Viral : ಬಸ್ಸಿನೊಳಗೆ ಕುಳಿತು ಶೇವಿಂಗ್ ಮಾಡುತ್ತಿರುವ ವ್ಯಕ್ತಿ, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋ ನೋಡಿದಾಗ ನಗಬೇಕೋ, ಅಳಬೇಕೋ ತಿಳಿಯುವುದಿಲ್ಲ. ಕೆಲ ವ್ಯಕ್ತಿಯನ್ನು ನೋಡಿದಾಗ ಇಂತಹವರು ನಮ್ಮ ಸುತ್ತಮುತ್ತಲಿನಲ್ಲಿ ಇರ್ತಾರ ಎಂದೆನಿಸುತ್ತದೆ. ಕೆಲವರ ಬುದ್ಧಿವಂತಿಕೆಯನ್ನು ಕಂಡು ಮೆಚ್ಚಿಕೊಳ್ಳುತ್ತೇವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಬಸ್ಸಿನಲ್ಲಿಯೇ ಕುಳಿತು ಶೇವಿಂಗ್ ಮಾಡುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಗಡ್ಡ (beard) ಹಾಗೂ ಮೀಸೆ (mustache) ಎನ್ನುವುದು ಪುರುಷರ ಸೌಂದರ್ಯ (beauty) ವನ್ನು ಹೆಚ್ಚಿಸುತ್ತದೆ. ಹೀಗಾಗಿ ಹೆಚ್ಚಿನವರು ಉದ್ದನೆ ಗಡ್ಡ ಬಿಡಲು ಇಷ್ಟ ಪಡುತ್ತಾರೆ. ಅದಲ್ಲದೇ, ಚೆನ್ನಾಗಿ ಕಾಣಲೆಂದು ಪುರುಷರು ಹೆಚ್ಚಾಗಿ ಕ್ಷೌರದಂಗಡಿಯಲ್ಲಿ ಗಡ್ಡವನ್ನು ಟ್ರಿಮ್ ಮಾಡಿಸುತ್ತಾರೆ. ಒಂದು ವೇಳೆ ಸಮಯ (time) ವಿಲ್ಲವೆಂದರೆ ಮನೆಯಲ್ಲೇ ಗಡ್ಡ ಮೀಸೆ ಸೆಟ್ ಮಾಡುವುದನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯೂ ಬಸ್ಸಿನಲ್ಲಿ ಕುಳಿತು ಶೇವಿಂಗ್ ಮಾಡುವ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ ಕ್ಯಾಮೆರಾ (mobile camera) ದಲ್ಲಿ ಸೆರೆಹಿಡಿದ್ದಾರೆ. ಸಿಕ್ಕ ಸ್ವಲ್ಪ ಸಮಯವನ್ನು ಸದುಪಯೋಗ ಪಡಿಸಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಇದಕ್ಕೆ ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
Navvarababu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಬಸ್ಸಿನೆಸ್ಸ್ ಕ್ಲಾಸ್ ಹೆಸರಿನ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಕುಳಿತುಕೊಂಡಿದ್ದಾರೆ. ಬಸ್ ನಿಂತುಕೊಂಡಿದ್ದು ವ್ಯಕ್ತಿಯೊಬ್ಬನು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾನೆ. ಕ್ಯಾಮೆರಾವನ್ನು ವ್ಯಕ್ತಿಯೊಬ್ಬನು ಕಿ ಟಕಿಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿದ್ದಾನೆ. ಬಸ್ಸಿನ ಅಪ್ಪರ್ ಸೀಟಿನಲ್ಲಿ ಕಿಟಕಿ ಪಕ್ಕ ಕುಳಿತಿರುವ ವ್ಯಕ್ತಿಯೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕ್ಷೌರ ಮಾಡುತ್ತಿದ್ದಾನೆ.
ಇದನ್ನೂ ಓದಿ: ಮೆಟ್ರೋದಲ್ಲಿ ಮೊಟ್ಟೆ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ಯುವಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಇದನ್ನು ನೋಡಿದ ಬಳಕೆದಾರರೊಬ್ಬರು ತಮಾಷೆಯಾಗಿ ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ‘ಸಮಯವನ್ನು ಹೇಗೆ ಬಳಸಬೇಕೆಂದು ಈ ವ್ಯಕ್ತಿಯಿಂದಲೇ ಕಲಿಯಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಸಮಯ ಬಹಳ ಮುಖ್ಯ, ಅದನ್ನು ವ್ಯರ್ಥ ಮಾಡಲೇಬೇಡಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ವ್ಯಕ್ತಿಯೂ, ನಮ್ಮ ಸುತ್ತಮುತ್ತ ಇಂತಹ ಪ್ರತಿಭೆಗಳು ಇರುತ್ತವೆ ಎಂದಿದ್ದಾರೆ. ಇನ್ನೊರ್ವ ಬಳಕೆದಾರರು, ‘ಈ ವ್ಯಕ್ತಿಗೆ ಮ್ಯಾನೇಜರ್ ಶೇವಿಂಗ್ ಮಾಡದೆ ಆಫೀಸಿಗೆ ಬರಬೇಡಿ ಎಂದು ಹೇಳಿರಬೇಕು’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ