Viral : ಅಬ್ಬಬಾ ಸೆಕೆ ತಡೆಯೋಕೆ ಆಗಲ್ಲ, ಹೀಗೆ ಮಾಡಿದ್ರೆ ಮೈಯೆಲ್ಲಾ ಕೂಲ್ ಆಗುತ್ತೆ
ಸೋಶಿಯಲ್ ಮೀಡಿಯದಲ್ಲಿ ವನ್ಯ ಜೀವಗಳಿಗೆ ಸಂಬಂಧಪಟ್ಟ ವಿಡಿಯಗಳು ಆಗಾಗ ವೈರಲ್ ಆಗುವುದನ್ನು ಕಾಣಬಹುದು. ಅದರಲ್ಲಿಯೂ ಈ ಆನೆಗಳ ಮುದ್ದಾದ ವಿಡಿಯೋವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಜರಾಜನು ಕೆಸರು ನೀರನ್ನು ಮೈ ಮೇಲೆ ಎರಚಿಕೊಳ್ಳುತ್ತಿದ್ದು, ಈ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಆನೆಗಳ (elephant) ತುಂಟಾಟ ಒಂದೆರಡಲ್ಲ. ಅದರಲ್ಲಿ ಆನೆಮರಿಗಳ ತುಂಟಾಟವನ್ನು ಕಣ್ತುಂಬಿಸಿಕೊಳ್ಳುವ ಖುಷಿನೇ ಬೇರೆ. ಸಾಧುಜೀವಿಗಳಾದ ಈ ಪ್ರಾಣಿಗಳು ಯಾರ ತಂಟೆಗೂ ಹೋಗುವುದಿಲ್ಲ. ಆದರೆ ಒಮ್ಮೆ ಮದವೇರಿದರೆ ಅಷ್ಟು ಸಲೀಸಾಗಿ ಯಾರನ್ನು ಕೂಡ ಬಿಡುವುದಿಲ್ಲ. ಸೋಶಿಯಲ್ ಮೀಡಿಯಾ (social media) ದಲ್ಲಿ ಪುಟಾಣಿ ಆನೆಗಳ ತುಂಟಾಟ ಸೇರಿದಂತೆ ಇನ್ನಿತ್ತರ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ (viral) ಆಗುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ದಲ್ಲಿ ಗಜರಾಜನು ಮೈಯೆಲ್ಲಾ ಕೆಸರು ಮಾಡಿಕೊಂಡು ಕೆಸರು ನೀರಿ (mud water) ನಲ್ಲಿ ಆಟ ಆಡುತ್ತಿದೆ. ಈ ದೃಶ್ಯವು ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದ್ದು ಮೆಚ್ಚುಗೆಯ ಪ್ರತಿಕ್ರಿಯೆಗಳಾನ್ನಾಡಿದ್ದಾರೆ.
ಈ ವಿಡಿಯೋವನ್ನು elephantnaturepark ಮಾಡಿಕೊಳ್ಳಲಾಗಿದ್ದುದ್ದು, ಪುಟಾಣಿ ಗಜರಾಜನು ಕೆಸರಿನಲ್ಲಿ ಮೈಯನ್ನು ಮುಳುಗಿಸಿಕೊಂಡಿದೆ. ಅಷ್ಟೇ ಅಲ್ಲದೇ, ಕೆಸರು ನೀರಿನಲ್ಲಿ ಆಟ ಆಡುತ್ತಿದ್ದು, ಅಲ್ಲೇ ಪಕ್ಕದಲ್ಲಿ ಆನೆಗಳು ಇರುವುದನ್ನು ಗಮನಿಸಬಹುದು. ಮೈಯೆಲ್ಲಾ ಕೆಸರು ಮೆತ್ತಿಕೊಂಡು ಆಟ ಆಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಕೆಸರಿನೊಂದಿಗೆ ಮರಿಯಾನೆ ಖುಷಿ ಖುಷಿಯಿಂದಲೇ ಆಟ ಆಡುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಒಂದು ಬಟ್ಟೆಗಾಗಿ ನಡೆದೆ ಹೋಯ್ತು ಇಬ್ಬರು ಮಹಿಳೆಯರ ನಡುವೆ ಮಹಾಯುದ್ಧ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋಗೆ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ‘ಕೆಸರು ನೀರಿನಲ್ಲಿ ಒಳ್ಳೆಯ ಸಮಯ’ ಎಂದಿದ್ದಾರೆ. ಇನ್ನೊಬ್ಬರು, ‘ ಕೆಸರು ನೀರಿನಲ್ಲಿ ಆನೆಯ ಸ್ನಾನ ಎಷ್ಟು ಮುದ್ದಾಗಿದೆ ಈ ದೃಶ್ಯ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾಡಿನಲ್ಲಿ ಹೋಳಿ ಹಬ್ಬದ ಸೆಲೆಬ್ರೇಶನ್ ಎಂದು ತಮಾಷೆಯಾಗಿಯೇ ಬರೆದುಕೊಂಡಿದ್ದಾರೆ. ‘ಮರಿಯಾನೆಯ ವೀಕೆಂಡ್ ಫನ್ ಜೋರಾಗಿದೆ’ ಬಳಕೆದಾರರು ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ