನ್ನು ನೋಡಬಹುದು. ಬೆಳಗ್ಗೆನೇ ಕುಡಿದ ಅಮಲಿನಲ್ಲಿ ರಸ್ತೆ ಯಲ್ಲಿ ಬಿದ್ದಿರುವುದನ್ನ ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯೂ ಮದ್ಯ ಖರೀದಿಸಲು ವಿಚಿತ್ರವಾಗಿ ಬಂದಿದ್ದಾನೆ. ತನ್ನನ್ನು ಯಾರು ಕೂಡ ಗುರುತಿಸಬಾರದೆಂದು ಶ್ವಾನದ ಮುಖವಾಡ (dog mask) ಧರಿಸಿ ಬರುತ್ತಿರುವ ವಿಡಿಯೋವೊಂದು ವೈರಲ್ (viral) ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
Dana jetha ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಮದ್ಯದ ಅಂಗಡಿಯಿಂದ ಎಣ್ಣೆ ಖರೀದಿಸಿ ಹೊರ ಬರುತ್ತಿರುವುದನ್ನು ನೋಡಬಹುದು. ಪ್ರಾರಂಭದಲ್ಲಿ ಈತನ ಮುಖವನ್ನು ಗುರುತಿಸುವುದು ಕಷ್ಟವಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದಾಗ ತನ್ನನ್ನು ಯಾರು ಕೂಡ ಗುರುತಿಸಬಾರದು ಎನ್ನುವ ಕಾರಣಕ್ಕೆ ಶ್ವಾನದ ಮುಖವಾಡ ಧರಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಡಿಯೋದೊಂದಿಗೆ ಯಾರು ನನ್ನನ್ನು ಗುರುತಿಸಿದಂತೆ ಮುಖ ಮರೆ ಮಾಡಿ ಮದ್ಯ ಖರೀದಿಸಲು ಹೋಗುತ್ತೇನೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ತರಗತಿಯಲ್ಲೇ ಗಡದ್ದಾಗಿ ನಿದ್ದೆಗೆ ಜಾರಿದ ಸರ್ಕಾರಿ ಶಾಲಾಶಿಕ್ಷಕಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಏಪ್ರಿಲ್ 10 ರಂದು ಶೇರ್ ಮಾಡಲಾದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಪ್ಪತ್ತಾನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದು, ಬಳಕೆದಾರರು, ‘ಕುಡುಕನಾಗಿದ್ರು ಈತನಿಗೂ ಮರ್ಯಾದೆ ಇದೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇದು ತಮಾಷೆಗಾಗಿ ಮಾಡಿದ್ದೀರಬೇಕು, ಇಲ್ಲದಿದ್ದರೆ ಕುಡುಕರು ಯಾರಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅಂತಹ ಸ್ಥಳಕ್ಕೆ ಒಬ್ಬರೇ ಹೋಗಬಾರದು, ಗುಂಪಿನಲ್ಲಿ ಹೋದರೆ ಯಾರು ಗಮನಿಸುವುದಿಲ್ಲ’ಎಂದಿದ್ದಾರೆ. ಕೆಲವರು ಈ ವಿಡಿಯೋಗೆ ನಗುವ ಎಮೋಜಿ ಕಳುಹಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ