Viral: ಒಂದು ಬಟ್ಟೆಗಾಗಿ ನಡೆದೆ ಹೋಯ್ತು ಇಬ್ಬರು ಮಹಿಳೆಯರ ನಡುವೆ ಮಹಾಯುದ್ಧ
ಹೆಣ್ಮಕ್ಕಳನ್ನು ಯಾವುದಾರೂ ಬೇಕಾದರೂ ನಿಯಂತ್ರಣ ಮಾಡಬಹುದು, ಆದರೆ ಅವರು ಒಂದು ವಸ್ತುವನ್ನು ಇಷ್ಟಪಟ್ಟರು ಎಂದರೆ, ಅದಕ್ಕಾಗಿ ಯುದ್ಧ ಮಾಡಿಯಾದರೂ ಪಡೆದುಕೊಳ್ಳುತ್ತಾರೆ. ಇಂತಹ ಅನೇಕ ಘಟನೆಗಳು ನಮ್ಮ ಕಣ್ಮುಂದೆ ನೋಡಿರುತ್ತೇವೆ. ಇದೀಗ ಇಂತಹದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಟ್ಟೆಗಾಗಿ ಇಬ್ಬರು ಮಹಿಳೆಯರು ಜಗಳ ಮಾಡಿಕೊಂಡಿದ್ದಾರೆ. ಈ ವಿಡಿಯೋ ದೆಹಲಿ ಸರೋಜಿನಿ ನಗರದಲ್ಲಿ ನಡೆದಿದೆ ಎಂದು ಹೇಳಲಾಗಿದೆ, ಈ ಬಗ್ಗೆ ಇಲ್ಲಿದೆ ವಿಡಿಯೋ

ಫ್ಯಾಷನ್ ಬಗ್ಗೆ ಹೆಚ್ಚು ಗೊತ್ತಿರುವುದು ಮಹಿಳೆಯರಿಗೆ ಮಾತ್ರ, ಅವರಷ್ಟು ಈ ಫ್ಯಾಷನ್ ವಿಷಯದಲ್ಲಿ ತಜ್ಞರು ಯಾರು ಇಲ್ಲ. ಒಂದು ಬಾರಿ ಇಷ್ಟ ಆಯಿತು ಅಂದ್ರೆ ಅದನ್ನು ಖರೀದಿ ಮಾಡದೇ ಬಿಡುವುದಿಲ್ಲ. ಅದರಲ್ಲೂ ಬಟ್ಟೆಯಲ್ಲಿ ಕೇಳಬೇಕಾ ಅಬ್ಬಾಬ್ಬ ಹುಚ್ಚು ಪ್ರೀತಿ ಅದರಲ್ಲಿ, ಬಟ್ಟೆ ಅಂಗಡಿ ಹೋದ್ರೆ ವಾಪಸ್ಸು ಬರುವುದು ಒಂದಿಷ್ಟು ಬಟ್ಟೆಗಳ ಜತೆಗೆ. ಇಲ್ಲೊಂದು ಘಟನೆ ನಡೆದಿದೆ. ಒಂದು ಬಟ್ಟೆಗಾಗಿ ಇಬ್ಬರು ಮಹಿಳೆಯರ ಮಧ್ಯೆ ಜೋರು ಜಗಳ ನಡೆದಿದೆ. ಇದೀಗ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ದೆಹಲಿಯ ಸರೋಜಿನಿ ನಗರದ (Sarojini Nagar) ಬಟ್ಟೆ ಮಾರುಕಟ್ಟೆ ಬಹಳ ಪ್ರಸಿದ್ಧ. ಒಂದು ಬಾರಿ ಯಾರಾದರೂ ದೆಹಲಿಗೆ ಹೋದರೆ ಈ ಬಟ್ಟೆಯಂಗಡಿಗೆ ಹೋಗಲೇಬೇಕು. ಇಲ್ಲಿ ಈ ಇಬ್ಬರು ಮಹಿಳೆಯರ ನಡುವೆ ಬಟ್ಟೆಗಾಗಿ ಯುದ್ಧ ನಡೆದಿದೆ. ಒಂದೇ ರೀತಿಯ ಬಟ್ಟೆಗಳನ್ನು ಖರೀದಿಸುವ ಸಲುವಾಗಿ ಈ ಜಗಳ ಶುರುವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಾತಿನಿಂದ ಶುರುವಾದ ಈ ಜಗಳ ಇಬ್ಬರ ಕೈ-ಕೈ ಮಿಲಾಯಿಸಲು ಪ್ರಾರಂಭಿಸಿದ್ದಾರೆ.
ಈ ವಿಡಿಯೋದಲ್ಲಿ ತೋರಿಸುವಂತೆ, ಇಬ್ಬರು ಮಹಿಳೆಯರು ಒಂದೇ ಬಟ್ಟೆಗಾಗಿ ಜಗಳವಾಡುತ್ತಿರುವುದನ್ನು ಕಾಣಬಹುದು. ಈ ಇಬ್ಬರ ಜಗಳವನ್ನು ನೋಡಿ ಅಲ್ಲಿ ನಿಂತಿದ್ದ ಅನೇಕರು ಈ ದೃಶ್ಯವನ್ನು ನೋಡಿ ಆನಂದಿಸಿದ್ದಾರೆ. ಇನ್ನು ಕೆಲವರು ಈ ಜಗಳವನ್ನು ವಿಡಿಯೋ ಮಾಡುವುದನ್ನು ಕಾಣಬಹುದು. ಆದರೆ ಈ ವಿಡಿಯೋ ದೆಹಲಿಯಲ್ಲೇ ನಡೆದಿದೆಯೇ ಎಂಬುದ ಇನ್ನು ಸ್ಪಷ್ಟವಾಗಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ ಇನ್ನು ಕೆಲವರು ಇದನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ: ಬಸ್ಸಿನೊಳಗೆ ಕುಳಿತು ಶೇವಿಂಗ್ ಮಾಡುತ್ತಿರುವ ವ್ಯಕ್ತಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
आदमी अगर किसी दुकान पर जाकर कोई कपड़ा देखे और उसे कोई दूसरा भाई हाथ भी लगा दे तो फ़ोरन कहता है- भाई तुम ले लो ये।
इधर दिल्ली के सरोजनी नगर मार्केट में हमारी महिला शक्ति दुकान पर सेम कपड़ा ख़रीदने के लिए कपड़ा युद्ध छेड़े हुए है 😂😂 pic.twitter.com/geAtCS0aiE
— Baliyan (@Baliyan_x) April 9, 2025
ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಕಪಾಳಕ್ಕೆ ಹೊಡೆದಿರುವುದು ಕಾಣಬಹುದು. ಇನ್ನೊಂದು ಮಹಿಳೆ ನಾನೇನು ಕಡಿಮೆ ಇಲ್ಲ ಎಂದು ಆಕೆಯ ಮೇಲೆ ಪ್ರತಿ ದಾಳಿ ಮಾಡಿದ್ದಾರೆ. ಈ ಇಬ್ಬರ ಜಗಳವನ್ನು ಬಿಡಿಸಲು ಮಹಿಳೆಯೊಬ್ಬರು ಮಧ್ಯೆ ಬಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಮಹಿಳೆ ಬಂದು ಮಹಿಳೆಯ ಜುಡು ಹಿಡಿದು ಎಳೆದಾಡಿದ್ದಾರೆ. ಇವರ ಜಗಳವನ್ನು ಕಂಡು ಬಿಡಿಸಲು ಬಂದು ಮಹಿಳೆ ಬಿಡಿ ಬಿಡಿ ಎಂದು ಆ ಇಬ್ಬರು ಮಹಿಳೆಯರು ಜಗಳವನ್ನು ಮತ್ತಷ್ಟು ಜೋರಾಗಿ ಮಾಡಿದ್ದಾರೆ. ಅಲ್ಲಿದ್ದ ಬಟ್ಟೆಗಳೆಲ್ಲ ಚಲ್ಲಾಪಿಲ್ಲಿ ಮಾಡಿದ್ದಾರೆ. ಕೊನೆಗೆ ಎಲ್ಲರೂ ಬಂದು ಅವರಿಬ್ಬರ ಜಗಳ ನಿಲ್ಲಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ