Viral : ಮೆಟ್ರೋದಲ್ಲಿ ಮೊಟ್ಟೆ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ಯುವಕ
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಹೀಗೆ ನಾನಾ ವಿಚಾರಗಳಿಂದಲೇ ಮೆಟ್ರೋ ಸುದ್ದಿಯಾಗುತ್ತಿರುತ್ತದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಯುವಕನೊಬ್ಬನು ಮೊಟ್ಟೆ ತಿಂದು 'ಮದ್ಯ' ಸೇವಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಮೆಟ್ರೋದೊಳಗೆ ಆಹಾರ ಪದಾರ್ಥಗಳ ಸೇವನೆ ಹಾಗೂ ಮದ್ಯ ನಿಷೇಧವಿದ್ದರೂ ಈ ಕೃತ್ಯ ಎಸಗಿರುವುದಕ್ಕೆ ಈ ಯುವಕನ ವಿರುದ್ಧ ದೆಹಲಿ ಪೊಲೀಸರು ಕ್ರಮ ಕೈಗೊಂಡು ಬಂಧಿಸಿದ್ದಾರೆ.

ದೆಹಲಿ, ಏಪ್ರಿಲ್ 10: ದೆಹಲಿ (dehli) ಮೆಟ್ರೋ (metro) ದಲ್ಲಿ ಪ್ರಯಾಣಿಕರು ಮಾಡುವಂತಹ ಅವಾಂತರಗಳು, ಕಿತಾಪತಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಹೌದು ದೆಹಲಿ ಮೆಟ್ರೋ ರೈಲು ನಿಗಮವು ಕೋಚ್ (coach) ಗಳ ಒಳಗೆ ತಿನ್ನುವುದು ಮತ್ತು ಕುಡಿಯಬಾರದು ಎನ್ನುವ ನಿಯಮವೇ ಇದೆ. ಆದರೆ ಒಂದೆರಡು ದಿನಗಳ ಹಿಂದೆಯಷ್ಟೇ ಯುವಕನೊಬ್ಬನು ಮೆಟ್ರೋದಲ್ಲಿ ಮೊಟ್ಟೆ (egg) ತಿಂದು ಹಾಗೂ ಮದ್ಯ (alcohol) ಸೇವಿಸುವ ವಿಡಿಯೋವೊಂದು ವೈರಲ್ ಆದ ಬೆನ್ನಲೇ ಈ ಘಟನೆಗೆ ಸಂಬಂಧ ಪಟ್ಟಂತೆ ದೆಹಲಿ ಪೊಲೀಸರು ಆರೋಪಿ ಆಕಾಶ್ ಕುಮಾರ್ (akash kumar) ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಕಾರ್ಡೂಮಾ ಮೆಟ್ರೋ ನಿಲ್ದಾಣದ ಸೀನಿಯರ್ ಸ್ಟೇಷನ್ ಮ್ಯಾನೇಜರ್ ಅಮರ್ ದೇವ್ ನೀಡಿದ ದೂರಿನ ಬೆನ್ನಲೇ ಆರೋಪಿ ಶಹದಾರಾ ನಿವಾಸಿ ಆಕಾಶ್ ಕುಮಾರ್‌ನನ್ನು ಬುರಾರಿಯಲ್ಲಿ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. Dehli police ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆರೋಪಿಯೂ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದು ಆದರೆ ತಾನು ಮದ್ಯ ಸೇವಿಸುತ್ತಿರಲಿಲ್ಲ. ಅದು ಪಾನೀಯ ಎಂದು ಸ್ಪಷ್ಟಪಡಿಸಿದ್ದಾನೆ. ಹೌದು, ಬಂಧಿತ ಆರೋಪಿ ಆಕಾಶ್ ಕುಮಾರ್ ನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆಯಲ್ಲಿ ಮಾರ್ಚ್ 23 ರಂದು ರಾತ್ರಿ 10 ಗಂಟೆ ಸುಮಾರಿಗೆ ವೆಲ್ಕಮ್ ನಿಂದ ಕರ್ಕಾರ್ಡೂಮಾ ಕೋರ್ಟ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುವಾಗ ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅದಲ್ಲದೇ, ಬಾಟಲಿಯಲ್ಲಿ ಕೇವಲ ತಂಪು ಪಾನೀಯವಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯಲು ತಾನು ಈ ಕೃತ್ಯವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಯುವಕನ ವಿರುದ್ಧದೆಹಲಿ ಮೆಟ್ರೋ ರೈಲ್ವೆ ಕಾಯ್ದೆ ಸೆಕ್ಷನ್ 59 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯ ಸೊಂಟಕ್ಕೆ ಕೈ ಹಾಕಿದ ವ್ಯಕ್ತಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Eggs & “Alcohol” in the Metro? That’s not breakfast – that’s a Breach !!
Break the rules, Face the consequences, Rules aren’t suggestions: They’re the law.#DPUpdates pic.twitter.com/CP2P5fDFiW
— Delhi Police (@DelhiPolice) April 9, 2025
ವೈರಲ್ ಆದ ವಿಡಿಯೋದಲ್ಲಿ, ಮೆಟ್ರೋದಲ್ಲಿ ಯುವಕನು ಗ್ಲಾಸ್ ನಲ್ಲಿದ್ದ ಮದ್ಯ ಕುಡಿಯುತ್ತ, ಬೇಯಿಸಿದ ಮೊಟ್ಟೆಯನ್ನು ಒಡೆಯಲು ಕೋಚ್‌ನ ಹ್ಯಾಂಡ್ರೈಲ್ ಬಳಸಿರುವುದನ್ನು ಗಮನಿಸಬಹುದು. ಆ ಬಳಿಕ ಬ್ಯಾಗ್‌ನಿಂದ ಒಂದು ಕವರ್ ತೆಗೆದುಕೊಂಡು ಅದಕ್ಕೆ ಮೊಟ್ಟೆಯ ಸಿಪ್ಪೆಯನ್ನು ಹಾಕಿದ್ದಾನೆ. ಈತನ ಕೈಯಲ್ಲಿದ್ದ ಮೊಟ್ಟೆಯ ತುಂಡುಗಳು ಕೋಚ್‌ನ ನೆಲದ ಮೇಲೆ ಬೀಳುತ್ತಿದ್ದು, ಸ್ವಚ್ಛತೆಗೂ ಗಮನ ಹರಿಸಲಿಲ್ಲ. ಯಾವುದಕ್ಕೂ ತಲೆ ಕೆಡಿಸದೇ ಮೊಟ್ಟೆ ತಿನ್ನುತ್ತಾ ಮದ್ಯ ಸೇವಿಸುತ್ತಿರುವುದನ್ನು ಕಾಣಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Eggs & “Alcohol” in the Metro? That’s not breakfast – that’s a Breach !!
Break the rules, Face the consequences, Rules aren’t suggestions: They’re the law.#DPUpdates pic.twitter.com/CP2P5fDFiW
— Delhi Police (@DelhiPolice) April 9, 2025
Published On - 12:38 pm, Thu, 10 April 25