Viral : ತರಗತಿಯಲ್ಲೇ ಗಡದ್ದಾಗಿ ನಿದ್ದೆಗೆ ಜಾರಿದ ಸರ್ಕಾರಿ ಶಾಲಾಶಿಕ್ಷಕಿ, ವಿಡಿಯೋ ವೈರಲ್
ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆತು ಒಂದೊಳ್ಳೆ ಬದುಕು ಕಟ್ಟಿಕೊಳ್ಳಲಿ ಎನ್ನುವುದು ಪ್ರತಿಯೊಬ್ಬ ತಂದೆ ತಾಯಂದಿರ ಆಸೆ. ಹೀಗಾಗಿ ಎಷ್ಟೇ ಕಷ್ಟವಾಗಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕಿಯೇ ತರಗತಿಯಲ್ಲಿ ನಿದ್ದೆಗೆ ಜಾರಿದ್ದಾರೆ. ಸರ್ಕಾರಿ ಶಿಕ್ಷಕಿ ತರಗತಿಯಲ್ಲಿ ನಿದ್ದೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ, ಏಪ್ರಿಲ್ 10: ವಿದ್ಯಾರ್ಥಿ (student)ಗಳ ಜೀವನದಲ್ಲಿ ಶಿಕ್ಷಕ (teachers)ರ ಪಾತ್ರ ಬಹುದೊಡ್ಡದು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಶ್ರಮವಹಿಸುತ್ತಾರೆ. ಈ ಮಕ್ಕಳಿಗೆ ಭವಿಷ್ಯವನ್ನು ಕಟ್ಟಿಕೊಡಬೇಕಾದ ಶಿಕ್ಷಕರೇ ಯಾವುದೇ ಟೆನ್ಶನ್ ಇಲ್ಲದೇ ನಿದ್ದೆ ಮಾಡಿದರೆ ಹೇಗಿರುತ್ತೆ ಎಂದು ಯೋಚಿಸಿದ್ದೀರಾ. ಉತ್ತರ ಪ್ರದೇಶ (uttar pradesh) ದ ಮೀರತ್ (meerut) ನ ಕೃಷ್ಣಪುರಿ ಜೂನಿಯರ್ ಹೈಸ್ಕೂಲ್ (krishnapuri junior highschool) ನ ಶಿಕ್ಷಕಿಯೊಬ್ಬರು ತರಗತಿಯಲ್ಲೇ ನಿದ್ರೆಗೆ ಜಾರಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ನೆಟ್ಟಿಗರು ಫುಲ್ ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
Theindianbuzz ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲಾ ಅವಧಿಯಲ್ಲೇ ಮಕ್ಕಳ ಸಮ್ಮುಖದಲ್ಲಿ ತರಗತಿಯೊಳಗೆ ನಿದ್ದೆಗೆ ಜಾರಿರುವ ಶಿಕ್ಷಕಿಯನ್ನು ನೋಡಬಹುದು. ಹೌದು, ಮಹಿಳಾ ಶಿಕ್ಷಕಿ ಮಕ್ಕಳ ಬಗ್ಗೆ ಯೋಚನೆಯೇ ಇಲ್ಲದೇ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ನಿದ್ರಿಸಿದ್ದಾರೆ. ಈ ಶಿಕ್ಷಕಿಯೂ ಗಾಢವಾದ ನಿದ್ರೆಯಲ್ಲಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವಿದ್ಯಾರ್ಥಿಯೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A video of a female assistant teacher at Krishnapuri School sleeping in class has gone viral, sparking outrage and raising serious questions about accountability in the education system.#Meerut #EducationSystem #ViralVideo pic.twitter.com/v4WcpmEtfT
— Theindianbuzzz (@theindianbuzzz) April 8, 2025
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೂಲ ಶಿಕ್ಷಣ ಅಧಿಕಾರಿ (ಬಿಎಸ್‌ಎ) ಆಶಾ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಈ ವಿಷಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸಲುವಾಗಿ, ಬೇಜವಾಬ್ದಾರಿತನ ತೋರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬಬಾ ಸೆಕೆ ತಡೆಯೋಕೆ ಆಗಲ್ಲ, ಹೀಗೆ ಮಾಡಿದ್ರೆ ಮೈಯೆಲ್ಲಾ ಕೂಲ್ ಆಗುತ್ತೆ
ಈ ವಿಡಿಯೋವೊಂದು ಅಧಿಕ ವೀಕ್ಷಣೆ ಕಂಡಿದ್ದು, ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು,’ಶಿಕ್ಷಕರೇ ತಮ್ಮ ಕರ್ತವ್ಯ ಮರೆತರೆ ಮಕ್ಕಳ ಶಿಕ್ಷಣದ ಭವಿಷ್ಯ ಏನಾಗಬಹುದು’ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ತರಗತಿಯಲ್ಲಿ ಬೇಜವಾಬ್ದಾರಿ ತೋರುವ ಶಿಕ್ಷಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಮತ್ತೊಬ್ಬರು, ‘ಈ ರೀತಿ ಶಿಕ್ಷಕರು ಒಬ್ಬರು ಇದ್ದರೆ ಶಾಲೆ ಹಾಗೂ ಶಿಕ್ಷಣದ ಗುಣಮಟ್ಟ ಹೇಗೆ ಸುಧಾರಿಸುತ್ತಾರೆ. ಸಂಬಂಧ ಪಟ್ಟ ಶಿಕ್ಷಣ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಿ’ ಎಂದು ಕಾಮೆಂಟ್ ಮಾಡಿದ್ದಾರೆ. ಅವರಿಗೇಣಿ ಆಗಬೇಕು, ಸರ್ಕಾರಿ ಉದ್ಯೋಗ ಸಂಬಳ ಸಮಯಕ್ಕೆ ಸರಿಯಾಗಿ ಬರುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ